ಸಿದ್ದಾಪುರ, ಸೆ ೨ : ಹೊಸ್ಕೇರಿ ಗ್ರಾಮದಲ್ಲಿ ಖಾಸಗಿ ಸಂಸ್ಥೆಯವರು ಖರೀದಿಸಿರುವ ಜಾಗದಲ್ಲಿ ವಿಶ್ವ ಪರಿಸರ ಶಾಲೆಯನ್ನು ಪ್ರಾರಂಭಿಸಲು ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು ಹೋರಾಟ ಮಾಡಲು ನಿರ್ಧರಿಸಿದೆ. ಸಿದ್ದಾಪುರದ ಕೊಡವ ಕಲ್ಚರಲ್ ಅಸೋಸಿಯೇಶನ್ ಸಭಾಂಗಣದಲ್ಲಿ ಸೇವ್ ಹೊಸ್ಕೇರಿ ಸಂಘಟನೆ ವತಿಯಿಂದ ನಡೆದ ಸಭೆಯಲ್ಲಿ ಜಿಲ್ಲೆಯ ೨೦ಕ್ಕೂ ಅಧಿಕ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮಾತನಾಡಿ ಹೊಸ್ಕೇರಿ ಗ್ರಾಮದಲ್ಲಿ ಹೊರ ರಾಜ್ಯದ ಸಂಸ್ಥೆಯೊAದು ನೂರಾರು ಎಕರೆ ಜಾಗ ಖರೀದಿಸಿ ಬೃಹತ್ ಕಟ್ಟಡಗಳನ್ನು ಹಾಗೂ ಹೆಲಿಪ್ಯಾಡ್ ಸೇರಿದಂತೆ ವಿದ್ಯುತ್ ಸಂಪರ್ಕವನ್ನು ಅವೈಜ್ಞಾನಿಕ ನಿರ್ಮಾಣ ಮಾಡುತ್ತಿದ್ದೆ. ಪರಿಸರವನ್ನು ನಾಶ ಮಾಡಿ ಪರಿಸರ ಶಾಲೆಯ ಹೆಸರಿನಲ್ಲಿ ಹೊರ ರಾಜ್ಯದ ಸಂಸ್ಥೆಯವರ ವಿರುದ್ಧ ಉಗ್ರ ಹೋರಾಟ ಮಾಡಬೇಕೆಂದರು. ಈ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲ ನೀಡುತ್ತದೆ. ಅಲ್ಲದೇ ರಾಜ್ಯದ ಮುಖಂಡರು ಹಾಗೂ ಮಂಡ್ಯ, ಮೈಸೂರಿನ ರೈತರನ್ನು ಕೂಡ ಹೋರಾಟಕ್ಕೆ ಕರೆ ತರಲಾಗುವುದೆಂದರು.

ಯುಕೋ ಸಂಘಟನೆಯ ಪ್ರಮುಖರಾದ ಮಂಜು ಚಿಣ್ಣಪ್ಪ ಮಾತನಾಡಿ ಜಿಲ್ಲೆಯ ಪರಿಸರವನ್ನು ಉಳಿಸಲು ಸಂಘಟಿತರಾಗಿ ಹೋರಾಟ ಮಾಡಬೇಕು. ಹೋರಾಟವನ್ನು ಚಿವುಟಿ ಹಾಕಲು ರಾಜಕೀಯದವರು ಪ್ರಯತ್ನಿಸುತ್ತಾರೆ. ಇದಕ್ಕೆ ಜಗ್ಗಬಾರ ದೆಂದರು. ಜಿಲ್ಲೆಯ ಶಾಸಕರು ಹಾಗೂ ಸಂಸದರು ಈ ಹೋರಾಟಕ್ಕೆ ಬೆಂಬಲ ನೀಡದೇ ನಿರ್ಲಕ್ಷö್ಯ ವಹಿಸುತ್ತಿದ್ದಾ ರೆಂದು ದೂರಿದರು. ಶಾಲೆಯ ಸಂಸ್ಥೆಯ ವಿರುದ್ಧ ಗ್ರಾಮಸ್ಥರನ್ನು ಸೇರಿಸಿ ಮಡಿಕೇರಿಯಲ್ಲಿ ಪ್ರತಿಭಟನೆ ಮಾಡಬೇಕೆಂದರು.

