(ಪ್ರಜ್ವಲ್ ಜಿ.ಆರ್.)

ಮಡಿಕೇರಿ, ಸೆ. ೧: ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ ಉದ್ಘಾಟಿಸಲೆಂದು ಫೆಬ್ರವರಿ ತಿಂಗಳಿನಲ್ಲಿ ಜಿಲ್ಲೆಗೆ ರಾಷ್ಟçದ ಮೊದಲ ಪ್ರಜೆ ರಾಮನಾಥ್ ಕೋವಿಂದ್ ಅವರು ಆಗಮಿಸಿದ್ದರು. ಮೊದಲಿಗೆ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಇವರು ನಂತರ ಮಡಿಕೇರಿಯ ಎಫ್.ಎಮ್.ಸಿ ಕಾಲೇಜಿನಲ್ಲಿ ತಮ್ಮ ಹೆಲಿಕಾಪ್ಟರ್ ಇಳಿಸಿ ಅಲ್ಲಿಂದ ರಸ್ತೆ ಮಾರ್ಗವಾಗಿ ಖಾಸಗಿ ರೆಸಾರ್ಟ್ನಲ್ಲಿ ಊಟೋಪಚಾರದ ಬಳಿಕ ಉದ್ಘಾಟನೆಗಾಗಿ ಸಂಗ್ರಹಾಲಯಕ್ಕೆ ತೆರಳಿದರು.

ರಾಷ್ಟçಪತಿ ಸೇರಿದಂತೆ ಅವರ ಕಾನ್ವಾಯ್‌ನ ಸುಗಮ ಸಂಚಾರಕ್ಕೆAದು ಅವರುಗಳು ತೆರಳುವ ಮಾರ್ಗದ ಗುಂಡಿಬಿದ್ದ ರಸ್ತೆಗಳು ಅವರು ಆಗಮಿಸುವ ೨ ದಿನಗಳ ಹಿಂದಷ್ಟೆ ಅತೀವೇಗದಿಂದ ದುರಸ್ತಿಗೀಡಾದವು. ರಸ್ತೆಯಲ್ಲಿ ಯಾವುದೇ ರೀತಿ ಅಡಚಣೆಗಳಿರಬಾರದೆಂಬ ನಿಟ್ಟಿನಿಂದ ದನ-ಶ್ವಾನಗಳನ್ನೆಲ್ಲ ಇತರೆಡೆಗೆ ಸಾಗಾಟ ಮಾಡಲಾಯಿತು. ಮತ್ತಷ್ಟು ಸುಲಲಿತ ಸಂಚಾರಕ್ಕೆ ರಸ್ತೆ ಉಬ್ಬುಗಳನ್ನೆಲ್ಲ ನಗರಸಭೆ ವತಿಯಿಂದ ತೆರವುಗೊಳಿಸಲಾಯಿತು.

ರೆಸಾರ್ಟ್ ನಿಂದ ಪ್ರಾರಂಭವಾದ ಇವರ ‘ಕಾನ್ವಾಯ್’ ಮಾರ್ಗ ಮಡಿಕೇರಿ ಗ್ರಾಮಾಂತರ ಠಾಣೆಯ ಎದುರಿನ ರಸ್ತೆಯ ಮೂಲಕ ಹಾದುಹೋಗಬೇಕಾಗಿದ್ದು, ಅಲ್ಲಿ ಎಫ್.ಎಮ್.ಸಿ ಕಾಲೇಜಿನಿಂದ ಪ್ರಾರಂಭವಾಗುವ ಇಳಿಜಾರು ರಸ್ತೆ ಹಾಗೂ ಗಾಳಿಬೀಡು ರಸ್ತೆಯ ಛೇದಕದಲ್ಲಿದ್ದ ಉಬ್ಬನ್ನು ತೆರವುಗೊಳಿಸಲಾಯಿತು. ಮುಂದುವರಿದು ಮೈತ್ರಿ ಹಾಲ್ ಜಂಕ್ಷನ್ ಬಳಿ ಇದ್ದ ೨ ಉಬ್ಬುಗಳು ಮಿಲಿಟರಿ ಕ್ಯಾಂಟೀನ್ ಎದುರಿದ್ದ ಉಬ್ಬುಗಳನ್ನೂ ತೆಗೆಯಲಾಯಿತು. ಈ ೫ ರಸ್ತೆ ಉಬ್ಬುಗಳು ಅತ್ಯಂತ ಪ್ರಮುಖ ಸ್ಥಳಗಳಲ್ಲಿದ್ದು ಅಪಘಾತ ನಿಯಂತ್ರಣಕ್ಕೆ ಸಹಕಾರಿಯಾಗಿದ್ದವು.

