*ಗೋಣಿಕೊಪ್ಪ, ಆ. ೩೧: ಕೊಡವ ಭಾಷೆ ಸಾಂಸ್ಕöÈತಿಕ ಭಾಷೆಯಾಗಿ ಉಳಿಯದೇ ಮಾತೃ ಭಾಷೆಯಾಗಿ, ಒದುವ ಭಾಷೆಯಾಗಿ ಬೆಳವಣಿಗೆ ಹೊಂದಬೇಕು ಎಂದು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಅಮ್ಮಾಟಂಡ ಡಾ. ಪಾರ್ವತಿ ಅಪ್ಪಯ್ಯ ಹೇಳಿದರು. ಪೊನ್ನಂಪೇಟೆ ಅಪ್ಪಚ್ಚುಕವಿ ವಿದ್ಯಾಲಯದ ರಜತ ವೈಭವ ರಂಗಮAದಿರದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಪಡಿಪು, ಪಾಠ ಪುಸ್ತಕ ಬೊಳಿಪಡ್ತುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾಷೆ ಸಾಂಸ್ಕೃತಿಕವಾಗಿ ಉಳಿದುಕೊಳ್ಳುವುದರೊಂದಿಗೆ ಓದುವ ಮತ್ತು ವ್ಯಾಕರಣ ಬದ್ದ ಸಾಹಿತ್ಯವಾಗಿ ಬೆಳವಣಿಗೆ ಹೊಂದಬೇಕಾಗಿದೆ. ಕೊಡವ ಭಾಷೆಯ ಬೆಳವಣಿಗೆಗೆ ಹರದಾಸ ಅಪ್ಪಚ್ಚಕವಿ ಅವರು ಶಾಶ್ವತ ನೆಲೆಯನ್ನು ಸಾಹಿತ್ಯ ಮೂಲಕ ಕಲ್ಪಿಸಿಕೊಟ್ಟಿದ್ದಾರೆ. ಆ ಹಾದಿಯನ್ನು ಉಳಿಸಿ ಬೆಳೆಸುವ ಕಾರ್ಯ ಯುವ ಸಮುದಾಯದ
(ಮೊದಲ ಪುಟದಿಂದ) ಜವಾಬ್ದಾರಿಯಾಗಿದೆ ಎಂದು ಕರೆ ನೀಡಿದರು. ಕೊಡವ ಭಾಷೆ ೪ ಸಾವಿರ ವರ್ಷಗಳಿಂದ ಜನಿತವಾಗಿದ್ದು, ಉತ್ತಮ ಸಂಸ್ಕöÈತಿಯ ಅಡಿಪಾಯದೊಂದಿಗೆ ಬೆರೆತಿದೆ. ಇಂಗ್ಲೀಷ್ ವ್ಯಾಮೋಹದಿಂದ ಹೊರಬಂದು ಭಾಷೆಯ ಬೆಳವಣಿಗೆಗೆ ಪೂರಕವಾದ ಅಭಿಮಾನವನ್ನು ಹೊಂದಬೇಕು.
ಮಕ್ಕಳಲ್ಲಿ ಪ್ರಾಥಮಿಕವಾಗಿ ಕೊಡವ ಭಾಷೆಯ ಮತ್ತು ಓದಿನ ಬಗ್ಗೆ ತಿಳಿಯುವ ಉದ್ದೇಶದಿಂದ ಅಕಾಡೆಮಿ ಕೊಡವ ಪಡಿಪು ಪಾಠ ಪುಸ್ತಕವನ್ನು ರಚಿಸಿ ಭಾಷೆಯ ಬೆಳವಣಿಗೆಗೆ ಬೇಕಾದ ವಾತಾವರಣವನ್ನು ನಿರ್ಮಿಸಿದೆ ಎಂದು ತಿಳಿಸಿದರು. ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ ಮಾತನಾಡಿ, ಇತರ ಭಾಷಿಕರೊಂದಿಗೆ ಕೊಡವ ಭಾಷೆಯಲ್ಲಿಯೇ ಮಾತನಾಡುವ ಮೂಲಕ ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕಾಗಿದೆ. ಹೊರ ಜಿಲ್ಲೆ ಅಥವಾ ಹೊರ ರಾಜ್ಯದಿಂದ ಬಂದAತಹ ವ್ಯಾಪಾರಿಗಳೊಡನೆ ಕೊಡವ ಭಾಷೆಯಲ್ಲಿಯೇ ವ್ಯಾಪಾರ ವ್ಯವಹಾರ ನಡೆಸುವುದರಿಂದ ಭಾಷೆಯ ಬೆಳವಣಿಗೆ ಸಾಧ್ಯವಿದೆ. ಇಂಗ್ಲೀಷ್ ಭಾಷೆಯ ವ್ಯಾಮೋಹ ಬಿಟ್ಟ್ಟು ಮಾತೃಭಾಷೆಯ ಬಗ್ಗೆ ಅಪಾರ ಅಭಿಮಾನವನ್ನು ಹೊಂದಬೇಕು ಎಂದು ಸಲಹೆ ನೀಡಿದರು.
