ಮಡಿಕೇರಿ: ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಹೆರವನಾಡು ಗ್ರಾಮದ ಉಡೋತ್‌ಮೊಟ್ಟೆ ಅಂಗನವಾಡಿ ಕೇಂದ್ರದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಆರೋಗ್ಯ ಇಲಾಖೆಯ ವತಿಯಿಂದ ನೀಡಲಾಯಿತು. ಹೆರವನಾಡು ಗ್ರಾಮ ಶೇ. ೧೦೦ ರಷ್ಟು ಲಸಿಕೆ ಸಾಧನೆ ಆಗಿದೆ.

ಈ ಸಂದರ್ಭ ಬೆಟ್ಟಗೇರಿ ಗ್ರಾಮ ಪಂಚಾಯಿತಿ ಸದಸ್ಯರಾದ ಗೋಪಾಲ ಪೂಜಾರಿ, ಎಂ.ಆರ್. ಮಣಿಕಂಠ ಮತ್ತು ಜಲಜಾಕ್ಷಿ ಕೆ.ಆರ್., ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಲಲಿತ ವಿ.ಯು., ಕೃತಿಕಾರಾಣಿ ಟಿ.ಆರ್. ಮತ್ತು ಆಶಾಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.ಚೆಯ್ಯಂಡಾಣೆ: ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತೋಕ್ಲು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಕೊರೊನಾ ಲಸಿಕೆ ನೀಡಲಾಯಿತು.

ಈ ಸಂದರ್ಭ ವೈದ್ಯಾಧಿಕಾರಿ ಡಾ. ಹೇಮಾವತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಎ. ಹನೀಫ್, ಕೆ.ವೈ. ಸಮೀರಾ, ಕೊರೊನಾ ವಾರಿಯರ್ಸ್ ಮಜೀದ್, ಆರೋಗ್ಯ ಸಿಬ್ಬಂದಿ ಸೀತಮ್ಮ, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಲಸಿಕೆ ಪಡೆಯಲು ಆಗಮಿಸಿದ ಎಲ್ಲರಿಗೂ ಗ್ರಾಮ ಪಂಚಾಯಿತಿ ಸದಸ್ಯ ಪಿ.ಎ. ಹನೀಫ್ ಅವರ ವತಿಯಿಂದ ಟೀ ಹಾಗೂ ಊಟದ ವವಸ್ಥೆ ಮಾಡಲಾಗಿತ್ತು.