ಸಿದ್ದಾಪುರ, ಸೆ. ೧೯: ಹ್ಯಾಂಡಲ್ ತುಂಡಾದ ಪರಿಣಾಮ ಚಲಿಸುತ್ತಿದ್ದ ಆಟೋ ರಿಕ್ಷಾ ರಸ್ತೆ ಬದಿಯ ಮರದ ಬದಿಗೆ ಡಿಕ್ಕಿ ಹೊಡೆದು ರಿಕ್ಷಾದ ಮುಂಭಾಗ ಜಖಂಗೊAಡಿರುವ ಘಟನೆ ಬಾಡಗ ಬಾಣಂಗಾಲ ಗ್ರಾಮದ ಹುಂಡಿಯಲ್ಲಿ ನಡೆದಿದೆ.

ಹುಂಡಿಯ ನಿವಾಸಿ ಸಮೀರ್ ಎಂಬವರು ಭಾನುವಾರ ಬೆಳಿಗ್ಗೆ ೧೦ ಗಂಟೆಯ ಸಮಯಕ್ಕೆ ಹುಂಡಿಯಿAದ ಸಿದ್ದಾಪುರಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಆಟೋ ರಿಕ್ಷಾದ ಹ್ಯಾಂಡಲ್ ತುಂಡಾಗಿ ಹತೋಟಿ ತಪ್ಪಿ ರಸ್ತೆಯ ಬದಿಯ ಮರವೊಂದರ ಬದಿಗೆ ಡಿಕ್ಕಿಯಾಗಿದೆ. ಇದರಿಂದಾಗಿ ಆಟೋ ರಿಕ್ಷಾದ ಮುಂಭಾಗದ ಗಾಜುಗಳು ಒಡೆದು ಹೋಗಿ ಜಖಂಗೊAಡಿದೆ. ಡಿಕ್ಕಿ ಹೊಡೆದ ಪರಿಣಾಮ ಸಮೀರ್‌ನ ಎದೆಗೆ ಸಣ್ಣ ಗಾಯವಾಗಿದ್ದು, ಗಾಯಾ ಳುವಿಗೆ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಚಾಲಕ ಅಪಾಯ ದಿಂದ ಪಾರಾಗಿದ್ದು, ಚೇತರಿಸಿ ಕೊಂಡಿದ್ದಾರೆ.