ಮಡಿಕೇರಿ, ಸೆ. ೧೩: ಮರ್ಮಾಂಗಕ್ಕೆ ಘಾಸಿಗೊಳಿಸಿ ವಿಶೇಷ ಚೇತನನನ್ನು ಹತ್ಯೆಗೈದ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಳತ್ಮಾಡು ಗ್ರಾಮದಲ್ಲಿ ನಡೆದಿದೆ.
ಉದಯಶಂಕರ್ (೫೭) ಮೃತಪಟ್ಟ ವಿಶೇಷ ಚೇತನ. ತಾ.೧೦ ರಂದು ಘಟನೆ ಸಂಭವಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮೃತಪಟ್ಟ ವ್ಯಕ್ತಿ ಸೊಂಟದ ಕೆಳಗೆ ಸ್ವಾದೀನ ಕಳೆದುಕೊಂಡಿದ್ದು, ಕಳತ್ಮಾಡು ಗ್ರಾಮದಲ್ಲಿ ಸ್ವಂತ ಜಾಗದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಸರಕಾರದ ಮಾಸಾಶನ ಹಾಗೂ ಗುತ್ತಿಗೆಗೆ ಬಿಟ್ಟಿರುವ ತೋಟದಿಂದ ಬರುವ ಆದಾಯದಿಂದ ಬದುಕು ಕಟ್ಟಿಕೊಂಡಿದ್ದ ಉದಯಶಂಕರ್ ನಿಧನ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
ಘಟನೆ ಹಿನ್ನೆಲೆ
ತಾ. ೯ ರಂದು ವಿಶೇಷಚೇತನ ಉದಯಶಂಕರ್ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಂದು ರಾತ್ರಿ ಅಡುಗೆಗೆ ಬೇಕಾದ ತರಕಾರಿಯನ್ನು ಅಂಗಡಿಯಿAದ ಖರೀದಿಸಿ ತೆರಳಿದ್ದಾರೆ. ತಾ. ೧೦ರ ಬೆಳಿಗ್ಗೆ ಉದಯಶಂಕರ್ ಮಲಗಿದ ಸ್ಥಳದಲ್ಲಿ ಕೊನೆಯುಸಿರೆಳೆದಿದ್ದು, ಗ್ರಾಮಸ್ಥರು ಇದು ಸಹಜ ಸಾವೆಂದು ಭಾವಿಸಿದ್ದಾರೆ.
ಅಂತ್ಯಸAಸ್ಕಾರಕ್ಕೂ ಮುನ್ನ ಅಂತಿಮ ವಿಧಿವಿಧಾನ ಸಂಬAಧ ಮೃತ ಶರೀರವನ್ನು ಸ್ನಾನ ಮಾಡಿಸುವ ಸಂದರ್ಭ ಮರ್ಮಾಂಗದಿAದ ರಕ್ತಸ್ರಾವವಾಗುತ್ತಿರುವುದು ಕಂಡು ಬಂದಿದೆ. ತಕ್ಷಣ ಎಚ್ಚೆತ್ತ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.