ಗೋಣಿಕೊಪ್ಪಲು, ಸೆ. ೭ : ದೇವರಪುರದ ಕನ್ನಂಬಾಡಿಯ ಗಿರಿಜನ ಕುಟುಂಬದ ಮನೆ ಕೆಡವಿದ ತಪ್ಪಿತಸ್ಥರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್.ಪರಶುರಾಮ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆಂಗ್ಲೋ ಇಂಡಿಯನ್ ಕುಟುಂಬವೊAದು ಕುಂಜಿಯ ಅಜ್ಜನಿಗೆ ದಾನದ ರೂಪದಲ್ಲಿ ನೀಡಿದ ಜಾಗವನ್ನು, ಏಕಾಏಕಿ ನ್ಯಾಯಾಲಯದ ಆದೇಶವನ್ನು ತೋರಿಸದೆ ಕೆಡವಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಇದರಿಂದ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬ ಅತಂತ್ರವಾಗಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.