ಮಡಿಕೇರಿ, ಸೆ. ೧೨: ಶ್ರೀಮಂಗಲ ಪೊಲೀಸರು ಹೈಸೊಡ್ಲೂರುವಿನಲ್ಲಿ ಕರಿಮೆಣಸು ಕಳವು ಪ್ರಕರಣಕ್ಕೆ ಸಂಬAಧಿಸಿದAತೆ ನಿನ್ನೆ ನಾಲ್ವರು ಆರೋಪಿಗಳನ್ನು ಬಂಧಿಸಿ ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ವ್ಯಕ್ತಿಗಳ ಪೈಕಿ ಹರ್ಷ ಎಂಬಾತ ಹೊಳೆನರಸೀಪುರ ಮೂಲದವನಾಗಿದ್ದಾನೆ ಎಂದು ಶ್ರೀಮಂಗಲ ಠಾಣಾಧಿಕಾರಿ ರವಿಶಂಕರ್ ತಿಳಿಸಿದ್ದಾರೆ.