ಕೊಡಗು ವೀರರನಾಡು, ಗಂಡುಗಲಿಗಳ ಬೀಡು. ಈ ಜಿಲ್ಲೆಯ ಹೆಚ್ಚಿನ ಮಂದಿ ಸೈನಿಕರಾಗಿ ಭಾರತ ಮಾತೆಯ ಸೇವೆ ಮಾಡಿದ್ದಾರೆ. ಮಾಡುತ್ತಲೂ ಇದ್ದಾರೆ, ಅದರಲ್ಲೂ ಕ್ಷತ್ರಿಯ ಧರ್ಮದ ಕೊಡವರು ಯುದ್ಧದಲ್ಲಿ ಮರಣವನ್ನಪ್ಪಿದರೆ ಸ್ವರ್ಗಪ್ರಾಪ್ತಿ ಎಂದು ನಂಬಿದವರು. ಮನೆಯಲ್ಲಿ ಬದುಕಿ ಬಾಳುವಷ್ಟಿದ್ದರೂ ಅನೇಕರು ಇಂದೂ ಭಾರತೀಯ ಸೇನೆಯಲ್ಲಿ ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ. ಫೀಲ್ಡ್ ಮಾರ್ಷಲ್ ಕೊಡಂದೆರ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಿಂದ ಮೊದಲ್ಗೊಂಡು ಅನೇಕ ವೀರಯೋಧರು ಭಾರತಮಾತೆಯ ಸೇವೆಯಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ.

ಇAತಹ ವೀರಪರಂಪರೆಯ ಸಾಲಿಗೆ ಸೇರಿರುವ ಮತ್ತೊಬ್ಬ ಅಮರಯೋಧ ನಾಯಕ್ ದಿ. ಕೂಕಂಡ ಪೊನ್ನಪ್ಪ (ಮಣಿ). ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಹಳ್ಳಿಗಟ್ಟು ಗ್ರಾಮದವರು. ಸ್ವಾತಂತ್ರ ಹೋರಾಟಗಾರ ದಿವಂಗತ ನಂಜಪ್ಪ - ಗಂಗಮ್ಮ ದಂಪತಿಯ ಹಿರಿಯ ಪುತ್ರ.

ಪೊನ್ನಂಪೇಟೆಯಲ್ಲಿ ಶಾಲಾ ದಿನಗಳನ್ನು ಆರಂಭಿಸಿ ಉತ್ತಮ ಕ್ರೀಡಾಪಟು ಮತ್ತು ಅಥ್ಲೆಟಿಕ್‌ನಲ್ಲಿ ಮುಂದೆ ಇದ್ದ ಪೊನ್ನಪ್ಪ ತಮ್ಮ ೧೮ನೇ ವಯಸ್ಸಿನಲ್ಲಿ ಅಂದರೆ ೧೯೫೭ ರಲ್ಲಿ ಭಾರತಿಯ ಸೇನಾ ಪಡೆಯ ಒಂದು ವಿಭಾಗವಾದ ಮೆಡ್ರಾಸ್ ರೆಜಿಮೆಂಟ್‌ನ್ನು ಸೇರಿ ವೆಲ್ಲಿಂಗ್ಟನ್‌ನಲ್ಲಿ ತಮ್ಮ ತರಬೇತಿಯನ್ನು ಪಡೆದುಕೊಂಡರು. ತರಬೇತಿ ಮುಗಿಯುತ್ತಿದ್ದಂತೆ ದೇಶದಲ್ಲಿ ಪ್ರಾರಂಭವಾಗಿದ್ದ ನಾಗಲ್ಯಾಂಡ್ ಹೋರಾಟವನ್ನು ನಿಯಂತ್ರಿಸುವ ಕರ್ತವ್ಯದೊಂದಿಗೆ ದೇಶ ಸೇವೆಯ ಕಾರ್ಯಕ್ಕೆ ಮುಂದಾದ ಪೊನ್ನಪ್ಪ ನಂತರ ಒಂದರ ಹಿಂದೆ ಮತ್ತೊಂದರAತೆ ಬಂದ ಭಾರತ - ಚೀನಾ ಯುದ್ಧದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಸಂದರ್ಭ ಇವರು ಯುದ್ಧ ಭೂಮಿಯಲ್ಲಿ ಕಾಣೆಯಾಗುತ್ತಾರೆ.

