ಕುಶಾಲನಗರ, ಸೆ. ೧: ಸಂಸ್ಕೃತ ಭಾಷೆಯಲ್ಲಿ ಪಾಠ ಪ್ರವಚನಗಳು ರೂಡಿಯಲ್ಲಿದ್ದ ಕಾಲದಲ್ಲಿ ಸಾಮಾನ್ಯ ಜನರಿಗೆ ಗ್ರಹಿಸಲು ಸಾಧ್ಯವಾಗದಿರುವ ಸಂದರ್ಭ ಸುಲಭವಾಗಿ ಆಡು ಭಾಷೆಯಲ್ಲಿ ತಲುಪಿಸುವ ನಿಟ್ಟಿನಲ್ಲಿ ವಚನ ಸಾಹಿತಿಗಳ ಮೂಲಕ ವಚನಗಳು ಬೆಳಕಿಗೆ ಬಂದಿದ್ದು,ಇದು ಇಂದಿಗೂ ಚಾಲ್ತಿಯಲ್ಲಿವೆ. ಶರಣ ಸಾಹಿತ್ಯ ಪರಿಷತ್ ಮೂಲಕ ಅಮೂಲ್ಯ ವಚನ ಸಂಪತನ್ನು ಉಳಿಸುವಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ತಿಳಿಸಿದ್ದಾರೆ.

ಶರಣ ಸಾಹಿತ್ಯ ಪರಿಷತ್ ಸೋಮವಾರಪೇಟೆ ಘಟಕದಿಂದ ಆಯೋಜಿಸಲಾಗಿದ್ದ ವಚನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೮೦೦ ವರ್ಷಗಳ ಹಿಂದೆ ರಚಿಸಿರುವ ವಚನಗಳ ತತ್ವಗಳು ಇಂದಿಗೂ ಬಳಕೆಯಲ್ಲಿದೆ, ಅಚ್ಚ ಕನ್ನಡದಲ್ಲಿ ವಚನಗಳು ಜನಸಾಮಾನ್ಯರಿಗೆ ತಲುಪುತ್ತಿವೆ, ಶರಣ ಸಾಹಿತ್ಯ ಪರಿಷತ್ ಮೂಲಕ ಜಾತಿ ಧರ್ಮಗಳ ಪರಿಮಿತಿ ಇಲ್ಲದೆ ಪ್ರಚಾರ ಪಡಿಸಬೇಕಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಶಿವಪ್ಪ, ಶರಣ ಸಾಹಿತ್ಯ ಪರಿಷತ್, ಸೋಮವಾರಪೇಟೆ ಘಟಕ ಅಧ್ಯಕ್ಷ ಮಹದೇವಪ್ಪ ಸೇರಿದಂತೆ ವಚನಾಸಕ್ತರು ಹಾಜರಿದ್ದರು.