ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ವಿಧಿವಶ

ಮಂಗಳೂರು, ಸೆ. ೧೩: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ (೮೦) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಾ.೧೩ ರಂದು ನಿಧನರಾಗಿದ್ದಾರೆ. ಮನೆಯಲ್ಲಿ ವ್ಯಾಯಾಮ ಮಾಡುತ್ತಿರುವಾಗ ಕುಸಿದು ಬಿದ್ದು ತೀವ್ರವಾದ ಆಂತರಿಕ ಗಾಯಗಳಾಗಿದ್ದ ಪರಿಣಾಮ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಮಾ.೨೭, ೧೯೪೧ ರಲ್ಲಿ ಜನಿಸಿದ್ದ ಆಸ್ಕರ್ ಫರ್ನಾಂಡಿಸ್, ಐಎನ್‌ಸಿಯಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿ ಅನುಭವವುಳ್ಳ ನಾಯಕರಾಗಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿದ್ದಷ್ಟೇ ಅಲ್ಲದೇ ರಾಹುಲ್ ಗಾಂಧಿ ಅವರಿಗೂ ಆಸ್ಕರ್ ಆಪ್ತರಾಗಿದ್ದರು. ಡಾ.ಮನಮೋಹನ್ ಸಿಂಗ್ ಅವರ ಯುಪಿಎ ಮೊದಲ ಸರ್ಕಾರದಲ್ಲಿ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ರಾಜ್ಯ ಖಾತೆ ಸಚಿವ (ಸ್ವತಂತ್ರ ನಿರ್ವಹಣೆ)ರಾಗಿದ್ದ ಆಸ್ಕರ್ ಫರ್ನಾಂಡಿಸ್ ೨ನೇ ಅವಧಿಯಲ್ಲಿ ಸಾರಿಗೆ, ರಸ್ತೆ ಹಾಗೂ ಹೆದ್ದಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ೧೯೮೦ ರಲ್ಲಿ ೭ ನೇ ಲೋಕಸಭೆಗೆ ಉಡುಪಿ ಕ್ಷೇತ್ರದಿಂದ ಮೊದಲಬಾರಿ ಸಂಸತ್‌ಗೆ ಆಯ್ಕೆಯಾಗಿದ್ದ ಆಸ್ಕರ್ ಫರ್ನಾಂಡಿಸ್ ೧೯೮೪, ೧೯೮೯, ೧೯೯೧, ೧೯೯೬ ರಲ್ಲಿ ಸತತವಾಗಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ೧೯೯೮ ರಲ್ಲಿ ರಾಜ್ಯಸಭೆಗೆ ಮೊದಲ ಬಾರಿ ಆಯ್ಕೆಯಾದ ಅವರು, ೨೦೦೪ ರಲ್ಲಿ ಮರು ಆಯ್ಕೆಯಾದರು. ೨೦೦೪-೨೦೦೯ ರಲ್ಲಿ ಕೇಂದ್ರ ಸಚಿವರಾಗಿ ಸಾಂಖ್ಯಿಕ ಹಾಗೂ ಯೋಜನಾ ಜಾರಿ ಸಚಿವಾಲಯ, ಎನ್‌ಆರ್‌ಐ ವ್ಯವಹಾರಗಳ ಖಾತೆ, ಯುವಜನ ಕ್ರೀಡಾ ಖಾತೆ, ಕಾರ್ಮಿಕ ಹಾಗೂ ಉದ್ಯೋಗ ಖಾತೆಗಳಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದರು. ಬೆಂಗಳೂರಿನ ಐಐಎಸ್‌ಸಿ ಕೌನ್ಸಿಲ್‌ನ ಸದಸ್ಯರಾಗಿಯೂ ಆಸ್ಕರ್ ಫರ್ನಾಂಡಿಸ್ ಕಾರ್ಯನಿರ್ವಹಿಸಿ ಅನುಭವ ಹೊಂದಿದ್ದಾರೆ.

ಭೂಪೇAದ್ರ ಪಟೇಲ್ ಅಧಿಕಾರ ಸ್ವೀಕಾರ

ಅಹಮದಬಾದ್, ಸೆ. ೧೩: ಗುಜರಾತ್ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಂತೆಯೇ ವಿಜಯ್ ರೂಪಾನಿ ಅಚ್ಚರಿ ರೀತಿಯಲ್ಲಿ ನಿರ್ಗಮನದ ನಂತರ ಮೊದಲ ಬಾರಿಗೆ ಶಾಸಕರಾಗಿರುವ ಭೂಪೇಂದ್ರ ಪಟೇಲ್ ಸೋಮವಾರ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಭಾನುವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದ ಪಟೇಲ್(೫೯) ಗುಜರಾತಿನ ೧೭ನೇ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಆಚಾರ್ಯ ದೆವವ್ರತಾ ಭೂಪೇಂದ್ರ ಪಟೇಲ್ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಆಡಳಿತದ ರಾಜ್ಯಗಳ ಕೆಲ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇಂದು ಪಟೇಲ್ ಮಾತ್ರ ಪ್ರಮಾಣ ವಚನ ಸ್ವೀಕರಿಸಿದರು, ಇನ್ನೂ ಕೆಲವೇ ದಿನಗಳಲ್ಲಿ ಸಂಪುಟ ಸೇರಲಿರುವ ಸಚಿವರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಅಬ್ದುಲ್ ಘನಿಯಿಂದ ಆಡಿಯೋ ಬಿಡುಗಡೆ

