*ವೀರಾಜಪೇಟೆ, ಸೆ. ೧೮: ವಾರ್ಷಿಕ ವಿಶ್ವಕರ್ಮ ಪೂಜಾ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ವೀರಾಜಪೇಟೆ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘ ವತಿಯಿಂದ ನಗರದ ಶ್ರೀ ಬಾಲ ಆಂಜನೇಯ ದೇವಾಲಯದ ಸಭಾಂಗಣದಲ್ಲಿ ವಾರ್ಷಿಕ ವಿಶ್ವಕರ್ಮ ದೇವನ ಪೂಜಾ ಕಾರ್ಯಕ್ರಮ ನಡೆಯಿತು.
ಹೇಮಂತ್ ವಿಟ್ಲ ಪೂರೋಹಿತರಿಂದ ಬೆಳಿಗ್ಗೆ ಗಣಪತಿಯ ಹೋಮದೊಂದಿಗೆ ಆರಂಭವಾದ ಪೂಜಾ ಕೈಂಕರ್ಯಗಳು ಶ್ರೀ ದೇವರಿಗೆ ಬಗೆಬಗೆಯ ಹೂವುಗಳಿಂದ ಅರ್ಚನೆಗಳು, ಭಕ್ತರಿಂದ ಸಾಮೂಹಿಕ ಭಜನೆ ಪ್ರವಚನಗಳು ಜರುಗಿ ದೇವರಿಗೆ ಮಹಾ ಮಂಗಳಾರತಿ ಸಲ್ಲಿಕೆಯಾಯಿತು. ನಂತರದಲ್ಲಿ ಪ್ರಸಾದ ವಿನಿಯೋಗ ನಡೆಯಿತು. ವಾರ್ಷಿಕ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು.
ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ದಿವಾಕರ್ ಅಚಾರ್, ಸಂಘದ ಉಪಾಧ್ಯಕ್ಷ ವಾಗೇಶ್ ಅಚಾರ್ಯ, ಕಾರ್ಯದÀರ್ಶಿ ಲೋಕೇಶ್ ಅಚಾರ್ಯ, ಖಜಾಂಚಿ ವಿಮಲ ದಶರಥ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸಮುದಾಯ ಬಾಂಧವರು ಹಾಜರಿದ್ದರು.