ಕಣಿವೆ, ಸೆ. ೧೯: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಸುಂದರನಗರದಲ್ಲಿ ಸಾರ್ವಜನಿಕರಿಗೆ ಕೋವಿಡ್-೧೯ ನಿರೋಧಕ ಲಸಿಕೆಯನ್ನು ವಿತರಿಸಲಾಯಿತು.

ಶುಕ್ರವಾರ ಸುಂದರನಗರದ ಸಮುದಾಯ ಭವನದಲ್ಲಿ ವಿನಾಯಕ ಬಡಾವಣೆ, ಬಸವೇಶ್ವರ ಬಡಾವಣೆ ಹಾಗೂ ಚಿಕ್ಕತ್ತೂರು ಗ್ರಾಮದ ನೂರಾರು ಮಂದಿ ಲಸಿಕೆಯನ್ನು ಪಡೆದರು. ೧೦೦ ಕೋವಿಶೀಲ್ಡ್ ಹಾಗೂ ೩೦ ಕೋವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಸದಸ್ಯರಾದ ಕೆ.ಬಿ. ಶಂಷುದ್ಧೀನ್, ರಾಜ್ಯ ಸರ್ಕಾರದ ಬೃಹತ್ ಲಸಿಕಾ ಮೇಳ ಅಂಗವಾಗಿ ರಾಜ್ಯಾದ್ಯಂತ ೩೦ ಲಕ್ಷ ಲಸಿಕೆಯನ್ನು ವಿತರಿಸುವ ಗುರಿಹೊಂದಿದ್ದು, ಪ್ರತೀ ಗ್ರಾಮಗಳಲ್ಲಿಯೂ ಲಸಿಕೆಯನ್ನು ವಿತರಿಸಲಾಗುತ್ತಿದೆ ಎಂದರು.

ಈ ಸಂದರ್ಭ ವಾರ್ಡ್ ಸದಸ್ಯರಾದ ಆಶಾ ವೆಂಕಟೇಶ್, ದೀಪಾ, ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರೇಶ್, ದಾದಿಯರಾದ ಜಲಜಾಕ್ಷಿ, ಅಂಗನವಾಡಿ ಶಿಕ್ಷಕರು ಬೋಜಮ್ಮ, ಶೋಭ, ಸುಶೀಲ, ಆಶಾ ಕಾರ್ಯಕರ್ತರಾದ ನಾಗರತ್ನ, ಎಲಿಜಬೆತ್‌ಕುಮಾರಿ, ಸ್ಥಳೀಯರಾದ ಮಂಜು, ನೀರುಗಂಟಿ ವಸಂತ್‌ಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.

ತಟ್ಟಕೆರೆ ಹಾಡಿಯಲ್ಲಿ ಲಸಿಕಾ ಅಭಿಯಾನ

ರಾಜ್ಯ ಸರ್ಕಾರದ ಬೃಹತ್ ಲಸಿಕಾ ಅಭಿಯಾನಕ್ಕೆ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟಕೆರೆ ಹಾಡಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಕೈಜೋಡಿಸಿ ಯಶಸ್ವಿಗೊಳಿಸಿದರು. ಹಾಡಿಯ ಮನೆ ಮನೆಗಳಿಗೆ ತೆರಳಿ ಲಸಿಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಸಿದರು. ಲಸಿಕಾ ಅಭಿಯಾನಕ್ಕೆ ಅಧ್ಯಕ್ಷ ಚಕ್ಕೇರ ಅಯ್ಯಪ್ಪ ಚಾಲನೆ ನೀಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲರೂ ಲಸಿಕೆ ಪಡೆದು ಶೇ. ನೂರರಷ್ಟು ಗುರಿ ಸಾಧಿಸಲು ಸಹಕಾರ ಕೋರಿದರು. ಗ್ರಾಮ ಪಂಚಾಯಿತಿ ಸದಸ್ಯ ಕಾಟಿಮಾಡ ಶರೀನ್ ಮಾತನಾಡಿ, ಕೇಂದ್ರ ಸರ್ಕಾರ ಉಚಿತವಾಗಿ ಜನರ ಜೀವರಕ್ಷಣೆಗಾಗಿ ನೀಡುವ ವಾಕ್ಸಿನ್ ಪಡೆದುಕೊಂಡು ಸಹಕರಿಸಲು ಕರೆ ನೀಡಿದರು.

