ಮಡಿಕೇರಿ, ಸೆ. ೧೮: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಉಚಿತ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಮಡಿಕೇರಿ ನಗರದ ಕಾವೇರಿ ಕಲಾಕ್ಷೇತ್ರ ಮತ್ತು ಓಂಕಾರ ಸದನದಲ್ಲಿ ನಡೆಸ ಲಾಯಿತು. ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್, ನಗರಸಭೆ ಸದಸ್ಯರಾದ ಮಹೇಶ್ ಜೈನಿ, ಉಮೇಶ್ ಸುಬ್ರಮಣಿ, ಎಸ್.ಸಿ. ಸತೀಶ್, ಚಂದ್ರಶೇಖರ್, ಅರುಣ್ ಶೆಟ್ಟಿ, ಅನಿತಾ ಪೂವಯ್ಯ, ಶ್ವೇತಾ ಪ್ರಶಾಂತ್, ಸವಿತಾ ರಾಕೇಶ್, ಕಲಾವತಿ, ಸಬಿತ, ಮಂಜುಳಾ, ಉಷಾ ಕಾವೇರಪ್ಪ, ನಗರ ಬಿಜೆಪಿ ಉಪಾಧ್ಯಕ್ಷ ಜಗದೀಶ್, ಡಿಷು, ಕವನ್ ಕಾವೇರಪ್ಪ, ಮಡಿಕೇರಿ ನಗರ ಯುವ ಮೋರ್ಚಾ ಅಧ್ಯಕ್ಷ ನವೀನ್ ಪೂಜಾರಿ, ಸಾಮಾಜಿಕ ಜಾಲತಾಣದ ಪ್ರಮುಖ ಪಾಂಡೀರ ಪೂಣಚ್ಚ, ಪದಾಧಿಕಾರಿಗಳು, ಕಾರ್ಯಕರ್ತರು ಕಾರ್ಯ ಕ್ರಮದಲ್ಲಿ ಭಾಗಿಯಾಗಿದ್ದರು.