ಶನಿವಾರಸಂತೆ, ಸೆ. ೧೩: ಶನಿವಾರಸಂತೆ ಹೋಬಳಿ ಹಂಡ್ಲಿ ಗ್ರಾ. ಪಂ. ವ್ಯಾಪ್ತಿಯ ಸಂಪಿಗೆದಾಳು ಗ್ರಾಮದ ನಿವಾಸಿ ಲಿಂಗರಾಜು (೬೧) ತಾ. ೧೧ರಂದು ಮನೆಯಲ್ಲಿ ಕಾಫಿ ತೋಟಕ್ಕೆ ಸಿಂಪಡಿಸಲು ತಂದಿದ್ದ ಔಷಧಿ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅನಾರೋಗ್ಯ ಹಾಗೂ ಆರ್ಥಿಕ ಸಂಕಷ್ಟದಿAದ ಕೊರಗುತ್ತಿದ್ದ ಲಿಂಗರಾಜ್ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಮಗ ಹೇಮಂತ್ ಕುಮಾರ್ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಪ್ರಕರಣ ದಾಖಲಾಗಿದೆ.