ಆ ಸಮಯದಲ್ಲಿ ಸೇನಾ ಮುಖ್ಯಸ್ಥರು ಇವರು ಯುದ್ಧದಲ್ಲಿ ಮರಣವನ್ನಪ್ಪಿದ್ದಾರೆ ಎಂಬ ಸಂದೇಶವನ್ನು ಕೂಕಂಡ ಪೊನ್ನಪ್ಪನವರ ಸಂಸಾರಕ್ಕೆ ಮಾಹಿತಿ ರವಾನಿಸಿ ಬಿಡುತ್ತಾರೆ. ಕುಟುಂಬ ಶೋಕಮಡುಗಟ್ಟಿದರೆ ನೆಂಟರಿಷ್ಟರು ಸಂಸಾರವನ್ನು ಸಂತೈಸುವ ಕಾರ್ಯದಲ್ಲಿರಬೇಕಾದರೆ, ಇವರ ಸ್ನೇಹಿತನ ಮುಖಾಂತರ ಇವರು ಬದುಕಿರುವ ವಿಷಯ ತಿಳಿಯುತ್ತದೆ. ಕೊಡಗು ವೀರರನಾಡು, ಗಂಡುಗಲಿಗಳ ಬೀಡು. ಈ ಜಿಲ್ಲೆಯ ಹೆಚ್ಚಿನ ಮಂದಿ ಸೈನಿಕರಾಗಿ ಭಾರತ ಮಾತೆಯ ಸೇವೆ ಮಾಡಿದ್ದಾರೆ. ಮಾಡುತ್ತಲೂ ಇದ್ದಾರೆ, ಅದರಲ್ಲೂ ಕ್ಷತ್ರಿಯ ಧರ್ಮದ ಕೊಡವರು ಯುದ್ಧದಲ್ಲಿ ಮರಣವನ್ನಪ್ಪಿದರೆ ಸ್ವರ್ಗಪ್ರಾಪ್ತಿ ಎಂದು ನಂಬಿದವರು. ಮನೆಯಲ್ಲಿ ಬದುಕಿ ಬಾಳುವಷ್ಟಿದ್ದರೂ ಅನೇಕರು ಇಂದೂ ಭಾರತೀಯ ಸೇನೆಯಲ್ಲಿ ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ. ಫೀಲ್ಡ್ ಮಾರ್ಷಲ್ ಕೊಡಂದೆರ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಿಂದ ಮೊದಲ್ಗೊಂಡು ಅನೇಕ ವೀರಯೋಧರು ಭಾರತಮಾತೆಯ ಸೇವೆಯಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ.

ಇAತಹ ವೀರಪರಂಪರೆಯ ಸಾಲಿಗೆ ಸೇರಿರುವ ಮತ್ತೊಬ್ಬ ಅಮರಯೋಧ ನಾಯಕ್ ದಿ. ಕೂಕಂಡ ಪೊನ್ನಪ್ಪ (ಮಣಿ). ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಹಳ್ಳಿಗಟ್ಟು ಗ್ರಾಮದವರು. ಸ್ವಾತಂತ್ರ ಹೋರಾಟಗಾರ ದಿವಂಗತ ನಂಜಪ್ಪ - ಗಂಗಮ್ಮ ದಂಪತಿಯ ಹಿರಿಯ ಪುತ್ರ.

ಪೊನ್ನಂಪೇಟೆಯಲ್ಲಿ ಶಾಲಾ ದಿನಗಳನ್ನು ಆರಂಭಿಸಿ ಉತ್ತಮ ಕ್ರೀಡಾಪಟು ಮತ್ತು ಅಥ್ಲೆಟಿಕ್‌ನಲ್ಲಿ ಮುಂದೆ ಇದ್ದ ಪೊನ್ನಪ್ಪ ತಮ್ಮ ೧೮ನೇ ವಯಸ್ಸಿನಲ್ಲಿ ಅಂದರೆ ೧೯೫೭ ರಲ್ಲಿ ಭಾರತಿಯ ಸೇನಾ ಪಡೆಯ ಒಂದು ವಿಭಾಗವಾದ ಮೆಡ್ರಾಸ್ ರೆಜಿಮೆಂಟ್‌ನ್ನು ಸೇರಿ ವೆಲ್ಲಿಂಗ್ಟನ್‌ನಲ್ಲಿ ತಮ್ಮ ತರಬೇತಿಯನ್ನು ಪಡೆದುಕೊಂಡರು. ತರಬೇತಿ ಮುಗಿಯುತ್ತಿದ್ದಂತೆ ದೇಶದಲ್ಲಿ ಪ್ರಾರಂಭವಾಗಿದ್ದ ನಾಗಲ್ಯಾಂಡ್ ಹೋರಾಟವನ್ನು ನಿಯಂತ್ರಿಸುವ ಕರ್ತವ್ಯದೊಂದಿಗೆ ದೇಶ ಸೇವೆಯ ಕಾರ್ಯಕ್ಕೆ ಮುಂದಾದ ಪೊನ್ನಪ್ಪ ನಂತರ ಒಂದರ ಹಿಂದೆ ಮತ್ತೊಂದರAತೆ ಬಂದ ಭಾರತ - ಚೀನಾ ಯುದ್ಧದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಸಂದರ್ಭ ಇವರು ಯುದ್ಧ ಭೂಮಿಯಲ್ಲಿ ಕಾಣೆಯಾಗುತ್ತಾರೆ.

