ಹಲವು ಬಗೆಯ ನಡಿಗೆಗಳನ್ನು ನಾವು ನಮ್ಮ ಬದುಕಿನಲ್ಲಿ ನೋಡಿದ್ದೇವೆ. ಕೆಲವರು ಹೊಟ್ಟೆ ಕರಗಿಸಲು ನಡೆದರೆ, ಕೆಲವರು ಹೊಟ್ಟೆಗೆ ಅರಸಲು.. ಇನ್ನೂ ಕೆಲವರು ಜನರಿಂದ ಗುರುತಿಸಿಕೊಳ್ಳಲು ನಡೆದರೆ ಇನ್ನು ಕೆಲವರು ದಾಖಲೆಗಳನ್ನು ನಿರ್ಮಿಸಲು.., ಈ ರೀತಿಯ ಬಗೆಬಗೆಯ ನಡಿಗೆಗಳ ಮಧ್ಯದಲ್ಲಿ ಇಲ್ಲೊಬ್ಬರು ‘ಮನುಷ್ಯ ಮನುಷ್ಯರ ನಡುವೆ ಇಂದು ಮರೆಯಾಗುತ್ತಿರುವ ಪ್ರೀತಿ, ವಿಶ್ವಾಸ, ಅನುಕಂಪ, ಕರುಣೆ, ಸಂಬAಧಗಳೆAಬ ಮಾನವೀಯತೆ ಮೌಲ್ಯಗಳ ಪುನರ್ಚೇತನಕ್ಕಾಗಿ ಒಂದಲ್ಲ, ಎರಡಲ್ಲ ಸುಮಾರು ೨೯೮ ಗಂಟೆಗಳ ಸುದೀರ್ಘ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಸುಮಾರು ೯,೨೦೦ ಕಿಲೋಮೀಟರ್ ಏಕಾಂಗಿಯಾಗಿ, ಬಿಸಿಲಲ್ಲಿ ಬಾಡದೆ, ಮಳೆಯಲ್ಲಿ ಎದೆಗುಂದದೆ, ಚಳಿಯಲ್ಲಿ ನಡುಗದೆ, ಮುಂದಿನ ಪಯಣದ ಗಾಢತೆಯ ಅರಿವಿಲ್ಲ, ಕತ್ತಲ ವಾಸ್ತವ್ಯದ ಮಾಹಿತಿ ಇಲ್ಲ, ಸಮಯಕ್ಕೆ ಊಟದ ಚಿಂತೆ ಇಲ್ಲದೆ ‘ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರAಗದ ಚಳವಳಿ’ ಎಂಬ ಧ್ಯೇಯದೊಂದಿಗೆ ಉತ್ತರ ಕರ್ನಾಟಕದ ಬೀದರ್ ಜಿಲ್ಲೆಯ ವನಮಾರ್ಪಳ್ಳಿಯಿಂದ ಒಬ್ಬರು ಯಾತ್ರೆ ಕೈಗೊಂಡಿದ್ದು, ಇವರೇ ವಿವೇಕಾನಂದ ಹೆಚ್.ಕೆ. ಇವರು ಇನ್ನು ಕ್ರಮಿಸಬೇಕಿದೆ ಸುಮಾರು ೩,೦೦೦ ಕಿಲೋಮೀಟರ್‌ಗಳಷ್ಟು..

ಈ ಯಾತ್ರೆಗೆ ಯಾವುದೇ ಸ್ವಾರ್ಥ ಚಿಂತನೆಯಿಲ್ಲ, ಹಣ ಗಳಿಸುವ ಹಂಬಲವಿಲ್ಲ, ಯಾವುದೇ ಪ್ರಶಂಸೆ ಅಥವಾ ಪ್ರಶಸ್ತಿಗಳ ಆಸೆಯೂ ಇಲ್ಲ.. ಹಾಗಾದರೆ ಇನ್ನೇನು ಎಂಬ ನನ್ನ ಪ್ರಶ್ನೆಗೆ, ‘ನೋಡಿ ನಾ ಕನ್ನಡಿಗರೇ, ನನ್ನ ಬದುಕಿನ ಎರಡನೆಯ ಹಂತದಲ್ಲಿ ಈಗಾಗಲೇ ಕಾಲಿರಿಸಿ ಮೂರು ವರುಷವಾಗಿದೆ. ಈ ಬದುಕು ಇನ್ನೆಷ್ಟು ದಿನವೋ ಏನೋ.. ಅನೇಕ ವಿದ್ಯಾರ್ಥಿಗಳಿಗೆ ವಿದ್ಯೆ ಕೊಟ್ಟ ಶಿಕ್ಷಕನ ಮಗ ನಾನು, ಈ ನನ್ನ ಬದುಕಿನಲ್ಲಿ ಸಮಾಜಕ್ಕೆ ಏನಾದರೂ ನೀಡಬೇಕೆಂಬ ಹಂಬಲ ಮನಸಿನಲ್ಲಿ ಹೊಳೆದಾಕ್ಷಣ ನನಗೆ ಕಂಡಿದ್ದು ಇಂದಿನ ವ್ಯವಹಾರಿಕ ಬದುಕಿನಲ್ಲಿ ಕಣ್ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳು..