ಕೊಡವ ಪಡಿಪು ಪಾಠ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಮಾಚಿಮಾಡ ರವೀಂದ್ರ, ಕೊಡವ ಭಾಷೆಯನ್ನು ೮ನೇ ಪರಿಚ್ಚೇದಕ್ಕೆ ಸೇರಿಸಲು ತೀವ್ರ ಹೋರಾಟ ನಡೆಸಬೇಕಾಗಿದೆ. ನಮ್ಮ ಭಾಷಾ ಬೆಳವಣಿಗೆಗಾಗಿ ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು. ಪೊಂಗುರಿ ಕೊಡವ ತ್ರೆöÊಮಾಸಿಕ ಸಂಚಿಕೆಯನ್ನು ಲೋಕಾರ್ಪಣೆ ಗೊಳಿಸಿದ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು, ವ್ಯಾಕರಣ ಉಚ್ಚರಣೆಗೆ ಹೆಚ್ಚು ಒತ್ತು ನೀಡಿ ಭಾಷೆಯ ಬೆಳವಣಿಗೆಗೆ ಮುಂದಾಗಬೇಕು. ಮಕ್ಕಳಲ್ಲಿ ಭಾಷಾಭಿಮಾನ ಬೆಳೆಸಿಕೊಳ್ಳಲು ಉತ್ತಮ ಕಾರ್ಯಗಳನ್ನು ಆಯೋಜಿಸಿ ಕೊಡವ ಭಾಷೆ ಮತ್ತು ಸಂಸ್ಕöÈತಿಯ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕೆಂದು ಸಲಹೆ ನೀಡಿದರು.
ಪಾಠ ಪುಸ್ತಕ ಸಮಿತಿ ಸಂಚಾಲಕಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಕೊಡವ ಪಡಿಪು ಪಾಠ ಪುಸ್ತಕದಲ್ಲಿರುವ ವ್ಯಾಕರಣ, ಶಬ್ದ ಮತ್ತು ಭಾಷಾ ಬಳಕೆಯ ಬಗ್ಗೆ ಪರಿಚಯಿಸಿದರು. ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಕಾಳಿಮಾಡ ಮೋಟಯ್ಯ ‘ಪಠ್ಯ ಕ್ರಮತ್ಲ್ ಅವ್ವ ಪಾಜೆರ’ ಬಳಕೆಯ ಬಗ್ಗೆ ತಿಳಿಸಿದರು. ಪೊನ್ನಂಪೇಟೆ ಅಪ್ಪಚ್ಚುಕವಿ ವಿದ್ಯಾಲಯ ಅಧ್ಯಕ್ಷ ಮಂಡೆಚAಡ ದಿನೇಶ್ ಚಿಟ್ಟಿಯಪ್ಪ, ಕೊಡವ ಭಾಷೆ ಸಂಸ್ಕöÈತಿಗಳ ಬಗ್ಗೆ ಮಾತನಾಡಿದರು.
ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರುಗಳಾದ ಪಡಿಞರಂಡ ಪ್ರಭುಕುಮಾರ್, ತೇಲಪಂಡ ಕವನ್ಕಾರ್ಯಪ್ಪ, ಮಾಚಿಮಾಡ ಜಾನಕಿ ಮಾಚಯ್ಯ, ಕುಡಿಯರ ಮುತ್ತಪ್ಪ, ಬಾಚಮ್ಮಂಡ ಗೌರಮ್ಮ ಮಾದಮ್ಮಯ್ಯ ಹಾಗೂ ಪಠ್ಯ ಸಮಿತಿ ಸದಸ್ಯರುಗಳಾದ ನಾಗೇಶ್ ಕಾಲೂರು, ಮುಲ್ಲೇಂಗಡ ಮದೋಶ್ ಪೂವಯ್ಯ, ಚಟ್ಟಂಗಡ ರವಿಸುಬ್ಬಯ್ಯ, ಬಡಕಡಮ್ಮಂಡ ಕಸ್ತೂರಿ ಗೋವಿಂದಮ್ಮಯ್ಯ ಉಪಸ್ಥಿತರಿದ್ದರು.