ಮಡಿಕೇರಿ, ಸೆ. ೧೩: ಮೂರ್ನಾಡು-ಕಾಕೋಟುಪರಂಬು ರಸ್ತೆ ಉದ್ದಕ್ಕೂ ನಿನ್ನೆ ರಾತ್ರಿ ತ್ಯಾಜ್ಯ ಸುರಿದಿದ್ದ ವ್ಯಕ್ತಿಗಳಿಂದಲೇ ತೆರವುಗೊಳಿಸಿದ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಸೈಕ್ಲಿಂಗ್‌ಗೆ ತೆರಳಿದ್ದ ‘ಕ್ಲೀನ್ ಕೂರ್ಗ್ ಇನಿಶಿಯೇಟಿವ್’ ನ ತಂಡದವರು ದಾರಿ ಉದ್ದಕ್ಕೂ ತ್ಯಾಜ್ಯ ಇರುವುದನ್ನು ಗಮನಿಸಿದ್ದಾರೆ. ತ್ಯಾಜ್ಯದ ರಾಶಿಯಲ್ಲಿ ಆಹಾರ ಇತ್ಯಾದಿ ಪದಾರ್ಥಗಳಿದ್ದು, ಆಹಾರ ಕೇಟರಿಂಗ್ ಮಾಡಿರುವವರೇ ಕಸ ಎಸೆದಿದ್ದಾರೆ ಎಂಬುದು ದೃಢವಾಗಿದೆ. ಅವರನ್ನು ಪತ್ತೆ ಹಚ್ಚಿ ಸ್ಥಳಕ್ಕೆ ಬರಲು ತಂಡದವರು ತಿಳಿಸಿದ್ದು, ಎಸೆದಿದ್ದ ಸುಮಾರು ೮ ಚೀಲಗಳಷ್ಟು ತ್ಯಾಜ್ಯವನ್ನು ಅವರಿಂದಲೇ ತೆರವು ಮಾಡಿಸಿದ್ದಾರೆ.

ಕ್ಲೀನ್ ಕೂರ್ಗ್ ಇನಿಶಿಯೇಟಿವ್‌ನ ಅರುಣ್ ಅಪ್ಪಚ್ಚು ಈ ಸಂದರ್ಭ ಹಾಜರಿದ್ದು ನಮ್ಮ ಕಸಕ್ಕೆ ನಾವೇ ಹೊಣೆ ಎಂಬ ವಾಕ್ಯದೊಂದಿಗೆ ಸ್ವಚ್ಛತೆ ಕಾಪಾಡುವಂತೆ ಕಸ ಎಸೆದವರಿಗೆ ತಿಳಿ ಹೇಳಿದ್ದಾರೆ. ಮುಂದೆ ಎಂದಿಗೂ ಕಂಡ-ಕAಡಲ್ಲಿ ಕಸ ಎಸೆಯದಂತೆ ಬುದ್ಧಿವಾದ ಹೇಳಿದ್ದಾರೆ.