ಮುಂದುವರೆದು ಸಾಯಿ ಟರ್ಫ್ ಮೈದಾನದೆದುರಿನ ರಸ್ತೆಯಿಂದ ರಾಜಾಸೀಟು ಮಾರ್ಗವಾಗಿ ತಿಮ್ಮಯ್ಯ ವೃತ್ತದಿಂದ ಸಂಗ್ರಹಾಲಯದವರೆಗಿನ ರಸ್ತೆಯಲ್ಲಿದ್ದ ಉಬ್ಬುಗಳೆಲ್ಲವೂ ಮಾಯವಾದವು. ರಾಷ್ಟçಪತಿ ಆಗಮಿಸಿ ಯಾವುದೇ ಅಡೆತಡೆಗಳಿಲ್ಲದೆ ಸಮಯಕ್ಕೆ ಸರಿಯಾಗಿ

(ಮೊದಲ ಪುಟದಿಂದ) ಸಂಗ್ರಹಾಲಯದ ಉದ್ಘಾಟನೆಯೂ ನೆರವೇರಿತು. ಆದರೆ ಮಾಯವಾದ ರಸ್ತೆ ಉಬ್ಬುಗಳನ್ನು ಪುನ ನಿರ್ಮಿಸುವವರು ಯಾರು?

ಇದೀಗ ೬ ತಿಂಗಳುಗಳು ಕಳೆದಿವೆ.....

ರಾಷ್ಟçಪತಿಯ ಜಿಲ್ಲಾ ಪ್ರವಾಸ ಮುಗಿದು ಇದೀಗ ಅರ್ಧ ವರ್ಷವೇ ಕಳೆದುಬಿಟ್ಟಿದೆ. ರಸ್ತೆಯಿಂದ ಇತರೆಡೆಗೆ ಸಾಗಿಸಲ್ಪಟ್ಟ ನಾಯಿಗಳು, ದನಗಳು ಮತ್ತೆ ರಸ್ತೆಗಿಳಿದಿವೆ, ದುರಸ್ತಿ ಮಾಡಿರುವ ರಸ್ತೆಯಲ್ಲಿ ಮತ್ತೆ ಗುಂಡಿಗಳು ಬಿದ್ದಿವೆ. ಆದರೆ ಅಪಘಾತ ನಿಯಂತ್ರಿಸಲು ಅತ್ಯಗತ್ಯವಾದ ಉಬ್ಬುಗಳು ಮಾತ್ರ ಎದ್ದು ನಿಲ್ಲದೆ ನಗರಸಭೆಯ ನಿರ್ಲಕ್ಷö್ಯ ಎದ್ದು ಕಾಣುತ್ತಿದೆ.

ರಾಷ್ಟçಪತಿ ಸಂಚರಿಸುವ ಮಾರ್ಗ ಮಾತ್ರವಲ್ಲದೆ ಇತರೆಡೆಗಳ ರಸ್ತೆಗಳಲ್ಲಿಯೂ ಉಬ್ಬು ನಾಶಪಡಿಸಲಾಗಿವೆ. ರಾಷ್ಟçಪತಿ ಸಂಚರಿಸುವ ವೇಳೆ ತುರ್ತು ಸಂದರ್ಭ ಎದುರಾದಲ್ಲಿ ಬಳಕೆ ಮಾಡಬಹುದಾದ ಇಂತಹ ಬದಲಿ ರಸ್ತೆಗಳಲ್ಲಿ ಉಬ್ಬುಗಳನ್ನು ನಾಶಪಡಿಸಲಾಗಿದ್ದು ಇವುಗಳು ಕೂಡ ಮತ್ತೆ ಮೇಲೇಳಲೇ ಇಲ್ಲ. ಇಂತಹ ಉಬ್ಬುಗಳು ನಗರದ ಮಾರುಕಟ್ಟೆ ರಸ್ತೆ, ಎ.ವಿ ಸ್ಕೂಲ್, ಮಹದೇವಪೇಟೆ, ರಾಜರಾಜೇಶ್ವರಿ ದೇವಾಲಯದ ಬಳಿ ಹಾಗೂ ಕಾನ್ವೆಂಟ್ ಜಂಕ್ಷನ್‌ನ ಪ್ರಮುಖ ಸ್ಥಳಗಳಲ್ಲಿದ್ದವು. ಇವುಗಳು ಮತ್ತೆ ಮೇಲೇಳುವ ಅಗತ್ಯವಿದ್ದು ನಗರಸಭೆಗೆ ನೂತನವಾಗಿ ಆಯ್ಕೆಯಾದ ಸದಸ್ಯರು, ಪೌರಾಯುಕ್ತರು ಇತ್ತ ಗಮನಹರಿಸಬೇಕಿದೆ.

