ಜಿಡಿಪಿ ಹೆಚ್ಚಳ ಎಂದರೆ ಗ್ಯಾಸ್, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ: ರಾಹುಲ್ ಗಾಂಧಿ

ನವದೆಹಲಿ, ಸೆ. ೧: ಎಲ್‌ಪಿಜಿ, ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಗೆ ಸಂಬAಧಿಸಿದAತೆ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಳೆದ ಏಳು ವರ್ಷಗಳಲ್ಲಿ ಈ ವಸ್ತುಗಳ ಬೆಲೆ ಏರಿಕೆಯಿಂದ ೨೩ ಲಕ್ಷ ಕೋಟಿ ರೂಪಾಯಿ ಗಳಿಸಲಾಗಿದೆ ಎಂದು ಬುಧವಾರ ಹೇಳಿದ್ದಾರೆ. ರೈತರು, ಸಂಬಳದ ವರ್ಗ ಮತ್ತು ಕಾರ್ಮಿಕರು ಡಿಮಾನಿಟೈಸ್ ಆಗುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿಯ ಕೆಲವು ಕೈಗಾರಿಕೋದ್ಯಮಿ ಸ್ನೇಹಿತರು ಹಣಗಳಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಜಿಡಿಪಿ ಹೆಚ್ಚಳ ಎಂದರೆ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಎಂದರ್ಥ. ಕಳೆದ ಏಳು ವರ್ಷಗಳಲ್ಲಿ ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯಿಂದ ಸರ್ಕಾರ ೨೩ ಲಕ್ಷ ಕೋಟಿ ರೂಪಾಯಿ ಗಳಿಸಿದೆ ಎಂದು ಆರೋಪಿಸಿದ್ದಾರೆ. ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯಿಂದ ಬಂದ ಈ ಹಣ ಎಲ್ಲಿಗೆ ಹೋಗುತ್ತಿದೆ ಎಂದು ದೇಶದ ಜನರು ಸರ್ಕಾರವನ್ನು ಕೇಳಬೇಕು. "ಒಂದೆಡೆ ನೋಟು ರದ್ದತಿ ಮತ್ತೊಂದೆಡೆ ಹಣಗಳಿಕೆ. ಯಾರ ನೋಟು ರದ್ದತಿ ನಡೆಯುತ್ತಿದೆ -ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಮತ್ತು ಅನೌಪಚಾರಿಕ ವಲಯ, ಎಂಎಸ್‌ಎAಇಗಳು, ಗುತ್ತಿಗೆ ಕಾರ್ಮಿಕರು, ಸಂಬಳದ ವರ್ಗ ಮತ್ತು ಪ್ರಾಮಾಣಿಕ ಕೈಗಾರಿಕೋದ್ಯಮಿಗಳ ನೋಟು ರದ್ದಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಲ್ಕೆöÊದು ಸ್ನೇಹಿತರು ಮಾತ್ರ ಹಣ ಗಳಿಸುತ್ತಿದ್ದಾರೆ. ಬಡವರು ಮತ್ತು ದುರ್ಬಲರಿಂದ ಪ್ರಧಾನಿಯ ಸ್ನೇಹಿತರಿಗೆ ಸಂಪತ್ತಿನ ವರ್ಗಾವಣೆ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ಗಂಭೀರ ಆರೋಪ ಮಾಡಿದರು.

ಕಳೆದ ವರ್ಷದ ನಿಯಮದಂತೆ

ಗಣೇಶೋತ್ಸವ : ಸಿಎಂ ಬೊಮ್ಮಾಯಿ

ಬೆಂಗಳೂರು/ಹುಬ್ಬಳ್ಳಿ, ಸೆ. ೧: ಕಳೆದ ವರ್ಷ ನೀಡಲಾಗಿದ್ದ ನಿಯಮದಂತೆ ಈ ಬಾರಿಯೂ ಗಣೇಶ ಹಬ್ಬಾಚರಣೆಗೆ ಅನುಮತಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಹೇಳಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಗಣೇಶೋತ್ಸವ ಆಚರಣೆ ಕುರಿತು ಈಗಾಗಲೇ ಹೇಳಿದಂತೆ ತಾ. ೫ ರಂದು ತಜ್ಞರು ವರದಿ ಸಲ್ಲಿಸುತ್ತಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ವಿಭಿನ್ನವಾಗಿ ಹಬ್ಬ ಆಚರಿಸಲಾಗುತ್ತದೆ. ತಜ್ಞರು ಸಹ ಆಯಾ ಜಿಲ್ಲೆಯಲ್ಲಿ ವರದಿ ಸಲ್ಲಿಸಲು ಕಾಲಾವಕಾಶ ಕೇಳಿದ್ದಾರೆ ಎಂದರು. ಕಳೆದ ವರ್ಷ ಯಾವ ರೀತಿ ನಿಯಮನುಸಾರ ಗಣೇಶೋತ್ಸವ ಆಚರಿಸಲಾಗಿತ್ತು ಅದೇ ರೀತಿ ಈ ವರ್ಷವು ಕಟ್ಟುನಿಟ್ಟಿನ ಕ್ರಮಗಳ ಮೂಲಕ ಆಚರಿಸಲು ಅನುಮತಿ ನೀಡಲಾಗುತ್ತದೆ. ಕೋವಿಡ್ ಪರಿಸ್ಥಿತಿ ಬಗ್ಗೆ ವರದಿ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅವರು ನೀಡುವ ವರದಿಯನ್ನು ತಜ್ಞರ ತಂಡ ಪರಿಶೀಲನೆ ನಡೆಸಿದ ಬಳಿಕ ಗಣೇಶೋತ್ಸವ ಆಚರಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

೩೦೦ ಜನರ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ, ಸೆ. ೧: ಕೋವಿಡ್-೧೯ ನಿಯಮ ಉಲ್ಲಂಘಿಸಿ ಚುನಾವಣಾ ಪ್ರಚಾರ ಮಾಡಿದ ಆರೋಪದಡಿ ಎಐಎಂಐಎA ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಸೇರಿ ೩೦೦ಕ್ಕೂ ಹೆಚ್ಚು ಬೆಂಬಲಿಗರ ವಿರುದ್ಧ ಬೆಳಗಾವಿಯ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ತಾ.೩ರಂದು ನಡೆಯುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಎಐಎಂಐಎA ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರವಾಗಿ ಸೋಮವಾರ ಸಂಸದ ಅಸಾದುದ್ದೀನ್ ಓವೈಸಿ ಬೆಳಗಾವಿಯ ದರ್ಬಾರ್ ಗಲ್ಲಿಯಲ್ಲಿ ಚುನಾವಣಾ ರ‍್ಯಾಲಿ ನಡೆಸಿದ್ದರು. ಈ ವೇಳೆ ಓವೈಸಿ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಗುಂಪುಗುAಪಾಗಿ ಸೇರಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಓವೈಸಿ ವಿರುದ್ಧ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆಂದು ವರದಿಗಳು ತಿಳಿಸಿವೆ.