ಸೇವ್ ಹೊಸ್ಕೇರಿ ಸಂಘಟನೆಯ ಅಧ್ಯಕ್ಷೆ ಡಾ. ಪುಷ್ಪ ಕುಟ್ಟಣ್ಣ ಮಾತನಾಡಿ ಹೊಸ್ಕೇರಿ ಗ್ರಾಮದಲ್ಲಿ ಖಾಸಗಿ ಸಂಸ್ಥೆಯ ವತಿಯಿಂದ ನಿರ್ಮಾಣ ಮಾಡುತ್ತಿರುವ ಬೃಹತ್ ಕಟ್ಟಡಗಳ ನಿರ್ಮಾಣದ ಬಗ್ಗೆ ೨೦೧೭ ರಿಂದಲೇ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಆದರೂ ಕೂಡ ಈ ಸಂಸ್ಥೆಯವರು ರಾಜಕೀಯ ಒತ್ತಡ ಬಳಸಿ ಜಾಗವನ್ನು ಭೂ ಪರಿವರ್ತನೆ ಮಾಡುವ ಮೂಲಕ ಜಾಗದಲ್ಲಿದ್ದ ಮರಗಳನ್ನು ಕಡಿದಿದ್ದಾರೆ ಎಂದು ಆರೋಪಿಸಿದರು. ಈ ಸಮಸ್ಯೆಯ ಬಗ್ಗೆ ಸಚಿವರುಗಳು ಜನಪ್ರತಿನಿಧಿಗಳು ಅಧಿಕಾರಿಗಳು ನಿರ್ಲಕ್ಷö್ಯ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳ ಬೆಂಬಲ ಪಡೆದು ಹೋರಾಟ ಮುಂದುವರೆಸುವುದಾಗಿ ತಿಳಿಸಿದರು.

ಅಖಿಲ ಕೊಡವ ಸಮಾಜದ ಯೂತ್ ವಿಂಗ್ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಮಾತನಾಡಿ ಕೊಡಗು ಜಿಲ್ಲೆಯ ನೆಲ, ಜಲ ವನ್ನು ಸಂರಕ್ಷಣೆ ಮಾಡುವುದು ಮುಖ್ಯ ಎಂದರು. ಈ ಹಿಂದೆ ಜಿಲ್ಲೆಯಲ್ಲಿ ೫ ಸೆಂಟ್ ಜಾಗಕ್ಕೆ ಮಾತ್ರ ಭೂ ಪರಿವರ್ತನೆ ಮಾಡಲು ಅವಕಾಶ ನೀಡಲಾಗುತ್ತಿತ್ತು. ಆದರೆ ಇದೀಗ ಹೊರ ರಾಜ್ಯದವರು ಜಿಲ್ಲೆಗೆ ಆಗಮಿಸಿ ರೆಸಾರ್ಟ್ ಹೋಂ ಸ್ಟೇ ಹೆಸರಿನಲ್ಲಿ ಜಾಗ ಖರೀದಿಸಿ ಭೂ ಪರಿವರ್ತನೆ ಮಾಡಿ ಬೆಟ್ಟ ಗುಡ್ಡಗಳನ್ನು ನಾಶ ಮಾಡುತ್ತಿದ್ದಾರೆಂದು ಆರೋಪಿಸಿದರು.

ಸೇವ್ ಹೊಸ್ಕೇರಿ ಪ್ರಮುಖರಾದ ಬಲ್ಲಚಂಡ ವಿಠಲ ಕಾವೇರಪ್ಪ ಮಾತನಾಡಿ ಪರಿಸರ ಶಾಲೆಯ ಹೆಸರಿನಲ್ಲಿ ಖಾಸಗಿ ಸಂಸ್ಥೆಯು ಪರಿಸರ ನಾಶ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಭೂ ಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ವಿವಿಧ ಸಂಘಟನೆಯ ಪ್ರಮುಖರಾದ ಪ್ರಿನ್ಸ್ ಗಣಪತಿ, ಅಜ್ಜಿನಿಕಂಡ ಡಾ. ಗಣಪತಿ, ಸದಾಡೆನ್ನೀಸ್, ಬಿದ್ದಂಡ ವೇಣು ಮಾದಯ್ಯ, ಶೈಲಾ, ಜಯ ಚಿಣ್ಣಪ್ಪ, ದೋಲ್ಪಡಿ ಯಶು, ನಂದಿನೆರವAಡ ದಿನೇಶ್, ಸನ್ನಿ ಸೋಮಣ್ಣ, ಅಭಿತ್ ಇನ್ನಿತರರು ಸಭೆಯಲ್ಲಿ ಮಾತನಾಡಿ ದರು. ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಚೇರಂಡ ಸುಭಾಷ್, ಬಲ್ಲಚಂಡ ಚಂAದನ್, ಕುಕ್ಕೇರ ಕೇಶು, ಮಂಡೇಪAಡ ಪ್ರವೀಣ್ ಬೋಪಯ್ಯ, ಸಿ.ಪಿ ನಂದ ಇನ್ನಿತರರು ಹಾಜರಿದ್ದರು. ಅಜ್ನಿಕಂಡ ವೀಣಾ ಕುಂಞಪ್ಪ ಪ್ರಾರ್ಥಿಸಿ ಸುಭಾಷ್ ಸ್ವಾಗತಿಸಿದರು. ಚಂದನ್ ವಂದಿಸಿದರು.