ಪಂಚಾಯಿತಿ ಉಪಾಧ್ಯಕ್ಷೆ ಪಡಿಞರಂಡ ಕವಿತಾ ಆರಂಭದಲ್ಲಿ ಗಿರಿಜನರು ಲಸಿಕೆ ಪಡೆಯಲು ಉತ್ಸಾಹ ತೋರಿಸುತ್ತಿರಲಿಲ್ಲ. ಈಗ ವ್ಯಾಕ್ಸಿನ್ ಪಡೆಯಲು ಆಸಕ್ತಿ ತೋರಿಸಿ ಗ್ರಾಮ ಪಂಚಾಯಿತಿ ಮನವಿಗೆ ಸ್ಪಂದಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಜೇನುಕುರುಬರ ಸಾಸು, ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರ ಅರೋಗ್ಯ ಪರಿವೀಕ್ಷಕ ತೇಜಸ್ ಗೌಡ, ಪ್ರಮುಖರಾದ ಯಂ.ಯA. ಸಂತೋಷ್, ಸತೀಶ್, ಗಿರಿಜನ ಮುಖಂಡರಾದ ಜೇನುಕುರುಬರ ಕೆಂಪ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಜೇನುಕುರುಬರ ಅಪ್ಪಣ್ಣ, ಯರವರ ಕಾಳ, ಗೋಪಾಲಿ, ಹಾಡಿಯ ಜನರು ಆರೋಗ್ಯ ಇಲಾಖೆಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ಪೊನ್ನಂಪೇಟೆ ಪಬ್ಲಿಕ್ ಶಾಲೆಯಲ್ಲಿ

ಪೊನ್ನಂಪೇಟೆ: ಪ್ರಧಾನಿ ಹುಟ್ಟುಹಬ್ಬದ ಪ್ರಯುಕ್ತ ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಲಸಿಕಾ ಮಹಾಮೇಳ ನಡೆಯಿತು. ಕಿರಿಯ ಆರೋಗ್ಯ ಸಹಾಯಕಿಯರಾದ ಮೀನಾಕ್ಷಿ, ಉಷಾ, ಆಶಾ ಕಾರ್ಯಕರ್ತೆಯರಾದ ಭವಾನಿ, ಸುಮ, ಜನಿತಾ, ಪ್ರಶಾಂತಿ, ಪೊನ್ನಮ್ಮ, ಪ್ರವಿತ ಕಾರ್ಯ ನಿರ್ವಹಿಸಿದರು.

ಈ ಸಂದÀರ್ಭ ಪೊನ್ನಂಪೇಟೆ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ ಮೂಕಳೇರ ಮಧುಕುಮಾರ್ ಹಾಗೂ ಕೋಟೆರ ಕಿಸನ್ ಉತ್ತಪ್ಪ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ವೆಂಕಟೇಶ್, ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ ಸದಾ, ಗ್ರಾ.ಪಂ. ಸದಸ್ಯರಾದ ರಾಮಕೃಷ್ಣ, ಆಸೀಸ್, ಮಚ್ಚಮಾಡ ವಿಮಲಾ, ರಮೇಶ್, ಓಬಿಸಿ ಘಟಕದ ಜಿಲ್ಲಾ ಕಾರ್ಯದರ್ಶಿ ಮನು ಕುಮಾರ್, ಪೊನ್ನಂಪೇಟೆ ಬಿಜೆಪಿಯ ವಿವಿಧ ಬೂತಿನ ಅಧ್ಯಕ್ಷರುಗಳಾದ ರಾಜ, ಮನು, ಚುಮ್ಮಾ, ಪ್ರಧಾನ್ ಮತ್ತು ಕಾರ್ಯಕರ್ತರಾದ ಚೆಪ್ಪುಡಿರ ರಾಧಿಕಾ ಹಾಜರಿದ್ದರು.