ಕೂಡಿಗೆ, ಸೆ. ೧೯: ಇಲ್ಲಿಗೆ ಸಮೀಪದ ಕೂಡುಮಂಗಳೂರು ಸಮುದಾಯ ಭವನದಲ್ಲಿ ಓಡಿಪಿ ಸಂಸ್ಥೆ ಮತ್ತು ಜರ್ಮನಿ ಅಂದೇರಿ ಹಿಲ್ಸ್ ಸಂಸ್ಥೆ ಸಹಯೋಗದೊಂದಿಗೆ ನೋಂದಾಯಿತ ರೈತ ಸದಸ್ಯರುಗಳಿಗೆ ಉಚಿತ ರಸಗೊಬ್ಬರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೂವಿಕ ರೈತ ಒಕ್ಕೂಟದ ಅಧ್ಯಕ್ಷ ಹೊನ್ನಪ್ಪ ವಹಿಸಿದ್ದರು ಸಂಸ್ಥೆಯ ಮುಖ್ಯಸ್ಥ ಫಾದರ್ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ಮಾತನಾಡಿ, ಯೋಜನೆಯಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.
ಸಂಸ್ಥೆಯ ಸಂಯೋಜಕ ರಮೇಶ್ ಮಾತನಾಡಿ, ಕೂಡುಮಂಗಳೂರು ಕ್ಲಸ್ಟರ್‌ನ ರೈತರು ಸರಕಾರದ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮುಂದುವರಿಯಲು ತಿಳಿಸಿದರು.
ಈ ಸಂದರ್ಭ ಮೈಸೂರು ಭಾಗದ ಸಂಯೋಜಕ ಜಾನ್ ಡಿಗ್ರೋಸ್, ಕಾರ್ಯಕರ್ತರಾದ ಸುಂದರ ದಾಸ್ ಸೇರಿದಂತೆ ರೈತರು ಭಾಗವಹಿಸಿದ್ದರು.