ಮಡಿಕೇರಿ, ಸೆ. ೨೩: ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಅವರುಗಳ ಜನ್ಮ ದಿನದ ಪ್ರಯುಕ್ತ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಬ್ರಾಹ್ಮಣ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
೪ ರಿಂದ ೭ ವರ್ಷ ವಯಸ್ಸಿನ ಮಕ್ಕಳಿಗೆ ೪ ಸಾಲಿನ ಸಂಸ್ಕೃತ ಶ್ಲೋಕವನ್ನು ನಿರರ್ಗಳವಾಗಿ, ಸ್ಪಷ್ಟವಾಗಿ (ಓಂಕಾರದೊAದಿಗೆ) ಪಠಿಸುವ ಸ್ಪರ್ಧೆ ಏರ್ಪಡಿಸಲಾಗಿದ್ದು, ಶ್ಲೋಕ ಪಠಿಸಲು ೨ ನಿಮಿಷಗಳÀ ಕಾಲಾವಕಾಶವಿರುತ್ತದೆ.
೮ ರಿಂದ ೧೦ ವರ್ಷದ ಮಕ್ಕಳಿಗೆ ಸ್ವಾತಂತ್ರö್ಯ ಹೋರಾಟಗಾರರ ಯಾವುದಾದರೂ ಪಾತ್ರವನ್ನು ತಕ್ಕುದಾದ ವೇಷಭೂಷಣ, ಮಾತುಗಾರಿಕೆಯೊಂದಿಗೆ ಪ್ರದರ್ಶಿಸುವುದು. ಪ್ರದರ್ಶನಕ್ಕೆ ೩ ನಿಮಿಷಗಳ ಕಾಲಾವಕಾಶವಿರುತ್ತದೆ.
ಸ್ಪರ್ಧೆಗಳನ್ನು ತಾಲೂಕುವಾರು ಹಮ್ಮಿಕೊಳ್ಳಲಾಗಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ನೀಡಲಾಗುತ್ತದೆ. ಎರಡೂ ಸ್ಪರ್ಧೆಗಳಲ್ಲಿ ಮಕ್ಕಳ ಪ್ರದರ್ಶನವನ್ನು ವೀಡಿಯೋಕರಿಸಿ ತಾ. ೨ ರ ಮಧ್ಯರಾತ್ರಿ ೧೨ ಗಂಟೆಯ ಒಳಗಾಗಿ ವಾಟ್ಸಾö್ಯಪ್ ಸಂಖ್ಯೆಗಳಾದ ೯೮೮೬೪೪೩೨೧೬ (ರಮಾ ರವೀಂದ್ರ), ೯೭೪೦೮೭೧೮೨೭ (ಮಮತಾ ಶಾಸ್ತಿç), ೯೪೪೯೯೫೧೯೯೩ (ವೀಣಾ ಹೊಳ್ಳ), ೯೮೪೫೦೨೯೩೨೨ (ಆಶಾ ಮೂಗೂರ್) ಈ ಯಾವುದಾದರೊಂದು ವಾಟ್ಸಾö್ಯಪ್ ಸಂಖ್ಯೆಗೆ ಕಳುಹಿಸಿಕೊಡಬೇಕಾಗಿ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಪ್ರಕಟಣೆ ತಿಳಿಸಿದೆ. ಬಹುಮಾನವನ್ನು ಶತಮಾನೋತ್ಸವ ಆಚರಣೆಯ ಸಂದರ್ಭ ನೀಡಲಾಗುವುದು.