ಅತೀ ವೇಗದ ಚಾಲನೆ ನಿಯಂತ್ರಿಸಲು ಸಹಕಾರಿ

ನಾಶಪಡಿಸಲ್ಪಟ್ಟ ಯಾವುದೇ ರಸ್ತೆ ಉಬ್ಬುಗಳು ಅವೈಜ್ಞಾನಿಕವಾಗಿರಲಿಲ್ಲ. ಎಲ್ಲವೂ ರಸ್ತೆ ಛೇದಕಗಳಲ್ಲಿಯೇ ಇದ್ದವು. ಮಹದೇವಪೇಟೆಗಾಗಿ ಸಂಪಿಗೆ ಕಟ್ಟೆಗೆ ತೆರಳುವ ರಸ್ತೆ ಹಾಗೂ ರಾಜರಾಜೇಶ್ವರಿ ದೇವಾಲಯಕ್ಕೆ ತೆರಳುವ ಇಳಿಜಾರು ರಸ್ತೆ ಛೇದಕದಲ್ಲಿನ ಉಬ್ಬು ತೆರೆಯಲ್ಪಟ್ಟಿದ್ದು, ವಾಹನಗಳ ವೇಗದ ಸಂಚಾರದಿAದ ಅಪಾಯ ತಪ್ಪಿದ್ದಲ್ಲ. ಇನ್ನು ಎಫ್.ಎಮ್.ಸಿ ಕಾಲೇಜಿನಿಂದ ಕೆಳಗಿಳಿಯುವವರಿಗೆ ಗಾಳಿಬೀಡು ರಸ್ತೆ ಬದಿಯಿಂದ ಬರುವ ವಾಹನಗಳು ಕಾಣಿಸುವುದೇ ಇಲ್ಲ. ಗಾಳಿಬೀಡು ರಸ್ತೆಯಿಂದ ವೇಗದಿಂದ ಬರುವ ವಾಹನಗಳ ನಿಯಂತ್ರಣಕ್ಕೆ ಕಡಿವಾಣ ಹಾಕುವ ಉಬ್ಬು ಮತ್ತೆ ನಿರ್ಮಾಣವಾಗಬೇಕಿದೆ.

ಕಾನ್ವೆಂಟ್ ಜಂಕ್ಷನ್ ಬಳಿ ನಿರಂತರ ಅಪಘಾತಗಳು

ನಗರದ ಕಾನ್ವೆಂಟ್ ಜಂಕ್ಷನ್‌ಗೆ ೩ ರಸ್ತೆಗಳು ಬಂದು ಸೇರುತ್ತವೆ. ವಿಜಯ ವಿನಾಯಕದಿಂದ ಬರುವ ರಸ್ತೆ, ಕಾಲೇಜು ರಸ್ತೆ ಹಾಗೂ ಅಬ್ಬಿ ಫಾಲ್ಸ್ ರಸ್ತೆ. ಇಲ್ಲಿಯೂ ಕೂಡ ರಸ್ತೆ ಉಬ್ಬುಗಳನ್ನು ತೆರವುಗೊಳಿಸಲಾಗಿದೆ. ಕಾಲೇಜು ರಸ್ತೆ, ವಿಜಯ ವಿನಾಯಕ ದೇವಾಲಯ ರಸ್ತೆ ಹಾಗೂ ಕಾಲೇಜು ರಸ್ತೆಯಿಂದ ವೇಗ ನಿಯಂತ್ರಣವಿಲ್ಲದೆಯೇ ಬರುವ ವಾಹನಗಳಿಂದಾಗಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಅಧಿಕವಾಗಿವೆ. ಹೆಚ್ಚಾಗಿ, ರಾತ್ರಿ ವೇಳೆಯಲ್ಲೇ ಅಪಘಾತಗಳು ಸಂಭವಿಸುತ್ತಿವೆ. ಇದುವರೆಗೆ ಯಾವುದೇ ಮಾನವ ಪ್ರಾಣಹಾನಿಗಳಾಗಿಲ್ಲವಾದರೂ ವಾಹನಗಳ ಪರಸ್ಪರ ಡಿಕ್ಕಿ, ದನ-ಕರುಗಳಿಗೆ ಗಾಯ ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ನಾಯಿಮರಿಗಳ ಸಾವು ಸಂಭವಿಸಿದೆ. ನೂತನವಾಗಿ ಆಯ್ಕೆಯಾದ ನಗರಸಭೆಯ ಸದಸ್ಯರು ರಸ್ತೆ ಉಬ್ಬುಗಳನ್ನು ಪುನರ್‌ನಿರ್ಮಿಸಲು ಕಾರ್ಯೋನ್ಮುಖರಾಗಬೇಕು.

ದುರಂತಗಳು ಸಂಭವಿಸುವ ಮುನ್ನ ಜಾಗೃತಿಗೊಳ್ಳುವ ಅಗತ್ಯವಿದೆ. ನಗರದಲ್ಲಿ ವಾಹನ ದಟ್ಟಣೆ ಅಧಿಕವಾಗುತ್ತಿರುವ ಹಿನ್ನೆಲೆ ಪೊಲೀಸರಿಗೂ ನಿರಂತರ ನಿಯಂತ್ರಿಸುವ ಕಾರ್ಯ ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ನಗರಸಭೆ ಶೀಘ್ರ ಕಾರ್ಯೋನ್ಮುಖವಾಗಲಿ ಎಂಬದು ಅನೇಕ ನಾಗರಿಕರ ಅನಿಸಿಕೆ.