ಆ ಸಮಯದಲ್ಲಿ ಸೇನಾ ಮುಖ್ಯಸ್ಥರು ಇವರು ಯುದ್ಧದಲ್ಲಿ ಮರಣವನ್ನಪ್ಪಿದ್ದಾರೆ ಎಂಬ ಸಂದೇಶವನ್ನು ಕೂಕಂಡ ಪೊನ್ನಪ್ಪನವರ ಸಂಸಾರಕ್ಕೆ ಮಾಹಿತಿ ರವಾನಿಸಿ ಬಿಡುತ್ತಾರೆ. ಕುಟುಂಬ ಶೋಕಮಡುಗಟ್ಟಿದರೆ ನೆಂಟರಿಷ್ಟರು ಸಂಸಾರವನ್ನು ಸಂತೈಸುವ ಕಾರ್ಯದಲ್ಲಿರಬೇಕಾದರೆ, ಇವರ ಸ್ನೇಹಿತನ ಮುಖಾಂತರ ಇವರು ಬದುಕಿರುವ ವಿಷಯ ತಿಳಿಯುತ್ತದೆ. ೧೯೫೭ ರಿಂದ ೧೯೬೫ ರವರೆಗೆ ಸುಮಾರು ೭ ವರ್ಷಗಳ ಕಾಲ ಯುದ್ಧ ಭೂಮಿಯಲ್ಲೇ ತನ್ನ ಜೀವನವನ್ನೇ ಕಳೆದು ಭಾರತಮಾತೆಗೆ ತಮ್ಮ ಪ್ರಾಣವನ್ನು ನೀಡಿ, ಇವರ ವೀರಮರಣಕ್ಕೆ ೫೬ ವರ್ಷ ಸಂದರೂ ಅವರ ಧೈರ್ಯ, ಸಾಹಸ ಕೆಲವೇ ಸಮಯದಲ್ಲಿ ಮಾಡಿದ ದೇಶಸೇವೆ ಇಂದಿನ ಯುವ ಸಮುದಾಯಕ್ಕೊಂದು ಮಾದರಿಯಾಗಲಿದೆ.

೨೦೦೨ರಲ್ಲಿ ಭಾರತೀಯ ಸೇನೆಯ ಯೂನಿಟ್‌ನಲ್ಲಿ ವೀರಮರಣವನ್ನಪ್ಪಿದ ಯೋಧರ ಕುಟುಂಬಕ್ಕೆ ಗೌರವಸಲ್ಲಿಸುವ ಕಾರ್ಯಕ್ರಮದಲ್ಲಿ ಪೊನ್ನಪ್ಪನವರ ಮರಣೋತ್ತರವಾಗಿ ಸಹೋದರ ಕೂಕಂಡ ಕಾವೇರಪ್ಪ ಅವರಿಗೆ ಸೇನಾ ಮೆಡಲ್ ನೀಡಿ ಗೌರವಿಸಲಾಯಿತು.

ಎಲ್ಲೂ ಕೂಡಂಡ ಪೊನ್ನಪ್ಪ ಅವರ ಸ್ಮರಣೆಯಾಗುತ್ತಿಲ್ಲ. ಅವರ ಹುಟ್ಟೂರಾದ ಪೊನ್ನಂಪೇಟೆಯಲ್ಲೂ ಯಾವುದೇ ಕಾರ್ಯಕ್ರಮವಾಗಲಿ, ಸಂಘ-ಸAಸ್ಥೆಗಳಾಗಲಿ ಈ ವೀರ ಯೋಧನಿಗೆ ಗೌರವಸಲ್ಲಿಸುವ ಕಾರ್ಯವನ್ನು ಮರೆತಿರುವುದು ಬೇಸರದ ಸಂಗತಿ. ಕೂಕಂಡ ಪೊನ್ನಪ್ಪ ಅವರು ವಾಸವಿದ್ದ ಪೊನ್ನಂಪೇಟೆಯಿAದ ಗೋಣಿಕೊಪ್ಪದ ಮುಖ್ಯರಸ್ತೆಗೆ ವೀರ ಯೋಧ ಕೂಕಂಡ ಪೊನ್ನಪ್ಪ ಅವರ ಹೆಸರಿಡುವ ಮೂಲಕ ವೀರಯೋಧನಿಗೆ ಗೌರವ ಸಲ್ಲಿಸುವಂತಾಗಲಿ.

- ಪುತ್ತರಿರ ಕರುಣ್ ಕಾಳಯ್ಯ, ಚೆಟ್ಟಳ್ಳಿ