ಇಲ್ಲಿ ಮುಖ್ಯವಾಗಿ ಕಾಣಬರುವ ಅಂಶಗಳಿಷ್ಟೆ. ಅಗಸ್ತö್ಯರು ತಮ್ಮ ಭೂಲೋಕ ವಾಸದ ಸಂದರ್ಭ ಪ್ರತಿಯೊಂದು ಹಂತದಲ್ಲೂ ಲೋಕ ಕಲ್ಯಾಣಕರ ಕಾರ್ಯಗಳನ್ನು ಮಾಡುತ್ತಾ ಬಂದಿದ್ದರು. ಆ ಪೈಕಿ ಮುಖ್ಯವಾಗಿ ಕಮಂಡಲುವಿನಲ್ಲಿ ಲೋಪಾಮುದ್ರೆಯನ್ನು ಜಲರೂಪಿಣಿಯಾಗಿರಿಸಿದುದು ಒಂದು ನೆಪವಷ್ಟೆ. ಲೋಪಾಮುದ್ರೆ ಸಿಟ್ಟುಮಾಡಿಕೊಂಡು ಕಮಂಡಲುವಿನಿAದ ಹಾರಿ ಬಂದುದನ್ನು ಬರೀ ಕಥೆಯಾಗಿ ನೋಡುವಂತಹುದಲ್ಲ. ನದಿಯಾಗಿ ಹರಿದು ಲೋಕವನ್ನು ಪಾವನಗೊಳಿಸುವ ಅದಮ್ಯ ಗುರಿ ಆಕೆಯಲ್ಲಿತ್ತು. ಅಗಸ್ತö್ಯರು ತಮ್ಮ ಸಂಪೂರ್ಣ ಸಹಕಾರ ನೀಡಿದರು. ಅಗಸ್ತö್ಯರು ಯಮನ ಸಭಾಭವನದಲ್ಲಿರುತ್ತಾರೆ ಎಂದರೆ ಅವರು ಶಾಶ್ವತ ಆತ್ಮರೂಪಿಯಾಗಿದ್ದಾರೆ ಎನ್ನುವದು ನಿಶ್ಚಿತ. ಕಾವೇರಿ ನದಿಯಾಗಿ, ಜಲರೂಪಿಣಿಯಾಗಿ ನಿತ್ಯ ಹರಿಯುತ್ತಿದ್ದರೂ ಮತ್ತೊಂದೆಡೆ ದಿವ್ಯ ಶರೀರಿಣಿಯಾಗಿ ವರುಣನ ಸಭಾಭವನದಲ್ಲಿರುತ್ತಾಳೆ ಎಂದರೆ ಆಕೆ ಈ ಜಗತ್ತಿನ ಶಾಶ್ವತ ಶಕ್ತಿ ಎಂಬದು ಸಾಬೀತಾದಂತಾಗಿದೆ. ಅಂತಹ ಪುಣ್ಯ ಸಾಕ್ಷೀಕೃತ ಮಾಹಿತಿಯನ್ನು ಗ್ರಂಥಾಧಾರಿತವಾಗಿ ಇಲ್ಲಿ ನೀಡಲಾಗುತ್ತಿದೆ.
