ಮಡಿಕೇರಿ, ಸೆ. ೨೩: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷ ಗಳಿಂದ ವಿವಿಧ ವಸತಿ ಯೋಜಗಳಡಿ ಯಲ್ಲಿ ೧೧ ಮನೆಗಳು ಮಂಜೂರಾಗಿ ರುವುದಾಗಿ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ಅವರು ಮಾಹಿತಿ ನೀಡಿದ್ದಾರೆ. ಶಾಸಕ ರಂಜನ್ ಅವರು ಈ ಕುರಿತು ಪ್ರಶ್ನಿಸಿದ್ದು, ವೀರಾಜಪೇಟೆಯಲ್ಲಿ ೨೦೧೮-೧೯ರಲ್ಲಿ ಬಸವವಸತಿ ಯೋಜನೆ ಅಡಿ ೬ ಮನೆಗಳು, ೨೦೧೯-೨೦ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿ ೨ ಮನೆಗಳು ಹಾಗೂ ಮಡಿಕೇರಿಯಲ್ಲಿ ದೇವರಾಜ್ ಅರಸ್ ವಸತಿ ಯೋಜನೆಯಡಿ ೨೦೨೦-೨೧ ಸಾಲನಲ್ಲಿ ೩ ಮನೆಗಳು ಸೇರಿ ಒಟ್ಟು ೧೧ ಮನೆಗಳು ೩ ವರ್ಷಗಳ ಕಾಲದಲ್ಲಿ ಮಂಜೂರಾಗಿರುವುದಾಗಿ ಸಚಿವರು ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯಲ್ಲಿ ನಗರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರ ಸಂಖ್ಯೆ ಎಷ್ಟು? ಇಂತವರಿಗೆ ಸರಕಾರ ನಿವೇಶನ ಮಂಜೂರು ಮಾಡಿದೆಯ ಎಂದು ಶಾಸಕರ ಪ್ರಶ್ನೆಗೆ ಕೂಡ ಸಚಿವರು ಉತ್ತರಿಸಿದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಜಿಲ್ಲೆಯ ಪಟ್ಟಣ ಪಂಚಾಯಿತಿಗಳು ಹಾಗೂ ನಗರ ಸಭೆಗಳಲ್ಲಿ ಗುರುತಿಸಿರುವ ೩,೧೨೪ ನಿವೇಶನಗಳ ಪೈಕಿ ೮೨೬ ಫಲಾನುಭವಿಗಳಿಗೆ ವಸತಿ ಸೌಲಭ್ಯಗಳನ್ನು ಒದಗಿಸಿರುವುದಾಗಿ ಸಚಿವರು ಮಾಹಿತಿ ನೀಡಿದರು.

ಕುಶಾಲನಗರ ಪ.ಪಂ.ನಲ್ಲಿ ೬೧೦ ನಿವೇಶನ ರಹಿತರು ಹಾಗೂ ೪೪೬ ವಸತಿ ರಹಿತರು ಇದ್ದು, ೩೬೭ ಮನೆಗಳ ಮಂಜೂರಾಗಿವೆ. ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ೧,೬೮೦ ನಿವೇಶನ ರಹಿತರು ಹಾಗೂ ೪೩೫ ವಸತಿ ರಹಿತರನ್ನು ಗುರುತಿಸಿದ್ದು, ೧೫೨ ಮನೆಗಳನ್ನು ಮಂಜೂರು ಮಾಡಲಾಗಿದೆ. ಸೋಮವಾರಪೇಟೆ ಪ.ಪಂ.ನಲ್ಲಿ ೩೩೯ ನಿವೇಶನ ರಹಿತರು ಹಾಗೂ ೨೭೮ ವಸತಿ ರಹಿತರು ಇದ್ದು, ೧೧೪ ಮನೆಗಳನ್ನು ಮಂಜೂರು ಮಾಡಲಾಗಿದೆ. ವೀರಾಜಪೇಟೆ ಪ.ಪಂ. ವ್ಯಾಪ್ತಿಯಲ್ಲಿ ೪೯೫ ನಿವೇಶನ ರಹಿತರು ಹಾಗೂ ೪೭೪ ವಸತಿ ರಹಿತರು ಇದ್ದು, ೧೯೩ ಮನೆಗಳನ್ನು ಸೇರಿದಂತೆ ಇದುವರೆಗೆ ಒಟ್ಟು ೮೨೬ ಮನೆಗಳು ಮಂಜೂರು ಮಾಡಲಾಗಿರುವುದಾಗಿ ಸೋಮಣ್ಣ ಮಾಹಿತಿ ನೀಡಿದರು.