ನಾಪೋಕ್ಲು, ಸೆ. ೧೭: ಸಮೀಪದ ಕೊಳಕೇರಿ ಶಾಲೆಯಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಆರೋಗ್ಯ ಕಾರ್ಯಕರ್ತೆ ಉಮಾಮಹೇಶ್ವರಿ ಪೌಷ್ಟಿಕ ಆಹಾರದ ಬಗ್ಗೆ, ರಕ್ತ ಹೀನತೆ ಬಗ್ಗೆ ಅರಿವು ಮೂಡಿಸಿದರು. ಮಾತೃವಂದನದ ಬಗ್ಗೆ ಕೋಟೇರಿ ಅಂಗನವಾಡಿ ಕಾರ್ಯಕರ್ತೆ ಕೃತಿಕಾ, ಭಾಗ್ಯಲಕ್ಷ್ಮಿ ಯೋಜನೆ ಬಗ್ಗೆ ಕೊಳಕೇರಿ ಅಂಗನವಾಡಿ ಕಾರ್ಯಕರ್ತೆ ಶ್ವೇತಾ ಮಾಹಿತಿಯಿತ್ತರು. ಕೋವಿಡ್ ಬಗ್ಗೆ ಆಶಾ ಕಾರ್ಯಕರ್ತೆ ದಮಯಂತಿ ಅರಿವು ಮೂಡಿಸಿದರು. ನಂತರ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಅಶ್ರಫ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋಟೇರಿ ಅಂಗನವಾಡಿ ಕಾರ್ಯಕರ್ತೆ ಗೀತಾ ನಿರೂಪಿಸಿ ಆಶಾ ಕಾರ್ಯಕರ್ತೆ ಗೀತಾ ಸ್ವಾಗತಿಸಿದರು. ಕುವಲೆಕಾಡು ಅಂಗನವಾಡಿ ಕಾರ್ಯಕರ್ತೆ ಸಫ್ರೀನಾ ವಂದಿಸಿದರು.