ಮಡಿಕೇರಿ, ಸೆ. ೮: ೧೬೩೩ ರಿಂದ ೧೮೩೪ ರವರೆಗೆ, ಒಟ್ಟು ೨೦೧ ವರ್ಷಗಳ ಕಾಲ ಹಾಲೇರಿ ರಾಜರ ಆಳ್ವಿಕೆ ಸಂದರ್ಭ ಮಡಿಕೇರಿ ಕೋಟೆ ಹಾಗೂ ನಾಲ್ಕುನಾಡು ಅರಮನೆಯಲ್ಲಿ ಹತ್ಯೆಗೊಳಗಾದ ಕೊಡವ ಸಮುದಾಯದ ಹಿರಿಯರನ್ನು ಸ್ಮರಿಸುವ ಸಲುವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಡಿಕೇರಿ ಕೋಟೆ ಆವರಣದಲ್ಲಿ ಅಗಲಿದ ಹಿರಿಯರಿಗೆ ಮೀದಿ ಅರ್ಪಿಸಲಾಯಿತು. ಕೈಲ್‌ಪೊಳ್ದ್ ಅಂಗವಾಗಿ ತಾ. ೪ ರಂದು ನಡೆದ ಈ ಕಾರ್ಯಕ್ರಮದಲ್ಲಿ ಸಿ.ಎನ್.ಸಿ. ಅಧ್ಯಕ್ಷ ನಂದಿನೆರವAಡ ಯು. ನಾಚಪ್ಪ ಸೇರಿದಂತೆ ಸಂಘಟನೆಯ ಪ್ರಮುಖರು ಹಾಜರಿದ್ದರು.