ಮಡಿಕೇರಿ, ಸೆ. ೭: ಮೈಸೂರಿನ ಶಾರದಾವಿಲಾಸ್‌ನಲ್ಲಿ ನಡೆದ ೨೦೨೦-೨೦೨೧ನೇ ಸಾಲಿನ ರಾಜ್ಯಮಟ್ಟದ ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಡಿಕೇರಿಯ ದೀಯಾ ದರ್ಶಿನಿ ೧೨ ವಯೋಮಾನದೊಳಗಿನ ಸೋಲೋ ವಿಭಾಗದಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ದ್ವಿತೀಯ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕಳೆದ ೩ ವರ್ಷಗಳಿಂದ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ನೃತ್ಯ ಸಂಸ್ಥೆಯ ಮಹೇಶ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾಳೆ.