ಶನಿವಾರಸAತೆ, ಸೆ. ೧೧: ನಿಡ್ತ ಗ್ರಾ.ಪಂ. ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೨೩ ವರ್ಷ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಬಿ.ಪಿ. ಚಿನ್ನಪ್ಪ ಅವರನ್ನು ಬೀಳ್ಕೊಡಲಾಯಿತು.
ಪ್ರಾಥಮಿಕ ಕೃಷಿ ಪತ್ತಿನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ಬಿ. ನಾಗಪ್ಪ ಅಧ್ಯಕ್ಷತೆ ವಹಿಸಿ ನಿವೃತ್ತ ಬಿ.ಪಿ. ಚಿನ್ನಪ್ಪ ಅವರಿಗೆ ಚಿನ್ನದ ಉಂಗುರ ತೊಡಿಸಿ ಸನ್ಮಾನಿಸಿದರು.
ಆಡಳಿತ ಮಂಡಳಿಯ ಮಂಜಪ್ಪ, ಜಗದೀಶ್, ಕಾರ್ತಿಕ್ ಮಾತನಾಡಿದರು. ಸಭೆಯಲ್ಲಿ ಉಪಾಧ್ಯಕ್ಷ ಸಿ.ಪಿ. ತೀರ್ಥಾನಂದ, ನಿರ್ದೇಶಕರುಗಳಾದ ಹೆಚ್.ಪಿ. ಶೇಷಾದ್ರಿ, ಡಿ.ಬಿ. ಧರ್ಮಪ್ಪ, ಎ.ಎಸ್. ತಂಗಮ್ಮ, ಜಿ.ಬಿ. ಲಿಂಗರಾಜ್, ಎಸ್.ಆರ್. ಕಾರ್ತಿಕ್, ಡಿ.ಎನ್. ಜಗದೀಶ್, ಎ.ಜೆ. ಪೊನ್ನಪ್ಪ, ಹೆಚ್.ಎಂ. ದೊಡ್ಡೇಗೌಡ, ಎನ್.ಆರ್. ಪುಟ್ಟಯ್ಯ, ಹೆಚ್.ಟಿ. ನವೀನ್ ಕುಮಾರ್ ಹಾಗೂ ನೌಕರ ವರ್ಗದವರು ಉಪಸ್ಥಿತರಿದ್ದರು.