ಮಡಿಕೇರಿ, ಸೆ. ೧೩ : ಪೊನ್ನಂಪೇಟೆ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಎಫ್೫ ಪಾಲಿಬೆಟ್ಟ ಮತ್ತು ಎಫ್೨ ಬಾಳೆಲೆ ಫೀಡರ್ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ತಾ. ೧೫ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಗದ್ದೆಮನೆ, ಹೊಸೂರು, ಬೆಟ್ಟಗೇರಿ, ಕಾರೆಕೋಡಿ, ಬಾಳಲೆ, ಬಿಳ್ಳೂರು, ಜಗಾಲೆ, ಕಾರ್ಮಾಡು, ರಾಜಪುರ, ಕೊಟ್ಟಗೇರಿ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಎಫ್೪ ತಿತಿಮತಿ ಮತ್ತು ಎಫ್೨ ಕುಟ್ಟ ಫೀಡರ್ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ತಾ. ೧೬ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಬಾಳಾಜಿ, ದೇವರಪುರ, ಮಾಯಾಮುಡಿ, ಧನುಗಾಲ, ಕೋನಣಕಟ್ಟೆ, ಮರಪಾಲ, ಕಲ್ಲಾಳ, ತಿತಿಮತಿ, ಭಧ್ರಗೋಳ, ನೋಕ್ಯ, ಮಂಚಳ್ಳಿ, ಕಾಯಿಮನೆ, ನಲ್ಲೂರು, ಬೊಳ್ಳೇರಗೇಟ್, ನಾಗರಹೊಳೆ ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಅವರು ಕೋರಿದ್ದಾರೆ.