ಮಡಿಕೇರಿ, ಸೆ.೧ : ಕೊಡಗು ಜಿಲ್ಲೆಯಲ್ಲಿ ತುಳು ಭಾಷಿಕ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ತುಳುಭಾಷಿಕ ಕಲಾವಿದರ ಕೂಟ ರಚನೆ ಮಾಡಲು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಲಹೆಯಂತೆ ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಪಿ.ಎಂ.ರವಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಯಕ್ಷಗಾನ, ನಾಟಕ, ಸಿನಿಮಾ ಕಲಾವಿದರು, ಕವಿ, ಸಾಹಿತಿಗಳು ಕಥೆ, ಕಾದಂಬರಿಕಾರರು, ಚಿತ್ರಕಲಾವಿದರು, ನೃತ್ಯಗಾರರು, ಸಂಗೀತಗಾರರು ಸೇರಿದಂತೆ ವಿವಿಧ ಕ್ಷೇತ್ರದ ಕಲಾವಿದರನ್ನು ಸಂಘಟಿಸಲಾಗುವುದು. ಆ ಮೂಲಕ ಕಲಾವಿದರ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಬಗೆ ಹರಿಸಲಾಗುವುದು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮ ಹಮ್ಮಿಕೊಂಡು ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

ಜಿಲ್ಲೆಯ ತುಳು ಭಾಷಿಕ ಕಲಾವಿದರು ತಮ್ಮ ಹೆಸರು, ತಾವು ನಿರ್ವಹಿಸುತ್ತಿರುವ ಕಲಾ ಪ್ರಕಾರದ ಮಾಹಿತಿಯನ್ನು ೯೯೭೨೦ ೭೩೨೯೫ ಸಂಖ್ಯೆಗೆ ಕರೆ ಮಾಡಿ ಕಲಾವಿದರ ಕೂಟದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವAತೆ ರವಿ ತಿಳಿಸಿದ್ದಾರೆ. ಈ ಕುರಿತು ಸೆ.೫ ರಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರೊಂದಿಗೆ ಮಡಿಕೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ.