ಗೋಣಿಕೊಪ್ಪ ವರದಿ, ಆ. ೩೦: ರೇಬಿಸ್ ನಿರ್ಮೂಲನೆಗೆ (W.ಊ.ಔ) ೨೦೩೦ ಇಸವಿ ಗುರಿಯಾಗಿಸಿಕೊಂಡಿದೆ ಎಂದು ಬೆಂಗಳೂರು ಪಶುವೈದ್ಯಕೀಯ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ಕೃಷ್ಣ ಇಸ್ಲೂರು ಹೇಳಿದರು.

ಪೊನ್ನಂಪೇಟೆ ಪಶುಪಾಲನಾ ಮತ್ತು ಪಶುವೈದ್ಯಕಿಯ ಇಲಾಖೆಯ ಆಜಾದಿ ಕಾ ಅಮೃತ ಮಹೋತ್ಸವ ವಿಸ್ತರಣಾ ಕಾರ್ಯಕ್ರಮದಡಿ ಪೊನ್ನಂಪೇಟೆ ತಾಲೂಕು ಆಡಳಿತ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಎನ್‌ಎಸ್‌ಎಸ್ ಘಟಕ ಸಹಯೋಗದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ರೇಬಿಸ್ ಜಾಗೃತಿ ಶಿಬಿರ ಮತ್ತು ಪ್ರಾಣಿಯಿಂದ ಮಾನವನಿಗೆ ರೇಬಿಸ್ ವರ್ಗೀಕರಣ ಎಂಬ ವಿಚಾರ ಸಂಕಿರಣ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಶ್ವಾನದಿಂದ ಪತ್ತೆಯಾದ ವೈರಸ್ ಮಾನವ, ವನ್ಯಪ್ರಾಣಿ, ಸಾಕುಪ್ರಾಣಿಗಳ ಮೂಲಕ ಹರಡುತ್ತಿರುವುದರನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹಸುವನ್ನು ಒಂದು ಕುಟುಂಬ ಅವಲಂಭಿಸುವುದರಿAದ ಸೋಂಕು ಹರಡಿ ಇಡೀ ಕುಟುಂಬದ ಬದುಕಿಗೂ ಆತಂಕ ತರಲಿದೆ. ಇದರಿಂದಾಗಿ ಜಾನುವಾರುಗಳಿಗೆ ಲಸಿಕೆ ನೀಡುವ ಯೋಜನೆ ಭಾರತ ದೇಶ ರೂಪಿಸಿಕೊಂಡಿದ್ದು, ರೇಬಿಸ್ ನಿರ್ಮೂಲನೆಯಲ್ಲಿ ಭಾರತ ಮಾದರಿ ದೇಶವಾಗಿ ಹೊರ ಹೊಮ್ಮುವ ಸಾಧ್ಯತೆ ಹೆಚ್ಚಿದೆ. ೨೦೩೦ ರಲ್ಲಿ ರೇಬಿಸ್ ನಿರ್ಮೂಲನೆ ಮಾಡಲು ಪಣ ತೊಟ್ಟಿದೆ ಎಂದು ಅವರು ಹೇಳಿದರು.

ವನ್ಯಪ್ರಾಣಿಗಳಲ್ಲಿ ಕೂಡ ರೇಬಿಸ್ ಸೋಂಕು ಹರಡುತ್ತದೆ. ಇದರಿಂದ ಸಾಕು ಪ್ರಾಣಿಗಳ ಮೂಲಕ ಜನರಿಗೂ ಹರಡುವ ಸಾಧ್ಯತೆ ಕೂಡ ಹೆಚ್ಚಿದೆ. ಆರಂಭದ ಹಂತದಲ್ಲಿ ಶೇ. ೯೦ ರಷ್ಟು ಮಾನವ ಸಾವು ಶ್ವಾನ ಕಚ್ಚಿ ಸಂಭವಿಸಿದ ಕಾರಣ ನಾಯಿಯಿಂದ ಮಾತ್ರ ರೇಬಿಸ್ ಹರಡುತ್ತಿದೆ ಎಂಬ ನಂಬಿಕೆ ಇತ್ತು. ಇಂತಹ ತಪ್ಪು ನಂಬಿಕೆಯಿAದ ಸಾರ್ವಜನಿಕರು ಹೊರ ಬರಬೇಕಿದೆ. ಸಾಕುಪ್ರಾಣಿಗಳಿಂದಲೂ ಹರಡುತ್ತಿದೆ ಎಂದರು.

ಸೋಂಕು ತಗುಲಿದ ನಂತರ ಜೀವ ಉಳಿಸಿಕೊಳ್ಳುವ ಸಾಧ್ಯತೆ ಇಲ್ಲ. ಇದರಿಂದಾಗಿ ಸಾಕು ಪ್ರಾಣಿಗಳ ಬಗ್ಗೆ ಎಚ್ಚರವಹಿಸಬೇಕು ಎಂದರು.

ಕಾರ್ಯಾಗಾರ ಉದ್ಘಾಟಿಸಿ ಶಾಸಕ ಕೆ. ಜಿ. ಬೋಪಯ್ಯ ಮಾತನಾಡಿ, ರೇಬಿಸ್ ಸೋಂಕಿನ ಲಕ್ಷಣ, ಪರಿಹಾರ ಕ್ರಮದ ಬಗ್ಗೆ ಮತ್ತಷ್ಟು ಜನಜಾಗೃತಿಯಾಗಬೇಕು ಎಂದರು.

ಪೊನ್ನAಪೇಟೆ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಮಾತನಾಡಿ, ಅರಣ್ಯ ಕಾಲೇಜು ವಿದ್ಯಾರ್ಥಿಗಳು ಭವಿಷ್ಯದಲ್ಲಿ ಅರಣ್ಯ ರಕ್ಷಣೆಯ ಜವಬ್ದಾರಿ ಹೊತ್ತುಕೊಳ್ಳುವುದರಿಂದ ರೇಬಿಸ್ ಬಗ್ಗೆ ಹೆಚ್ಚು ಕಲಿತುಕೊಳ್ಳುವ ಅವಶ್ಯಕತೆ ಇದೆ ಎಂದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ. ಸುರೇಶ್ ಭಟ್ ಮಾತನಾಡಿ, ನರವ್ಯೂಹದಿಂದ ನೇರವಾಗಿ ಮೆದುಳಿಗೆ ಪ್ರವೇಶಿಸುವ ಸೋಂಕು ಜೀವಕ್ಕೆ ಅಪಾಯ ಎಂಬುವುದನ್ನು ಮೊದಲು ಅರಿತುಕೊಳ್ಳಬೇಕಿದೆ. ಜಾಗೃತಿಯಿಂದ ಸಾವಿನ ಪ್ರಮಾಣ ಕಡಿಮೆಯಾಗಿಸಬಹುದು ಎಂದರು.

ವೀರಾಜಪೇಟೆ ತಾ. ಪಂ. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ಮುಖ್ಯ ಪಶುವೈದ್ಯ ಡಾ. ಎ.ಎಸ್. ಶಾಂತೇಶ್, ಡಾ. ಬಿ. ಜಿ. ಗಿರೀಶ್, ಡಾ. ಬಿ. ಜಿ. ಭವಿಷ್ಯಕುಮಾರ್, ಡಾ. ಅಜ್ಜಿನಿಕಂಡ ಸಿ. ಗಣಪತಿ ಇದ್ದರು.