ಮಡಿಕೇರಿ, ಸೆ. ೭: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ವತಿಯಿಂದ ಭಾಗಮಂಡಲ ಕೆವಿಜಿ ಐಟಿಐ ಕಾಲೇಜಿನಲ್ಲಿ ತಾ. ೧೦ ರಂದು ಬೆಳಿಗ್ಗೆ ೧೦ ಗಂಟೆಗೆ ಅರೆಭಾಷೆ ಸಂಸ್ಕೃತಿ ಶಿಬಿರ ನಡೆಯಲಿದೆ.

ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಅಧ್ಯಕ್ಷ ಕಿಶೋರ್ ಕುದುಕುಳಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷಿö್ಮÃನಾರಾಯಣ ಕಜೆಗದ್ದೆ, ಭಾಗಮಂಡಲ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕುಂದಲ್ವಾಡಿ ದಿವಾಕರ, ಕೊಡಗು ಗೌಡ ವಿದ್ಯಾಸಂಘದ ನಿರ್ದೇಶಕ ದೇವಂಗೋಡಿ ಹರ್ಷ, ಕುಶಾಲನಗರದ ಕುಲ್ಲಚೆಟ್ಟಿ ಕಾಶಿ ಹಾಗೂ ತಣ್ಣಿಮಾನಿ ಗ್ರಾ.ಪಂ. ಸದಸ್ಯ ದಂಡಿನ ಜಯಂತ ಇತರರು ಪಾಲ್ಗೊಳ್ಳಲಿದ್ದಾರೆ.

ತಾ. ೧೨ ರಂದು ಮಧ್ಯಾಹ್ನ ೨ ಗಂಟೆಗೆ ಸಮಾರೋಪ ಸಮಾರಂಭವು ಭಾಗಮಂಡಲ ಕೆವಿಜಿ ಐಟಿಐ ಕಾಲೇಜಿನಲ್ಲಿ ನಡೆಯಲಿದೆ.