ವೀರಾಜಪೇಟೆ, ಸೆ. ೧೯: ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ರಸ್ತೆ ಕಾಮಗಾರಿಗಳಿಗೆ ಪ್ರಾಮುಖ್ಯತೆಯನ್ನು ನೀಡಿ ದುರಸ್ತಿ ಕಾಣದ ರಸ್ತೆಯನ್ನು ಕಾಂಕ್ರಿಟ್ ರಸ್ತೆಯನ್ನಾಗಿ ಪರಿವರ್ತನೆ ಮಾಡಿ ಗ್ರಾಮಸ್ಥರ ಸಮ್ಮುಖದಲ್ಲಿ ನೂತನ ರಸ್ತೆಯನ್ನು ಲೋಕಾರ್ಪಣೆ ಮಾಡಲಾಯಿತು. ವೀರಾಜಪೇಟೆ ತಾಲೂಕು ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಟ್ಟಡೆ ಶಾಲೆಯ ರಸ್ತೆಯು ಕಾಂಕ್ರಿಟ್ ರಸ್ತೆಯನ್ನಾಗಿ ಪರಿವರ್ತನೆಗೊಂಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧ ಲೋಕಾರ್ಪಣೆ ಮಾಡಿದರು.

ಈ ಸಂದರ್ಭ ಮಾತನಾಡಿದ ಬೇಟೋಳಿ ಗ್ರಾಮ ಪಂಚಾಯಿತಿ ಪಿ.ಡಿ.ಓ ಮಣಿ, ಗ್ರಾಮದಲ್ಲಿ ಶಾಲಾ ವ್ಯಾಪ್ತಿಯಲ್ಲಿ ತೆರಳುವ ರಸ್ತೆಯು ದುಸ್ಥರವಾಗಿತ್ತು. ಈ ಭಾಗದ ಪಂಚಾಯಿತಿ ಸದಸ್ಯರು ಗ್ರಾಮ ಸಭೆಯಲ್ಲಿ ಅನುದಾನ ಒದಗಿಸುವಂತೆ ಮತ್ತು ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುವಂತೆ ಕೋರಲಾಗಿದ್ದ ಮೇರೆಗೆ. ೧೫ ನೇ ಹಣಕಾಸು ಯೋಜನೆಯಡಿಯಲ್ಲಿ ರೂ. ೨.೨೫ ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣಗೊಂಡು ಲೋಕಾರ್ಪಣೆಯಾಗಿದೆ ಎಂದು ಹೇಳಿದರು. ರಸ್ತೆ ಉದ್ಘಾಟನೆ ವೇಳೆ ಬೇಟೋಳಿ ಗ್ರಾ.ಪಂ. ಸದಸ್ಯರಾದ ಪಟ್ರಪಂಡ ಸನ್ನು ಚೆಂಗಪ್ಪ, ಕೆಂಗೊಟAಡ ಆಲಿಮಾ, ಭಾ.ಜ.ಪ. ಪ್ರಮುಖ ಕುವೇಲರ ಉಮ್ಮರ್, ಗುತ್ತಿಗೆದಾರ ಪಟ್ಟಡ ಮನು ರಾಮಚಂದ್ರ, ಗ್ರಾಮಸ್ಥರು ಹಾಜರಿದ್ದರು.