ಮಡಿಕೇರಿ, ಸೆ. ೧೧: ಕರಿಮೆಣಸು ಕಳ್ಳತನ ಮಾಡಿದ್ದ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ಶ್ರೀಮಂಗಲ ಪೊಲೀಸರು; ನಾಲ್ವರು ಆರೋಪಿ ಮಡಿಕೇರಿ, ಸೆ. ೧೧: ಕರಿಮೆಣಸು ಕಳ್ಳತನ ಮಾಡಿದ್ದ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ಶ್ರೀಮಂಗಲ ಪೊಲೀಸರು; ನಾಲ್ವರು ಆರೋಪಿ ಮಡಿಕೇರಿ, ಸೆ. ೧೧: ಕರಿಮೆಣಸು ಕಳ್ಳತನ ಮಾಡಿದ್ದ ಪ್ರಕರಣವೊಂದರ ತನಿಖೆ ನಡೆಸುತ್ತಿದ್ದ ಶ್ರೀಮಂಗಲ ಪೊಲೀಸರು; ನಾಲ್ವರು ಆರೋಪಿ (ಮೊದಲ ಪುಟದಿಂದ) ಸೆ. ೮ ರಂದು ಕರಿಮೆಣಸು ಅಪಹರಿಸಿದ್ದ ಕುರಿತು ದೂರು ದಾಖಲಾಗಿತ್ತು. ಇದರ ಬಗ್ಗೆ ತನಿಖೆ ನಡೆಸಿದ ಶ್ರೀಮಂಗಲ ಪೊಲೀಸರು ಆರೋಪಿಗಳಾದ ಪೋಕಳತೋಡುವಿನ ತೀತಿರ ಲೋಕೇಶ್, ಹರ್ಷ, ಹೆಚ್.ಡಿ. ಕೋಟೆಯ ನಾಗೇಶ್ ಹಾಗೂ ಪಣಿಯರವರ ಅಣ್ಣು ಎಂಬವರನ್ನು ಬಂಧಿಸಿದ್ದಾರೆ.

ಬೊಳ್ಳಮ್ಮ ಅವರ ಔಟ್ ಹೌಸ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಕರಿಮೆಣಸನ್ನು ಮನೆಯ ಹೆಂಚು ತೆಗೆದು ಒಳ ನುಗ್ಗಿದ್ದ ಆರೋಪಿಗಳು ಕಳ್ಳತನ ಮಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎಸ್ಪಿ ಕ್ರಮಾ ಮಿಶ್ರಾ, ಡಿವೈಎಸ್‌ಪಿ ಜಯಕುಮಾರ್, ವೃತ್ತ ನಿರೀಕ್ಷಕ ಮಂಜಪ್ಪ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ರವಿಶಂಕರ್, ಎಎಸ್‌ಐ ಬೋಪಯ್ಯ, ಸಿಬ್ಬಂದಿಗಳಾದ ವಿಶ್ವನಾಥ್, ಧನಪತಿ, ಮಂಜುನಾಥ್, ಖಾಲಿದ್, ಶಿವಪ್ಪ, ರಘು ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.