ಗೋಣಿಕೊಪ್ಪಲು, ಸೆ. ೭: ಅತೀ ವೇಗದಿಂದ ಬಂದ ಕಾರೊಂದು ಚೆಕ್‌ಪೋಸ್ಟ್ನ ಬಳಿ ಇರುವ ಶೆಡ್‌ಗೆ ನುಗ್ಗಿದ ಪರಿಣಾಮ ಶೆಡ್ ಸಂಪೂರ್ಣ ಜಖಂಗೊAಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದರಿಂದಾಗಿ ಭಾರೀ ಅನಾಹುತ ತಪ್ಪಿದಂತಾಗಿದೆ.
ತಿತಿಮತಿ ಸಮೀಪದ ಆನೆಚೌಕೂರು ಚೆಕ್‌ಪೋಸ್ಟ್ನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ದಿನದ ೨೪ ಗಂಟೆಯೂ ವಿವಿಧ ಪಾಳಿಯದಲ್ಲಿ ಕೋವಿಡ್-೧೯ ಸಂಬAಧ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಕಾರಣಕ್ಕಾಗಿ ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಮಂಗಳವಾರ ಮುಂಜಾನೆ ೪.೩೦ರ ಸುಮಾರಿಗೆ ಪಿರಿಯಾಪಟ್ಟಣ ಮಾರ್ಗವಾಗಿ ಗೋಣಿಕೊಪ್ಪ ಕಡೆಗೆ ಕೇರಳ ನೊಂದಾವಣೆಯ ಕಾರೊಂದು ತೆರಳುತ್ತಿತ್ತು. ಈ ವೇಳೆ ಕಾರು ನಿಯಂತ್ರಣ ತಪ್ಪಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಶೆಡ್‌ನ ಒಳಗೆ ನುಗ್ಗಿದ ಪರಿಣಾಮ ಶೆಡ್ ಸಂಪೂರ್ಣ ಜಖಂಗೊAಡಿದೆ.
ಅದೃಷ್ಟವಶಾತ್ ಕಳೆದ ಎರಡು ದಿನಗಳಿಂದ ವಿಪರೀತ ಮಳೆ ಗಾಳಿ ಬೀಸುತ್ತಿದ್ದರಿಂದ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ಸಮೀಪದ ಅರಣ್ಯ ಕಚೇರಿಯ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದರಿಂದಾಗಿ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸಮಸ್ಯೆ ಎದುರಾಗಲಿಲ್ಲ. ಕಾರಿನ ಮುಂಭಾಗಕ್ಕೆ ಸೇರಿದಂತೆ ಶೆಡ್‌ನಲ್ಲಿದ್ದ ಸಿಬ್ಬಂದಿಗಳ ದ್ವಿಚಕ್ರ ವಾಹನಗಳಿಗೆ, ನಾಮಫಲಕ ಹಾಗೂ ಪಿಠೋಪಕರಣಗಳಿಗೆ ಹಾನಿ ಸಂಭವಿಸಿದೆ.
ಕೇರಳ ಮೂಲದ ಸುರೇಂದ್ರ ಎಂಬ ವ್ಯಕ್ತಿ ಕಾರು ಚಾಲನೆ ಮಾಡುತ್ತಿದ್ದು, ಅತೀ ವೇಗದಿಂದ ಹಾಗೂ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಸಂಬAಧ ಪಿರಿಯಾಪಟ್ಟಣ ಠಾಣೆಯಲ್ಲಿ ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ. ತಾಲೂಕು ತಹಶೀಲ್ದಾರ್ ಯೋಗಾನಂದ್, ಪೊನ್ನಂಪೇಟೆ ಕಂದಾಯ ಅಧಿಕಾರಿ ಸುಧೀಂದ್ರ, ಶಿಕ್ಷಣ ಇಲಾಖಾಧಿಕಾರಿ ಸುರೇಂದ್ರ, ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕಾರು ಚಾಲಕನಿಗೆ ಯಾವುದೇ ಅಪಾಯ ಸಂಭವಿಸಿಲ್ಲ.