ಸುಂಟಿಕೊಪ್ಪ, ಸೆ. ೭: ಆಂಜನಗೇರಿ ಬೆಟ್ಟಗೇರಿ ತೋಟದ ಕಾರ್ಮಿಕರಲ್ಲಿ ಕೋವಿಡ್-೧೯ ಸೋಂಕು ೪೩ ಮಂದಿಯಲ್ಲಿ ಪತ್ತೆಯಾಗಿದ್ದು, ಮಂಗಳವಾರ ಸೋಂಕಿನ ವಿಚಾರ ತಿಳಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಈ ಭಾಗದ ಸೋಂಕಿತರು ಮನೆಯಿಂದ ಹೊರಬರಬಾರದು. ತೋಟದ ಮಾಲೀಕರು ಸೋಂಕಿತರಿಗೆ ಕೆಲಸ ನೀಡಬಾರದು ಎಂದು ಸೂಚಿಸಿದರು.
ಸೋಂಕಿತರು ಮನೆಯಿಂದ ಹೊರಬಂದು ಓಡಾಟ ನಡೆಸದಂತೆ ಗ್ರಾಮ ಪಂಚಾಯತ್, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಎಚ್ಚರ ವಹಿಸಬೇಕು. ಒಂದು ವೇಳೆ ನಿರ್ಲಕ್ಷö್ಯ ತೋರಿದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಿ ಎಂದರು.
ಗ್ರಾಮ ಪಂಚಾಯಿತಿ ವತಿಯಿಂದ ಈ ಸ್ಥಳಗಳಿಗೆ ಸ್ಯಾನಿಟೈಸರ್ ಸಿಂಪಡಿಸಬೇಕು. ವೈದ್ಯಾಧಿಕಾರಿಗಳು ಹೆಚ್ಚಿನ ಗಮನ ಹರಿಸುವಂತೆ ಸೂಚಿಸಿದರು. ನಂತರ ಕೋವಿಡ್ನಿಂದ ಮೃತಪಟ್ಟವರ ಮನೆಗೆ ಭೇಟಿ ನೀಡಿದರು.
ಇದಕ್ಕೂ ಮೊದಲು ಸುಂಟಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚರ್ಚಿಸಿದರು. ಟಿಹೆಚ್ಒ ಶ್ರೀನಿವಾಸ, ಆರ್.ಐ. ಶಿವಪ್ಪ, ಗ್ರಾಮ ಲೆಕ್ಕಿಗ ನಾಗೇಂದ್ರ, ವೈದ್ಯಾಧಿಕಾರಿ ಡಾ. ಸಹನಾ, ಹರದೂರು, ಪಂಚಾಯಿತಿ ಪಿಡಿಒ ಲೋಕೇಶ್, ಅಧ್ಯಕ್ಷ ಪದ್ಮನಾಭ, ಆಶಾಕಾರ್ಯಕರ್ತೆ ರೂಪ ಹಾಗೂ ಇತರರು ಇದ್ದರು.