ಶನಿವಾರಸಂತೆ, ಸೆ. ೨೧: ಸಮೀಪದ ಕೊಡ್ಲಿಪೇಟೆಯ ಕಿರಿಕೊಡ್ಲಿ ಗ್ರಾಮದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶನಿವಾರಸಂತೆ ಠಾಣೆಯ ಕಿರಿಕೊಡ್ಲಿ, ಜನಾರ್ಧನಹಳ್ಳಿ ಗ್ರಾಮಗಳ ಪೊಲೀಸ್ ಸಿಬ್ಬಂದಿ ಪ್ರದೀಪ್ ಕುಮಾರ್ ಅವರು ಇಆರ್ಎಸ್ಎಸ್ (ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್) ೧೧೨ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೂನಿಯರ್ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ರಬ್ ವಹಿಸಿದ್ದರು. ಎಎಸ್ಐ ಕೃಷ್ಣೇಗೌಡ ಇದ್ದರು.