ಕಣಿವೆ, ಸೆ. ೧೬ : ವಿದ್ಯಾರ್ಥಿನಿಯೋರ್ವಳನ್ನು ಚುಡಾಯಿಸುತ್ತಿದ್ದ ಯುವಕನನ್ನು ಗದರಿಸಲು ಕೋವಿಯಿಂದ ಗುಂಡು ಹೊಡೆದ ವ್ಯಕ್ತಿಯೋರ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕರುಣಾಕುಮಾರ್ ಎಂಬ ಕಾಫಿ ಬೆಳೆಗಾರ ಬಂಧಿತ ಆರೋಪಿ.

ಘಟನೆ ವಿವರ : ಹಾದ್ರೆ ಹೆರೂರು ಗ್ರಾಮದ ವಿದ್ಯಾರ್ಥಿನಿಯೋರ್ವಳನ್ನು ಅದೇ ಊರಿನ ಅಭಿಜಿತ್ ಎಂಬ ಯುವಕ ಚುಡಾಯಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಪಾಲಕರು ಆತನಿಗೆ ಅನೇಕ ಬಾರಿ ತಿಳಿ ಹೇಳಿದರೂ ಕೂಡ ತನ್ನ ಕುಚೇಷ್ಟೆ ಮುಂದುವರೆಸಿದ ಕಾರಣಕ್ಕೆ ಮನನೊಂದ ಪಾಲಕ ಕರುಣಾಕುಮಾರ್ ಬುಧವಾರ ತೋಟದಿಂದ ಬರುವಾಗ ಕಂಡ ಅಭಿಜಿತ್ ಕುಚೇಷ್ಟೆಯಿಂದ ಕೆರಳಿ, ಯುವಕನನ್ನು ಗದರಿಸುವ ಸಲುವಾಗಿ ತನ್ನೊಂದಿಗಿದ್ದ ಕೋವಿಯಿಂದ ನೆಲಕ್ಕೆ ಗುಂಡು ಹೊಡೆದ ಪರಿಣಾಮ ಅದರಿಂದ ಹೊರ ಬಂದ ಚಿಲ್ಲುಗಳು ಅಭಿಜಿತ್ ಕಾಲಿಗೆ ತಗುಲಿ ಗಾಯವಾಗಿದೆ. ಅಭಿಜಿತ್‌ನನ್ನು ಕುಶಾಲನಗರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಸಂಬAಧ ಅಭಿಜಿತ್ ನೀಡಿದ ದೂರಿನ ಮೇರೆಗೆ ಕರುಣಾಕುಮಾರ್ ಅವರ ಮೇಲೆ ದೂರು ದಾಖಲಿಸಿ ವಶಕ್ಕೆ ಪಡೆಯಲಾಗಿದೆ ಎಂದು ಕುಶಾಲನಗರ ವೃತ್ತ ನಿರೀಕ್ಷಕ ಎಂ. ಮಹೇಶ್ ತಿಳಿಸಿದ್ದಾರೆ.