ಸುಂಟಿಕೊಪ್ಪ, ಸೆ. ೮: ಯೇಸುಕ್ರಿಸ್ತರ ತಾಯಿ ಕ್ಯಾಥೋಲಿಕ್ ಕ್ರೆöÊಸ್ತರ ಮಾತೆ ಮರಿಯಮ್ಮನವರ ಜನ್ಮದಿನೋತ್ಸವವನ್ನು ಇಲ್ಲಿನ ಸಂತ ಮೇರಿ ಶಾಲಾ ಸಭಾಂಗಣದಲ್ಲಿ ಸರಳ ರೀತಿಯಲ್ಲಿ ಸಾಮಾಜಿಕ ಅಂತರ ದೊಂದಿಗೆ ದಿವ್ಯ ಬಲಿಪೂಜೆ ನೇರವೇರಿಸಲಾಯಿತು.

ಹೊಸ ತೆನೆಗಳನ್ನು ತೆಗೆದು ಕೊಂಡು ಮೆರವಣಿಗೆ ಮೂಲಕ ಶಾಲಾ ಸಭಾಂಗಣಕ್ಕೆ ಆಗಮಿಸಿದ ಸಂತ ಅಂತೋಣಿ ದೇವಾಲಯದ ಫಾದÀರ್ ಅರುಳ್ ಸೆಲ್ವಕುಮಾರ್ ಹಾಗೂ ಧರ್ಮಗುರುಗಳಾದ ಕೂಡಿಗೆ ತಪೋವನಾ ಧರ್ಮಗುರು ಜಾನ್ ಪಿಂಟೋ ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು. ದಿವ್ಯ ಬಲಿಪೂಜೆ ಪ್ರವಚನ ಬಳಿಕ ಧರ್ಮಗುರುಗಳು ಮೊಂತಿಪೆಸ್ತ್ ಅಂಗವಾಗಿ ನೂತನ ತೆನೆಗಳನ್ನು ಆಶಿರ್ವಚಿಸಿ ವಿತರಿಸಿದರು. ಕ್ರೆöÊಸ್ತ ಬಾಂದವರು ಮನೆ ಮನೆಗಳಿಂದ ತಂದಿದ್ದ ಬಗೆ ಬಗೆಯ ಪುಷ್ಪಗಳನ್ನು ಮಾತೆ ಮರಿಯಮ್ಮನವರಿಗೆ ಸಮರ್ಪಿಸುವ ಮೂಲಕ ಹಬ್ಬದ ಸಡಗರಕ್ಕೆ ಮುನ್ನುಡಿ ಇಟ್ಟರು.

ಈ ಧÀರ್ಮಕೇಂದ್ರಕ್ಕೆ ಸೇರಿದ ಗ್ಲಾನಿಯ ಡಿಸೋಜ ಎಸ್‌ಎಸ್‌ಎಲ್‌ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತಮ ಸಾಧನೆಯನ್ನು ಮಾಡಿದ್ದು, ಅವರನ್ನು ಸಮುದಾಯದ ವತಿಯಿಂದ ಧರ್ಮ ಗುರುಗಳು ಸನ್ಮಾನಿಸಿ ಗೌರವಿಸಿದರು.

ಅಬ್ಬೂರುಕಟ್ಟೆ ಚರ್ಚ್ನಲ್ಲಿ ಹೊಸ ಅಕ್ಕಿ ಹಬ್ಬಾಚರಣೆ

ಸೋಮವಾರಪೇಟೆ: ಸಮೀಪದ ಅಬ್ಬೂರುಕಟ್ಟೆಯ ಸಂತ ಲಾರೆನ್ಸ್ ಚರ್ಚ್ನಲ್ಲಿ ಮೇರಿ ಮಾತೆಯ ಹಬ್ಬ (ಹೊಸ ಅಕ್ಕಿ ಹಬ್ಬ)ವನ್ನು ಕ್ರೆöÊಸ್ತ ಸಮುದಾಯದವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಹಬ್ಬದ ಅಂಗವಾಗಿ ಚರ್ಚ್ನಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಗಾಯನ ಪೂಜೆ, ಹೂಗಳ ಅಭಿಷೇಕ ನಡೆಯಿತು. ಚರ್ಚ್ನ ಧರ್ಮಗುರು ಜಾನ್ ಡಿಕುನ್ನಾ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. ರೋಮನ್ ಕ್ಯಾಥೋಲಿಕ್ ಸೇವಾ ಸಂಘದ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ಸೇರಿದಂತೆ ಸುತ್ತಮುತ್ತಲ ಕ್ರೆöÊಸ್ತ ಸಮುದಾಯದವರು ಹಬ್ಬಾಚರಣೆ ಯಲ್ಲಿ ಭಾಗವಹಿಸಿದ್ದರು.