ಕಾಬೂಲ್, ಸೆ. ೧೩: ತಾಲಿಬಾನ್ ಸಹ ಸಂಸ್ಥಾಪಕ ಮತ್ತು ಅಫ್ಘಾನಿಸ್ತಾನದ ಉಪಪ್ರಧಾನಿ ಅಬ್ದುಲ್ ಘನಿ ಬರಾದರ್ ಸಾವನ್ನಪ್ಪಿರಬೇಕು ಎಂಬAತಹ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇಂತಹ ಸುದ್ದಿಗಳ ನಂತರ ಸೋಮವಾರ ಆಡಿಯೋವೊಂದನ್ನು ಬಿಡುಗಡೆ ಮಾಡಿರುವ ಘನಿ, ತಾನು ಜೀವಂತವಾಗಿದ್ದು, ಚೆನ್ನಾಗಿರುವುದಾಗಿ ಹೇಳಿದ್ದಾನೆ. ತನ್ನ ಸಾವು ಕುರಿತ ವದಂತಿ ಸುಳ್ಳು ಪ್ರಚಾರ ಎಂದು ತಾಲಿಬಾನ್ ಪೋಸ್ಟ್ ಮಾಡಿರುವ ಆಡಿಯೋ ಸಂದೇಶದಲ್ಲಿ ಅಬ್ದುಲ್ ಘನಿ ಬರಾದರ್ ಆರೋಪಿಸಿದ್ದಾನೆ. ಅಧ್ಯಕ್ಷೀಯ ಅರಮನೆಯಲ್ಲಿ ತಾಲಿಬಾನ್ ವಿರೋಧಿಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಅಬ್ದುಲ್ ಘನಿ ಬರಾದರ್ ಮಾರಣಾಂತಿಕವಾಗಿ ಗಾಯಗೊಂಡಿರುವುದಾಗಿ ವಿಶೇಷವಾಗಿ ಭಾರತದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವದಂತಿ ಹಬ್ಬಿತ್ತು.

ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಆರೋಪ : ಶಂಕಿತರ ಬಂಧನ

ಯಾದಗಿರಿ, ಸೆ. ೧೩: ಜಿಲ್ಲೆಯ ಶಹಾಪುರ ನಗರ ಹೊರವಲಯದಲ್ಲಿ ನಡೆದಿದೆ ಎನ್ನಲಾದ ವಿಡಿಯೋದಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಮಾಡಿದರ ಕುರಿತು ನಾಲ್ವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ.ವೇದಮೂರ್ತಿ ತಿಳಿಸಿದ್ದಾರೆ. ಯುವಕರು ಮಹಿಳೆಯನ್ನು ನಗ್ನಗೊಳಿಸಿ ಥಳಿಸುತ್ತಿದ್ದಾರೆ. ಕಾಲಿಗೆ ಬೀಳುತ್ತೇನೆ ಅಣ್ಣ ಹೊಡೆಯಬೇಡಿ ಎಂದು ಮಹಿಳೆ ಅಂಗಲಾಚುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ, ಕೃತ್ಯಕ್ಕೆ ಸಂಬAಧಿಸಿದAತೆ ಶಹಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಈ ಕುರಿತು ತನಿಖೆ ನಡೆಯುತ್ತಿದೆ. ಸದ್ಯ ವಿಡಿಯೋದಲ್ಲಿದ್ದ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಪತ್ತೆಯಾದರೆ ಇವರ ಕಡೆಯಿಂದ ದೂರು ಪಡೆಯಲಾಗುವುದು. ಇಲ್ಲದಿದ್ದರೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗುವುದು ಎಂದರು. ಘಟನೆಗೆ ಸಂಬAಧಿಸಿದAತೆ ಪೊಲೀಸ್ ಅಧಿಕಾರಿಗಳ ಮೂರು ತಂಡಗಳನ್ನು ರಚಿಸಲಾಗಿದೆ. ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಶೀಘ್ರವೇ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಇದು ೮ ರಿಂದ ೯ ತಿಂಗಳ ಹಿಂದೆ ನಡೆದಿರುವ ಘಟನೆಯಾಗಿದ್ದು,ಇದು ಹಳೆಯ ವಿಡಿಯೋ. ಈಗಾಗಲೇ ಶಂಕಿತ ನಾಲ್ವರನ್ನು ವಶಕ್ಕೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಗಜ ಪಯಣಕ್ಕೆ ಚಾಲನೆ

