ಕರಿಕೆ, ಸೆ. ೧೩. ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಹಾಗೂ ಪಶ್ಚಿಮ ಘಟ್ಟಗಳ ಕಾರ್ಯಪಡೆ ಸದಸ್ಯ ಕಾರ್ಯದರ್ಶಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ವೆಂಕಟೇಶ್ ಬೆಂಗಳೂರು ಕಚೇರಿಯಲ್ಲಿ ಹದಿಮೂರು ಪಶ್ಚಿಮಘಟ್ಟಗಳ ವ್ಯಾಪ್ತಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಜೊತೆ ವೀಡಿಯೋ ಸಂವಾದ ನಡೆಸಿದರು.

ಪರಿಸರ, ವನ್ಯಪ್ರಾಣಿಗಳ ಸಂರಕ್ಷಣೆ ಹಾಗೂ ಸಸ್ಯ ಕ್ಷೇತ್ರದಲ್ಲಿ ಬೆಳೆಸಿರುವ ಸಸಿಗಳ ಮಾಹಿತಿ, ಬೆತ್ತ-ಬುಟ್ಟಿ ಹೆಣೆಯುವವರ, ಕಾಡಂಚಿನ ವನವಾಸಿಗರ ಶ್ರೇಯೋಭಿವೃದ್ಧಿ ಅನುಗುಣವಾಗಿ ಪಡಿತರ, ಆಹಾರ, ವಸತಿ, ಔಷಧಿ, ಶಿಕ್ಷಣ ಮುಂತಾದ ಸವಲತ್ತುಗಳ ಸಮರ್ಪಕವಾಗಿ ಒದಗಿಸಲು ಕ್ರಮ ವಹಿಸಲು ಸೂಚಿಸಿದರು. ವಿಚಾರ ಸಂಕೀರ್ಣ, ಕಾರ್ಯಗಾರ ಹಮ್ಮಿಕೊಳ್ಳುವುದು, ಗ್ರಾಮ ಅರಣ್ಯ ಸಮಿತಿ, ಜೈವಿಕ ಇಂಧನ ಸಂರಕ್ಷಣೆ, ನದಿಮೂಲ ಜಾಗೃತಾ ಸಂರಕ್ಷಣಾ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಬಹಿರ್ದೆಸೆ ಮುಕ್ತ ಗ್ರಾಮ, ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯಗಳ ನಿರ್ವಹಣೆ, ಭೂತವನ, ಕಾನವನ, ಬಾಣೆವನ, ನಾಗವನ ಮತ್ತು ದೈವೀವನ ಇತ್ಯಾದಿಗಳನ್ನು ಗುರುತಿಸಿ ಸಂರಕ್ಷಿಸುವುದು ಸೇರಿದಂತೆ ಇನ್ನಿತರ ಹಲವು ವಿಚಾರಗಳ ಬಗ್ಗೆ ಸಂವಾದದಲ್ಲಿ ಅಧಿಕಾರಿಗಳಿಗೆ ಸೂಚಿಸಲಾಯಿತು.

ರಾಜ್ಯದ ಪ್ರಮುಖ ನದಿಗಳಾದ ಲಕ್ಷö್ಮಣತೀರ್ಥ, ಕಾವೇರಿ, ಕುಮಾರಧಾರ, ಕಪಿಲಾ, ನೇತ್ರಾವತಿ, ಪಾಲ್ಗುಣಿ, ಸೌಪರ್ಣಿಕಾ, ವರಾಹಿ, ಕಾಳಿ, ಸೇರಿದಂತೆ ಎಲ್ಲಾ ನದಿಗಳ ಸ್ವಚ್ಛತೆ ಹಾಗೂ ಇಕ್ಕೆಲಗಳಲ್ಲಿ ಗಿಡ ನೆಡಲು ಕಾರ್ಯ ಯೋಜನೆ ರೂಪಿಸಲು ಆಯಾ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮನೋಜ್ ಕುಮಾರ್ ಚಾಮರಾಜನಗರ, ಯತೀಶ್ ಕುಮಾರ್ ಶಿರಸಿ, ಶಂಕರ್ ಶಿವಮೊಗ್ಗ, ತಾಕತ್ ಸಿಂಗ್ ರಾಣಾವತ್ ಕೊಡಗು ಸೇರಿದಂತೆ ಹದಿಮೂರು ಜಿಲ್ಲೆಯ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಪಾಲ್ಗೊಂಡಿದ್ದರು.