ಈ ಗ್ರಂಥಾಧಾರಿತ ಮಾಹಿತಿಯ ಮುಖ್ಯ ಉದ್ದೇಶವಿಷ್ಟೆ. ಯಮನ ಸಭೆಯಲ್ಲಿ ಉಪಸ್ಥಿತರಿರುವವರ ಪೈಕಿ ಅಗಸ್ತö್ಯರು ಒಬ್ಬರಾಗಿರುವದರಿಂದ ಯಮನ ಆಡಳಿತದಲ್ಲಿ ಹಾಗೂ ಜೀವಿಗಳ ಆಯುಸ್ಸು ಮುಗಿದಾಗ ಸಂಭವಿಸುವ ಸಾವಿನ ಕುರಿತಾದ ಮಹತ್ವದ ಸಭಾ ಚರ್ಚೆಗಳಲ್ಲಿ ಅವರೂ ಪಾಲ್ಗೊಳ್ಳುತ್ತಾರೆ ಎನ್ನುವದು ಖಚಿತವಾಗುತ್ತದೆ. ಅದೇ ರೀತಿ ಮಳೆಯನ್ನು ಸುರಿಸುವ, ನದೀ-ನದ ಸಮುದ್ರಗಳನ್ನು ನಿಯಂತ್ರಿಸುವ ವರುಣನ ಸಭಾ ಚರ್ಚೆಯಲ್ಲಿ ಕಾವೇರಿಯ ಪಾತ್ರವೂ ಇದೆ ಎನ್ನುವದು ಸ್ಪಷ್ಟವಾಗುತ್ತದೆ. ಭೂಲೋಕದಲ್ಲಿ ದೇಶ, ವಿದೇಶಗಳ ವಿಂಗಡನೆ, ರಾಜ್ಯಗಳ ವಿಂಗಡನೆ ಆಡಳಿತ ನಡೆಸಲು ಪ್ರಧಾನಿ, ಮುಖ್ಯಮಂತ್ರಿ, ಸಚಿವರುಗಳ ಆಯ್ಕೆಯಿರುತ್ತದೆ.
ಈ ವಿಶ್ವವನ್ನು ನಡೆಸಲು ಅದೇ ರೀತಿ ತ್ರಿಮೂರ್ತಿಗಳು, ಇಂದ್ರಾದಿ ದೇವತೆಗಳು ಎಂದು ವಿಶ್ವ ನಿಯಾಮಕ ಶಕ್ತಿ ವಿಂಗಡಿಸಿದೆ. ಆ ಪ್ರಕಾರ ಯಮನನ್ನು ಜೀವಿಗಳ ಮರಣಾಧಿಪತಿ ಎಂದು ಪರಿಗಣಿಸಲಾಗಿದೆ. ವರುಣನನ್ನು ಜಲಾಧಿಪತಿ ಎಂದು ಗುರುತಿಸಲಾಗಿದೆ. ಯಮರಾಜನ ಸಭಾಭವನದಲ್ಲಿ ಅಗಸ್ತö್ಯರು ಶಾಶ್ವತವಾಗಿ ದಿವ್ಯ ಶರೀರಿಯಾಗಿ ಆರಾಧನೆಯಲ್ಲಿ ಪಾಲ್ಗೊಳ್ಳುತ್ತಾರೆ. ಅದೇ ರೀತಿ ಪವಿತ್ರ ತೀರ್ಥ ನದಿ ಕಾವೇರಿ ದಿವ್ಯ ಶರೀರದಲ್ಲಿ ಸಮುದ್ರಗಳಿಗೂ ಅಧಿಪತಿಯಾದ ವರುಣನ ಸಭಾಸ್ಥಾನದಲ್ಲಿ ದಿವ್ಯ ಶರೀರಿಯಾಗಿದ್ದು ಆರಾಧನೆಯಲ್ಲಿ ಪಾಲ್ಗೊಳ್ಳುವವರ ಪೈಕಿ ಪ್ರಮುಖ ಪಾತ್ರ ವಹಿಸಿದ್ದಾಳೆ ಎನ್ನುವ ಉಲ್ಲೇಖವಿದೆ. ಅಂತಹ ಮಹತ್ವದ ವಿಚಾರ ಭಾರತದ ಹಿಂದೂ ಧಾರ್ಮಿಕ ಉದ್ಗçಂಥ ಮಹಾಭಾರತದಲ್ಲಿ ಅಡಕವಾಗಿದೆ. ಸಾಮಾನ್ಯ ಮಾನವರಾದ ನಮಗೆ ಅಧ್ಯಾತ್ಮ ದೈವಿಕ ರಹಸ್ಯಗಳು ಮೇಲ್ನೋಟಕ್ಕೆ ಅರ್ಥವಾಗುವದು ಕಷ್ಟ ಆದರೆ, ತಪಸ್ವೀ ಋಷಿಮುನಿಗಳ ಅಂತರ್ ನೇತ್ರಕ್ಕೆ ಮಾತ್ರ ಇಂತಹ ವಿದ್ಯಮಾನಗಳು ಗೋಚರವಾಗಲು ಸಾಧ್ಯವಿದೆ. ಅಂತಹ ಅದ್ಭುತ ವಿದ್ಯಮಾನದ ಸಾಕ್ಷೀಭೂತ ಗ್ರಂಥಾಧಾರಿತ ಮಾಹಿತಿಯನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಅಗಸ್ತö್ಯರು ಮತ್ತು ಕಾವೇರಿ ಅಸಾಮಾನ್ಯರು. ನಾವು ತಿಳಿದಂತೆ ಭೂಮಂಡಲದಲ್ಲಿ ಮಾತ್ರ ಇವರಿಬ್ಬರ ಮಹತ್ವದ ಚರಿತ್ರೆ ಕೇಳಿದ್ದೇವೆ. ಆದರೆ, ಕಾಲ ಯಮನ ಸಭಾಭವನದಲ್ಲಿ ಅಗಸ್ತö್ಯ ಮಹರ್ಷಿಗಳು ಆರಾಧನೆಯಲ್ಲಿ ಪಾಲ್ಗೊಳ್ಳುವ ಯಮನಿಗೂ ನಿಕಟವರ್ತಿಯಾಗಿ ಸೇವೆಗೈಯುವ ಕುರಿತು ಪ್ರಸ್ತಾಪವಿದೆ. ಅದೇ ರೀತಿ ಕಾವೇರಿಯು ಜಲಾಧಿಪನಾದ ವರುಣ ದೇವನ ಸಭಾಭವನದಲ್ಲಿ ಭಾಗವಹಿಸುವ ದಿವ್ಯ ದೇಹಧರಿಸಿ ವರುಣನ ಆರಾಧನೆಯಲ್ಲಿ ಪಾಲ್ಗೊಳ್ಳುವ ಚರಿತ್ರೆ ಆಧಾರ ಸಹಿತವಾಗಿದೆ.
ವೇದ ವ್ಯಾಸರು ಬರೆದಿರುವ ಮಹಾಭಾರತ ಉದ್ಗçಂಥದಲ್ಲಿ ನಾರದ ಮಹರ್ಷಿಗಳು ಪಾಂಡವ ಜ್ಯೇಷ್ಠ ಯುಧಿಷ್ಠ್ಠಿರನಿಗೆ ಹೇಳುವ ಚರಿತ್ರೆಯಲ್ಲಿ ಈ ರಹಸ್ಯಗಳು ಅಡಕವಾಗಿವೆ. ಮಹಾಭಾರತ ಲೋಕಪಾಲಕ ಸಭಾಖ್ಯಾನ ಪರ್ವದಲ್ಲಿನ ಈ ದಿವ್ಯ ಚರಿತ್ರೆಯನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ.
ವೈವಸ್ವತನ ಸಭಾವರ್ಣನೆ
ನಾರದ ಮಹರ್ಷಿಗಳು ಯುಧಿಷ್ಠಿರನಿಗೆ ಹೇಳುತ್ತಾರೆ. ‘‘ವಿಶ್ವಕರ್ಮನಿರ್ಮಿತವಾದ ಯಮನ ಸಭಾಮಂದಿರದ ಸೊಬಗನ್ನು ವರ್ಣಿಸುವೆನು, ಯುಧಿಷ್ಠಿರ! ಪುಟಕ್ಕೆ ಹಾಕಿದ ಚಿನ್ನದಂತೆ ಥಳ-ಥಳಿಸುವ ಆ ಸಭಾಮಂದಿರದ ಸುತ್ತಳತೆಯು ನೂರು ಯೋಜನಕ್ಕಿಂತ ಹೆಚ್ಚಾಗಿದೆ. ಸೂರ್ಯನಂತೆ ತನ್ನ ತೇಜಸ್ಸಿನಿಂದ ಬೆಳಗುತ್ತಿರುವ ಆ ಸಭೆಯಲ್ಲಿ ಯಾರು ಯಾರಿಗೆ ಏನೇನು ಬೇಕೋ ಅವೆಲ್ಲವೂ ಸಿದ್ಧವಾಗಿರುವುದು. ಇದೇ ಆ ಸಭೆಯ ವೈಶಿಷ್ಟö್ಯ. ಮೇಲಾಗಿ ಆ ಸಭೆಯು ಸಮ ವಾತಾವರಣದಿಂದ ಕೂಡಿರುತ್ತದೆ. ಅಲ್ಲಿ ಕುಳಿತವರಿಗೆ ಚಳಿಯೂ ಆಗುವುದಿಲ್ಲ, ಸೆಕೆಯೂ ಆಗುವುದಿಲ್ಲ, ಹೃದಯಾನಂದಕರವಾದ ವಾತಾವರಣವಿರುತ್ತದೆ. ಅದರ ಆಶ್ರಯವನ್ನು ಪಡೆದಿರುವವರಿಗೆ ದುಃಖವಿರುವುದಿಲ್ಲ, ಮುಪ್ಪಿನ ಭಯವಿಲ್ಲ, ಹಸಿವು ಬಾಯಾರಿಕೆಗಳುಂಟಾಗುವುದಿಲ್ಲ, ಮನಸ್ಸಿಗೆ ಹಿತವಲ್ಲದ ಯಾವುದೊಂದು ಕಾರ್ಯವೂ ಅಲ್ಲಿ ನಡೆಯುವುದಿಲ್ಲ. ಕೆಟ್ಟ ಕೆಲಸಗಳು ನಡೆಯುವುದಿಲ್ಲ. ಯಾವ ವಿಧವಾದ ಪ್ರತಿಕೂಲವೂ ಉಂಟಾಗುವುದಿಲ್ಲ. ದಣಿವಾಗುವುದಿಲ್ಲ. ಅಲ್ಲಿ ಕುಳಿತಿರುವವರಿಗೆ ಯಾವ ವಿಧವಾಧ ದುಷ್ಟ ಯೋಚನೆಗಳೂ ಉಂಟಾಗುವುದಿಲ್ಲ. ದೇವ-ಮಾನವರು ಇಚ್ಛಿಸಬಹುದಾದ ಸಕಲವಸ್ತುಗಳೂ ಸಹ ಸರ್ವದಾ ಸಿದ್ಧವಾಗಿರುತ್ತವೆ. ಸುಖ ಸಾಧಕಗಳಾದ ಸಕಲವಸ್ತುಗಳೂ, ಅನೇಕ ವಿಧವಾದ ಸ್ವಾದ ಭಕ್ಷö್ಯಗಳೂ ಭೋಜ್ಯ-ಪಾನೀಯಗಳೂ, ಲೇಹ್ಯ-ಚೋಷ್ಯಗಳೂ ಸಿದ್ಧವಾಗಿರುತ್ತವೆ. ಅಲ್ಲಿರುವ ಹೂವಿನ ಮಾಲೆಗಳು ಅತ್ಯಮೋಘವಾದ ಸುಗಂಧವನ್ನು ಹೊರಸೂಸುತ್ತವೆ. ಆ ಸಭಾಭವನದ ಸುತ್ತಲೂ ಇರುವ ವೃಕ್ಷಗಳು ಆಶ್ರಯ ಪಡೆಯುವವರಿಗೆ ಕೇಳಿದ ಪದಾರ್ಥಗಳನ್ನು ಕೊಡಲು ಸಮರ್ಥವಾಗಿವೆ. ಅವರ ಉಪಯೋಗಕ್ಕಾಗಿ ನಿರ್ಮಲವಾದ ಉಷ್ಣ-ಶೀತೋದಕಗಳು ಸದಾ ಸಿದ್ಧವಾಗಿರುವುವು.
ಆ ಸಭಾಮಂದಿರದಲ್ಲಿ ಶುದ್ಧಾತ್ಮರಾದ ಅನೇಕ ಸಹಸ್ರ ರಾಜರ್ಷಿಗಳೂ, ಬ್ರಹ್ಮರ್ಷಿಗಳೂ ಸದಾಕಾಲದಲ್ಲಿಯೂ ಇರುತ್ತಾರೆ. ವಿವಸ್ವಂತನ ಮಗನಾದ ಯಮರಾಜನ ಸೇವೆಯನ್ನು ಮಾಡುತ್ತಾರೆ. ಅವರಲ್ಲಿ ಸುಪ್ರಸಿದ್ಧರಾದವರ ಕೆಲವು ನಾಮಧೇಯಗಳನ್ನು ಹೇಳುವೆನು ಕೇಳು, ಯುಧಿಷ್ಠಿರ ಅವರ ನಾಮೋಚ್ಛಾರಣೆಯೂ ಮತ್ತು ಶ್ರವಣವೂ ಸಹ ಪಾಪಹಾರಿಯಾದುದು.
