ಸುAಟಿಕೊಪ್ಪ, ಸೆ. ೮: ಪ್ರತಿಯೊಬ್ಬ ಮಹಿಳೆಯ ವ್ಯವಹಾರಿಕ ಸಾಮಾಜಿಕ ಜ್ಞಾನವನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಪ್ರತಿ ಮಾಸಿಕದಲ್ಲಿ ಮಹಿಳೆ ಯರಿಗೆ ಜ್ಞಾನವಿಕಾಸ ಕಾರ್ಯಕ್ರಮ ದಡಿಯಲ್ಲಿ ವ್ಯವಹಾರಿಕ ಹಾಗೂ ಸಂಸಾರಿಕ ಮಾಹಿತಿಯನ್ನು ನೀಡಿ ಮಹಿಳೆಯರ ಸಬಲೀಕರಣಗೊಳಿಸ ಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಜಯಂತಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಂಟಿಕೊಪ್ಪ ವಲಯದ ಹಾಗೂ ಒಕ್ಕೂಟದ ವತಿಯಿಂದ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಜ್ಞಾನವಿಕಾಸ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಬೀದಿನಾಟಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಜ್ಞಾನವಿಕಾಸ ಕೇಂದ್ರ ಗಳನ್ನು ತೆರೆಯಲಾಗಿದೆ. ಸೋಮ ವಾರಪೇಟೆ ತಾಲೂಕಿನಲ್ಲಿ ೨೫ ಜ್ಞಾನ ವಿಕಾಸ ಕೇಂದ್ರಗಳಿದ್ದು, ಸುಂಟಿಕೊಪ್ಪ ದಲ್ಲಿ ೪ ಕೇಂದ್ರಗಳು ಕಾರ್ಯಾ ಚರಿಸುತ್ತಿದೆ. ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಅಪೌಷ್ಟಿಕತೆ, ಸಾಮಾನ್ಯ ವ್ಯವಹಾರ, ವೈಯಕ್ತಿಕ ಸ್ವಚ್ಛತೆ, ಸಂಸಾರದಲ್ಲಿ ತಲೆದೋರುವ ಬಿನ್ನಾಭಿಪ್ರಾಯಗಳನ್ನು ನಿಭಾಯಿಸುವ ಬಗ್ಗೆ ಸರಕಾರ ಸೇರಿದಂತೆ ಯೋಜನೆÀ ಗಳನ್ನು ಹೊಂದಿಕೊಳ್ಳುವ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡ ಲಾಗುತ್ತಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ರಮಣಿ ವಹಿಸಿ ದ್ದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುಂಟಿಕೊಪ್ಪ ಪೊಲೀಸ್ ಠಾಣೆ ಮುಖ್ಯಪೇದೆ ಜಗದೀಶ್, ವಲಯ ಮೇಲ್ವಿಚಾರಕಿ ಪುಷ್ಪಲತಾ, ದಾವಣ ಗೆರೆಯ ಶುÈತಿ ಸಂಸ್ಕೃತ ಕಲಾ ತಂಡದ ನಾಯಕ ವೇದಿಕೆಯಲ್ಲಿದ್ದರು. ಸೇವಾ ಪ್ರತಿನಿಧಿಗಳು, ವಿವಿಧ ಒಕ್ಕೂಟದ ಅಧ್ಯಕ್ಷರು ಸ್ವಸಹಾಯ ಸಂಘದ ಪದಾ ಧಿಕಾರಿಗಳು ಇದ್ದರು. ದಾವಣಗೆರೆಯ ಶ್ರುತಿ ಸಂಸ್ಕೃತ ಕಲಾ ತಂಡದವರಿAದ ನಾಟಕ ಪ್ರದರ್ಶನ ನಡೆಯಿತು.