*ಗೋಣಿಕೊಪ್ಪ, ಸೆ. ೨೩: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಕಟಕೇರಿ ಗ್ರಾಮದ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಗಿಡ ಗÀÀÀÀಂಟಿಗಳು ತುಂಬಿ ವಾಹನ ಸಂಚಾರಕ್ಕೆ ತೊಡಕಾಗಿದ್ದ ಸಮಸ್ಯೆಯನ್ನು ಸರಿಪಡಿಸಲಾಗಿದೆ.

ಲೋಕೋಪಯೋಗಿ ಇಲಾಖೆ ವತಿಯಿಂದ ಬಿರುನಾಣಿ ಮತ್ತು ಪರಕಟಕೇರಿ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ತುಂಬಿಕೊAಡಿದ್ದ ಕಾಡುಗಳನ್ನು ಕಡಿದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸಮಸ್ಯೆಯ ಕುರಿತು ‘ಶಕ್ತಿ’ಯಲ್ಲಿ ವರದಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಸಂದರ್ಭ ಎ.ಡಬ್ಲೂ÷್ಯಡಿ ಸುರೇಶ್, ಸಹಾಯಕ ಇಂಜಿನಿಯರ್ ನವೀನ್, ಬಿರುನಾಣಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಅಣ್ಣಾಳಮಾಡ ರಾಯ್ ಹಾಜರಿದ್ದರು.