ಮಡಿಕೇರಿ, ಸೆ. ೧೯: ಖಾಸಗಿ ಕಾರ್ನಲ್ಲಿ ಪೊಲೀಸ್ ಎಂಬ ನಾಮಫಲಕ ಅಳವಡಿಸಿದ್ದ ಹಿನ್ನೆಲೆ ಆಂದ್ರಪ್ರದೇಶದಿAದ ಬಂದಿದ್ದವರಿಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ದಂಡ ವಿಧಿಸಿದ್ದಾರೆ.
ಆಂದ್ರಪ್ರದೇಶದಿAದ ಬಂದ ಐವರ ಪೈಕಿ ಓರ್ವ ಮಹಿಳೆ ಆಂದ್ರಪ್ರದೇಶದ ಅನಂತಪುರದಲ್ಲಿ ಪೊಲೀಸ್ ಪೇದೆಯಾಗಿದ್ದು, ಆದರೆ, ನಿಯಮ ಉಲ್ಲಂಘಿಸಿ ಖಾಸಗಿ ಕಾರ್ನ ಹಿಂಭಾಗದಲ್ಲಿ ಪೊಲೀಸ್ ಎಂಬ ರೆಡಿಯಂ ಸ್ಟೀಕರ್ ಅಳವಡಿಸಿದ್ದು, ಪೊಲೀಸರು ಗಮನಿಸಿ ಪರಿಶೀಲಿಸಿದಾಗ ವಿಷಯ ತಿಳಿದುಬಂದಿದೆ. ನಂತರ ಕಾರ್ನಲ್ಲಿದ್ದವರನ್ನು ವಿಚಾರಿಸಿ ಗುರುತಿನ ಚೀಟಿ ಪರಿಶೀಲಿಸಿ ದಂಡ ವಿಧಿಸಿ ಕಳುಹಿಸಿದ್ದಾರೆ.