ಮಡಿಕೇರಿ, ಸೆ. ೧ : ಭಾಗಮಂಡಲದಲ್ಲಿ ಕೊಡಗು ರಕ್ಷಣಾ ವೇದಿಕೆಯ ನೂತನ ಘಟಕವನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಸಿ.ಎಂ.ವಿನೋದ್ ಕುಮಾರ್ ಆಯ್ಕೆಯಾಗಿದ್ದಾರೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಅಚ್ಚಂಡೀರ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.

ಉಪಾಧ್ಯಕ್ಷರಾಗಿ ಶ್ರೀನಿಧಿ ಕೂಡಕಂಡಿ, ಕಾರ್ಯದರ್ಶಿಯಾಗಿ ಪ್ರತೀಶ್ ಉದ್ದುಮಂಡ, ಖಜಾಂಚಿಯಾಗಿ ಎಂ.ಪಿ.ಹರೀಶ್, ನಿರ್ದೇಶಕರಾಗಿ ಪುರುಷೋತ್ತಮ, ಶರತ್, ದೇವಂಗೋಡಿ ಸುಧಾಕರ್, ಸಂತು ದೇವಂಗೋಡಿ ಹಾಗೂ ಬಿಪಿನ್ ರಾಜ್ ನೇಮಕಗೊಂಡಿದ್ದಾರೆ.