ಮಡಿಕೇರಿ, ಸೆ. ೧೬: ಇಂದು ರಾಜ್ಯಾದ್ಯಂತ ಮೆಗಾ ಲಸಿಕಾ ಮೇಳ ನಡೆಯಲಿದ್ದು, ರಾಜ್ಯದಲ್ಲಿ ಒಟ್ಟು ೩೦ ಲಕ್ಷದಷ್ಟು ಕೋವಿಡ್ ನಿರೋಧಕ ಲಸಿಕೆ ಡೋಸ್‌ಗಳು ಲಭ್ಯವಾಗಲಿದೆ. ಕೊಡಗು ಜಿಲ್ಲೆಯಲ್ಲಿ ೨೦,೦೦೦ ಲಸಿಕಾ ಡೋಸ್‌ಗಳು ಲಭ್ಯವಾಗಲಿರುವುದಾಗಿ ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ಗುರುತಿಸಲ್ಪಟ್ಟ ಒಟ್ಟು ೧೨೨ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ದೊರಕಲಿದೆ. ೧೧೫ ಕೇಂದ್ರಗಳಲ್ಲಿ ಕೋವಿಶೀಲ್ಡ್ ಹಾಗೂ ೩೯ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್ ಲಸಿಕೆ ದೊರಕಲಿದೆ. ಈ ಪೈಕಿ ೩೨ ಕೇಂದ್ರ ಗಳಲ್ಲಿ ೨ ಲಸಿಕೆಗಳೂ ಲಭ್ಯವಿರಲಿದೆ.

ಮಡಿಕೇರಿಯ ೩೩ ಕೇಂದ್ರಗಳಲ್ಲಿ ೪,೦೦೦ ಕೋವಿಶೀಲ್ಡ್ ಹಾಗೂ ೧,೦೦೦ ಕೋವ್ಯಾಕ್ಸಿನ್, ಸೋಮವಾರಪೇಟೆಯ ೪೩ ಕೇಂದ್ರಗಳಲ್ಲಿ ೭,೦೦೦ ಕೋವಿಶೀಲ್ಡ್ ಹಾಗೂ ೧,೦೦೦ ಕೋವ್ಯಾಕ್ಸಿನ್ ಹಾಗೂ ವೀರಾಜಪೇಟೆಯ ೪೬ ಕೇಂದ್ರಗಳಲ್ಲಿ ೫,೦೦೦ ಕೋವಿಶೀಲ್ಡ್ ಹಾಗೂ ೨,೦೦೦ ಕೋವ್ಯಾಕ್ಸಿನ್ ಡೋಸ್‌ಗಳು ಲಭ್ಯವಿರಲಿದೆ. ತಾ. ೨೫ರೊಳಗೆ ಜಿಲ್ಲೆಯ ಎಲ್ಲರಿಗೂ ಲಸಿಕೆಯ ಮೊದಲನೆಯ ಡೋಸ್ ನೀಡುವ ಗುರಿಯನ್ನು ಹೊಂದಿದ್ದು, ಲಸಿಕಾ ಮೇಳವನ್ನು ಸದುಪಯೋಗಪಡಿಸಿ ಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮನವಿ ಮಾಡಿದ್ದಾರೆ.