ಯಯಾತಿ, ನಹುಷ, ಪುರು, ಮಾಂಧಾತೃ, ಸೋಮಕ, ನೃಗ, ತ್ರಸದಸ್ಯು, ಕೃತವೀರ್ಯ, ಶ್ರುತಶ್ರವಸ, ಅರಿಷ್ಟನೇಮಿ ಸಿದ್ಧ, ಕೃತವೇಗ ಕೃತಿ, ನಿಮಿ, ಪ್ರತರ್ದನ, ಶಿಬಿ, ಮತ್ಸö್ಯ, ಪೃಥುಲಾಕ್ಷ, ಬೃಹದ್ರಥ, ವಾರ್ತ, ಮರುತ್ತ, ಕುಶಿಕ, ಸಾಂಕಾಶ್ಯ, ಸಾಂಕೃತಿ, ಧ್ರುವ, ಚತರಶ್ವ, ಸದಶ್ವೋರ್ಮಿ, ಕಾರ್ತವೀರ್ಯ, ಭರತ, ಸುರಥ, ಸುನೀಥ, ನಿಶಠ, ನಲ, ದಿವೋದಾಸ, ಸುಮನಸ, ಅಂಬರೀಷ, ಭಗೀರಥ, ವ್ಯಶ್ವ, ಸದಸ್ವ, ಮಧ್ಯಶ್ವ, ಪೃಥುವೇಗ, ಪೃಥುಶ್ರವಸ, ಪೃಷದಶ್ವ, ವಸುಮನಸ, ಕ್ಷÄಪ, ರುಷದ್ರು, ವೃಷಸೇನ, ಪುರುಕುತ್ಸ, ಅರ್ಷ್ಟಿಷೇಣ, ದಿಲೀಪ, ಉಶೀನರ, ಔಶೀನರ, ಪುಂಡರೀಕ, ಶರ್ಯಾತಿ, ಶರಭ, ಸುಚಿ, ಅಂಗ, ಅರಿಷ್ಟ, ವೇನ, ದುಷ್ಯಂತ, ಸೃಂಜಯ, ಜಯ, ಭಾಂಗಾಸುರಿ, ಸುನೀಥ, ನಿಷಧ, ವಹೀನರ, ಕರಂಧಮ, ಬಾಹ್ಲಿಕ, ಸುದ್ಯುಮ್ನ, ಮಧು, ಐಲ, ಮರುತ್ತ, ಕಪೋತರೋಮ, ತೃಣಕ, ಸಹದೇವ, ಅರ್ಜುನ, ವ್ಯಶ್ವ, ಸಾಶ್ವ, ಕೃತಾಶ್ವ, ಶಶಬಿಂದು, ದಶರಥ, ಕಕುತ್ಸ÷್ಥ, ಪ್ರವರ್ಧನ ಅಲರ್ಕ, ಕಕ್ಷಸೇನ, ಗಯ, ಗೌರಾಶ್ವ, ವೈನ್ಯ, ವಾರಿಸೇನ, ಪುರುಜಿತ್, ಜನಮೇಜಯ, ಪರಶುರಾಮ, ನಾಭಾಗ, ಸಗರ, ಭೂರಿದ್ಯುಮ್ನ, ಮಹಾಶ್ವ, ಪೃಥಾಶ್ವ, ಜನಕ, ಬ್ರಹ್ಮದತ್ತ, ತ್ರಿಗರ್ತ, ಉಪರಿಚರ, ಇಂದ್ರದ್ಯುಮ್ನ, ಭೀಮಜಾನು, ಗೌರಪೃಷ್ಠ, ಅನಘ, ಲಯ, ಪದ್ಮ, ಮುಚುಕುಂದ, ಭೂರಿದ್ಯುಮ್ನ, ಪ್ರಸೇನಜಿತ್, ಅರಿಷ್ಟನೇಮಿ, ಸುದ್ಯುಮ್ನ, ಪೃಥುಲಾಶ್ವ, ಅಷ್ಟಕ, ಮತ್ಸö್ಯ, ನೀಪ, ಗಯವಂಶಗಳ ನೂರಾರು ರಾಜರು, ಧೃತರಾಷ್ಟçರೆಂಬ ಹೆಸರಿನ ನೂರುಮಂದಿ ಅರಸರೂ, ಜನಮೇಜಯರೆಂಬ ಹೆಸರಿನ ಎಂಭತ್ತು ರಾಜರೂ, ಬ್ರಹ್ಮದತ್ತ ಎಂಬ ಹೆಸರಿನ ನೂರು ರಾಜರೂ, ವೀರ ಮತ್ತು ಈರಿ ಎಂಬ ಹೆಸರಿನ ನೂರು ರಾಜರೂ, ಭೀಷ್ಮರೆಂಬ ಹೆಸರಿನ ಇನ್ನೂರು ರಾಜರೂ, ಭೀಮ ಎಂಬ ಹೆಸರಿನ ನೂರು ರಾಜರೂ, ಪ್ರತಿವಿಂದ್ಯು ಎಂಬ ಹೆಸರಿನ ನೂರು ರಾಜರೂ, ನೂರು ನಾಗರಾಜರೂ, ನೂರು ಹಯವಂಶದ ರಾಜರೂ, ನೂರು ಪಲಾಶಾಧಿಪತಿಗಳೂ, ನೂರು ಕಾಶ-ಕುಶಾಧಿಪತಿಗಳೂ, ರಾಜಾಧಿರಾಜನಾದ ಶಂತನು ಮತ್ತು ನಿಮ್ಮ ತಂದೆಯಾದ ಪಾಂಡುರಾಜ, ಉಶಂಗವ, ಶತರಥ, ದೇವರಾಜ, ಜಯದ್ರಥ, ಮಂತ್ರಿ ಸಮೇತನಾದ ವೃಷದರ್ಭ, ಶಶಬಿಂದು ಎಂಬ ಹೆಸರಿನ ಸಹಸ್ರಾರು ರಾಜರೂ ಇವರೇ ಅಲ್ಲದೆ ಅಶ್ವಮೇಧಯಾಗಗಳನ್ನು ಮಾಡಿ ಸಾವಿರಾರು ಮಂದಿ ಬ್ರಾಹ್ಮಣರಿಗೆ ಪಾರಿತೋಷಕಗಳನ್ನು ಕೊಟ್ಟ ನೂರಾರು ರಾಜರೂ ಆ ಸಭೆಯಲ್ಲಿ ಉಪವಿಷ್ಟರಾಗಿ ವೈವಸ್ವತನನ್ನು ಆರಾಧನೆ ಮಾಡುತ್ತಾರೆ.
ಅಗಸ್ತö್ಯರು, ಮತಂಗ, ಕಾಲ, ಮೃತ್ಯು, ಯಜ್ಞಕರ್ತರು, ಸಿದ್ಧರು, ಯೋಗಿಗಳು, ಪಿತೃದೇವತೆಗಳಲ್ಲಿ ಮುಖ್ಯರಾದ ಅಗ್ನಿಷ್ವಾತ್ತರು, ಫೇನಪರು, ಊಷ್ಟಪರು, ಸ್ವಧಾವಂತರು ಬರ್ಹಿಷದರು, ಮತ್ತು ಇತರ ಸಶರೀರ ಪಿತೃದೇವತೆಗಳು ಸದಾ ಯಮನ ಸೇವೆ ಮಾಡುತ್ತಿರುತ್ತಾರೆ. (ಮುಂದುವರಿಯುವುದು)
ಸAಗ್ರಹ : ಜಿ. ರಾಜೇಂದ್ರ, ಮಡಿಕೇರಿ.