ಮೈಸೂರು, ಸೆ. ೧೩: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದೆ. ನಾಡಹಬ್ಬ ದಸರೆಯ ಮೊದಲ ಕಾರ್ಯಕ್ರಮ ಗಜಪಯಣಕ್ಕೆ ಸೋಮವಾರ ಸಂಭ್ರಮದಿAದ ಚಾಲನೆ ನೀಡಲಾಗಿದ್ದು, ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳು ಸಾಂಸ್ಕೃತಿಕ ನಗರಿಯತ್ತ ಪ್ರಯಾಣ ಬೆಳೆಸಿವೆ. ನಾಗರಹೊಳೆ ರಾಷ್ಟಿçÃಯ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿ ಗ್ರಾಮದ ಬಳಿ ಅರಣ್ಯ ಇಲಾಖೆ ಸೋಮವಾರ ಆಯೋಜಿಸಿದ್ದ ಗಜಪಯಣ ಕಾರ್ಯಕ್ರಮ ಸರಳವಾಗಿ ನಡೆಯಿತು. ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ೮ ಆನೆಗಳಿಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಕುಡಿದ ಅಮಲಿನಲ್ಲಿ ಗಲಾಟೆ

ಹುಬ್ಬಳ್ಳಿ, ಸೆ. ೧೩: ಕುಡಿದ ಅಮಲಿನಲ್ಲಿ ರೇಡಿಯೋ ಜಾಕಿಯ ಸ್ನೇಹಿತರು ಗಲಾಟೆ ಮಾಡಿಕೊಂಡಿರುವ ಘಟನೆ ನಗರದ ಗೋಕುಲ ರಸ್ತೆಯಲ್ಲಿರುವ ಐಸ್ ಕ್ಯೂಬ್ ಪಬ್ ನಲ್ಲಿ ನಡೆದಿದೆ. ಆರ್‌ಜೆ ಮೇಘಾ ಮತ್ತು ಆಕೆಯ ಸ್ನೇಹಿತರಾದ ಪ್ರವೀಣ, ಕೃತಿಕಾ, ಹರ್ಷ, ಶ್ರೀನಿವಾಸ, ಶರಣ್ಯ, ಶೈಲೇಶ್ ಎಂಬುವವರು ಭಾನುವಾರ ರಾತ್ರಿ ಐಸ್ ಕ್ಯೂ ಪಬ್‌ಗೆ ತೆರಳಿದ್ದರು. ಈ ವೇಳೆ ಪ್ಲೇಟ್‌ನಲ್ಲಿ ಸಾಸ್ ಹಾಕಿದ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ ಶುರುವಾಗಿದೆ. ಜಗಳ ತಾರಕ್ಕೇರಿದ್ದು ಕುಡಿದ ನಶೆಯಲ್ಲಿ ಬಾಟಲಿ ತೂರಾಡಿ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಪ್ರವೀಣ್ ಸೇರಿ ಆರ್ ಜೆ ಮೇಘಾ ಗಾಯಗೊಂಡಿದ್ದಾರೆ. ಹುಬ್ಬಳ್ಳಿಯ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿವೆ.

ಗಾಯಗೊಂಡಿದ್ದ ಪೊಲೀಸ್ ಅಧಿಕಾರಿ ಹುತಾತ್ಮ

ಶ್ರೀನಗರ, ಸೆ. ೧೩: ಖನ್ಯಾರ್ ಪ್ರದೇಶದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಅಧಿಕಾರಿ ಅರ್ಷಿದ್ ಅಶ್ರಫ್ ಹುತಾತ್ಮರಾಗಿದ್ದಾರೆ. ಇದೇ ವೇಳೆ ಭಾರತೀಯ ಸೇನೆ ಮತ್ತು ಪೊಲೀಸರು ಉಗ್ರನೋರ್ವನನ್ನು ಹೊಡೆದುರುಳಿಸಿದ್ದಾರೆ. ಖನ್ಯಾರ್‌ನಲ್ಲಿ ಭಯೋತ್ಪಾದಕರು ಪೋಲಿಸ್ ನಾಕಾ ಪಾರ್ಟಿಯ ಮೇಲೆ ಗುಂಡು ಹಾರಿಸಿದರು. ದಾಳಿಯಲ್ಲಿ ಖನ್ಯಾರ್‌ನ ಪಿಎಸ್‌ಐ(ಪ್ರೊಬೇಷನರಿ ಸಬ್‌ಇನ್ಸ್ಪೆಕ್ಟರ್) ಅರ್ಷಿದ್ ಅಹ್ಮದ್ ಅವರು ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಲ್ಲಿನ ಎಸ್‌ಎಮ್‌ಎಚ್‌ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಶ್ರಫ್ ಮೃತಪಟ್ಟಿದ್ದಾರೆ. ಇದಾದ ನಂತರ ಭದ್ರತಾ ಪಡೆ ಇಡೀ ಪ್ರದೇಶವನ್ನು ಸುತ್ತುವರಿದಿತ್ತು. ದಾಳಿಕೋರರನ್ನು ಹಿಡಿಯಲು ಶೋಧ ಕಾರ್ಯಾಚರಣೆ ಆರಂಭಿಸಿದ್ದು ಆ ವೇಳೆ ಅಪರಿಚಿತ ಉಗ್ರನನ್ನು ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಿದ್ದಾರೆ.