ಚೆಟ್ಟಳ್ಳಿ, ಆ. ೩೧: ಮಲೇಶಿಯಾ, ಥೈಲ್ಯಾಂಡ್, ಇಂಡೋನೇಶಿಯಾಗಳಲ್ಲಿ ಭಾರೀ ಬೇಡಿಕೆಯ ರಾಂಬೂಟಾನ್ ಹಣ್ಣು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಫಸಲಿಗೆ ಬಂದಿದ್ದು, ಕೊಯ್ಲು ಪ್ರಾರಂಭವಾಗಿದೆ.
ಕೇAದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಲಿಚಿ, ಬಟರ್‌ಫ್ರೂಟ್, ಮೆಂಗೋಸ್ಟೀನ್, ಡ್ರಾö್ಯಗನ್‌ಫ್ರೂಟ್, ಸಪೋಟ, ಪಪ್ಪಾಯ, ಸೀಬೆ, ಕಿತ್ತಳೆ, ಸ್ಟಾರ್‌ಫೂಟ್, ಸಿಟ್ರನ್ನ್ ನಂತಹ ಹಲವು ಹಣ್ಣುಗಳ ಜೊತೆಗೆ ತರಕಾರಿಗಳನ್ನು ಪ್ರಾಯೋಗಿಕವಾಗಿ ನೆಟ್ಟು ಬೆಳೆಸಲಾಗುತ್ತಿದೆ. ಮಲೇಶಿಯನ್‌ನಲ್ಲಿ ರಾಂಬೂಟ್ ಅಂದರೆ ರೋಮಾ ಎನ್ನಲಾಗಿದ್ದು ರೋಮದಂತಿರುವ ಈ ಹಣ್ಣನ್ನು ರಾಂಬೂಟನ್ನು ಎಂದು ಕರೆಯಲಾಗಿದೆ.
ಕೇಂದ್ರದಲ್ಲಿ ಸುಮಾರು ೧.೫೦ ಎಕರೆ ಜಾಗದಲ್ಲಿ ೨೦೦೨ರಲ್ಲಿ ವಿದೇಶಿ ತಳಿಯಾದ ರಾಂಬೂಟಾನ್ ಗಿಡಗಳನ್ನು ಮೊಟ್ಟಮೊದಲ ಬಾರಿಗೆ ನೆಟ್ಟು ಬೆಳೆಸಲಾಗಿ ಕೆಂಪು ಹಾಗೂ ಹಳದಿ ಬಣ್ಣದ ಹೈಬ್ರೀಡ್‌ನ ವಿವಿಧ ತಳಿಗಳು ಪ್ರತ್ಯೇಕ ಬ್ಲಾಕ್‌ಗಳಲ್ಲಿವೆ. ಕಳೆದ ತಿಂಗಳಿAದ ಫಸಲಿಗೆ ಬರುತ್ತಿದ್ದು, ಆಗಸ್ಟ್ ತಿಂಗಳಲ್ಲಿ ಐದಾರು ಬಾರಿ ಹಣ್ಣುಗಳನ್ನು ಕುಯಿಲು ಮಾಡಲಾಗಿದೆ. ರುಚಿಕರವಾದ ಹಣ್ಣನ್ನು ಹಕ್ಕಿಗಳು ತಿಂದು ಹಾಕುತ್ತಿದ್ದು, ಕುಯ್ದ ಹಣ್ಣುಗಳನ್ನು ಪ್ರತಿ ಕೆ.ಜಿ.ಗೆ ೧೫೦ ರಂತೆ ಕೇಂದ್ರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ರೂ. ೨೦೦ ರಿಂದ ರೂ. ೩೫೦ ಇದೆ.
(ಮೊದಲ ಪುಟದಿಂದ) ಕೊಡಗು, ಕೇರಳ, ಮಂಗಳೂರು, ಶಿರ್ಶಿಗಳ ವಾತಾವರಣವು ಈ ರಾಂಬೂಟಾನ್ ಬೆಳೆಯಲು ಯೋಗ್ಯವಾಗಿದ್ದು ಕೇರಳ ರಾಜ್ಯದಲ್ಲಿ ಬಲು ಬೇಡಿಕೆಯ ರಾಂಬೂಟಾನನ್ನು ಹಲವು ಬೆಳೆಗಾರರು ಬೆಳೆದು ಲಕ್ಷಗಟ್ಟಲೆ ಆದಾಯಗಳಿಸುತ್ತಿದ್ದಾರೆ. ಬೀಜದಿಂದ ನೆಟ್ಟು ಬೆಳೆಸಿದ ಗಿಡವು ೧೦ ರಿಂದ ೧೨ ವರ್ಷ ಫಸಲಿಗೆ ಬೇಕಾಗಿದ್ದು, ಕಸಿ ಮಾಡಿದ ಗಿಡವು ೩ ರಿಂದ ೪ ವರ್ಷಗಳಲ್ಲಿ ಫಸಲಿಗೆ ಬರಲಿದೆ. ಚೆಟ್ಟಳ್ಳಿ ತೋಟಗಾರಿಕಾ ಕೇಂದ್ರದಲ್ಲಿ ಕಸಿ ಗಿಡಗಳನ್ನು ಮಾಡಲು ಪ್ರಯತ್ನಿಸಿದರೂ ಕೊಡಗಿನ ಹವಾಗುಣಕ್ಕೆ ಕಸಿ ಗಿಡಗಳು ಬರುತ್ತಿಲ್ಲವೆಂದು ತೋಟಗಾರಿಕಾ ಕೇಂದ್ರದ ಸಸ್ಯ ತಜ್ಞರು ಹೇಳುತ್ತಾರೆ. ಕೊಡಗಿನಲ್ಲಿ ಇನ್ನೂ ಪ್ರಚಲಿತದಲ್ಲಿಲ್ಲದ ರಾಂಬೂಟಾನ್‌ನನ್ನು ಕೆಲವರು ಒಂದೆರಡು ಹೈಬ್ರೀಡ್ ಗಿಡಗಳನ್ನು ಬೆಳೆದು ಫಸಲು ಪಡೆಯುತ್ತಿದ್ದಾರೆ. -ಪುತ್ತರಿರ ಕರುಣ್ ಕಾಳಯ್ಯ