ಮಡಿಕೇರಿ, ಸೆ. ೧೨: ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಸಿಬ್ಬಂದಿಗಳು ಶಾಲೆಯ ಆವರಣ ಮತ್ತು ಸಮೀಪದ ರಸ್ತೆಯ ಸುತ್ತಮುತ್ತಲು ಶ್ರಮದಾನ ನಡೆಸಿದರು.

ಭಾರತ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ಚಚ್ಛ ಭಾರತ್ ಅಭಿಯಾನದಡಿ ಸ್ವಚ್ಛತಾ ಪಕ್ವಾಡಾ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದ್ದು, ಶಾಲಾ ಸಿಬ್ಬಂದಿಗಳು, ಪ್ರಾಂಶುಪಾಲ ಪಂಕಜಾಕ್ಷನ್ ಅವರ ನೇತೃತ್ವದಲ್ಲಿ ಶ್ರಮದಾನ ಕೈಗೊಂಡರು. ಗಾಳಿಬೀಡು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗಾಯಿತ್ರಿ ಮತ್ತು ಸಿಬ್ಬಂದಿಗಳು ಕೂಡ ಕೈಜೋಡಿಸಿದರು.

ಶ್ರಮದಾನದ ನಂತರ ಸ್ವಚ್ಛತಾ ಪಕ್ವಾಡಾದ ಕುರಿತು ಶಿಕ್ಷಕ ಗಂಗಾಧರನ್ ವೈಯಕ್ತಿಕ ಶುಚಿತ್ವದ ಬಗ್ಗೆ ಮಾಹಿತಿ ನೀಡಿದರು. ಪ್ರಾಂಶುಪಾಲ ಪಂಕಜಾಕ್ಷನ್ ಆರೋಗ್ಯ ಮತ್ತು ಸ್ವಚ್ಛತೆಯ ಕುರಿತು ಅರಿವು ಮೂಡಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೆಂದು ಹೇಳಿದರು. ಗಾಳಿಬೀಡು ಪ್ರಾಥಮಿಕ ಶಾಲೆಗೆ ನವೋದಯ ಸಂಸ್ಥೆಯ ವತಿಯಿಂದ ಮಾಸ್ಕ್, ಸ್ಯಾನಿಟೈಜರ್, ಹ್ಯಾಂಡ್ ವಾಷ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.