ಹಾಗಾದರೆ ಅದರ ಪುನರ್ಚೇತನಕ್ಕಾಗಿ ನನ್ನ ಮುಂದಿನ ಬದುಕನ್ನು, ಮುಡುಪಾಗಿಸುವ ನಿಟ್ಟಿನಲ್ಲಿ, ಮೊದಲು ಅದಕ್ಕೆ ಸಂಬAಧಿಸಿದAತೆ ಬರಹಗಳ ಮುಖಾಂತರ ಯುವಪೀಳಿಗೆಯ ಮನಸೆಳೆವ ಪ್ರಯತ್ನಪಟ್ಟೆ. ಆದರೆ, ದುರಾದೃಷ್ಟಕರದಿಂದ ಮೊಬೈಲು, ಅಂತರ್ಜಾಲಗಳ ಸುಳಿಯಲ್ಲಿ ಸಿಲುಕಿ ಯುವಕರು ತಮ್ಮ ಅಮೂಲ್ಯ ಬದುಕಿನ ಪಥಗಳನ್ನು ಬಿಟ್ಟು ಕಾರ್ಗತ್ತಲ ಕಡೆಗೆ ಹೆಜ್ಜೆ ಇಡುತ್ತಿರುವ ಕರಾಳ ಸತ್ಯದ ಅರಿವಾಯಿತು. ಆದ್ದರಿಂದ ಕರ್ನಾಟಕದ ಉದ್ದಗಲ ಕಾಲ್ನಡಿಗೆಯಲ್ಲಿ ಸಂಚರಿಸಿದರೆ ನೇರ ಸಂಪರ್ಕ ಮತ್ತು ಸಂವಾದಗಳಿAದ ಯುವಜನರ ಹಾಗೂ ಸಾರ್ವಜನಿಕರ ಮನಸ್ಸನ್ನು ನೇರವಾಗಿ ಮುಟ್ಟಬಹುದು ಎಂಬ ಭರವಸೆಯೊಂದಿಗೆ ಹೊರಟಿರುವೆ ಎಂದರು.

ಮನಸ್ಸಿನಲ್ಲಿ ನಗು ಬಂತಾದರೂ, ನನಗೆ ನಾನೇ ಬೈದುಕೊಂಡೆ.. ಏಕೆಂದರೆ ಇದೆ ನಮ್ಮೆಲ್ಲರ ಗುಣ! ತ್ಯಾಗಕ್ಕೆ ಮನಸ್ಸಿದ್ದರೂ ನಮಗೆ ಮೈಗಳ್ಳತನ ಹೆಚ್ಚು. ಸಮಾಜಕ್ಕೆ ಮಾನವೀಯ ಮೌಲ್ಯಗಳ ಮಹತ್ವದ ಬಗ್ಗೆ ಸಾರಿ ಹೇಳುವ ಆಸೆ ಇದ್ದರೂ ನನ್ನೊಬ್ಬನಿಂದ ಏನು ಸಾಧ್ಯ ಎಂಬ ಕಾರಣ ಹೇಳಿ ಸುಮ್ಮನಾಗುವವರೇ ನಮ್ಮಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ. ಆದರೆ ಇವರು ಮನಸ್ಸು ಮಾಡಿದರೆ ತನ್ನೊಬ್ಬನಿಂದ ಸಮಾಜಕ್ಕೆ ಏನಾದರೂ ಮಾಡಲು ಸಾಧ್ಯ ಎಂಬುದನ್ನು ಕಾಲ್ನಡಿಗೆ ಮತ್ತು ಸಭೆ, ಸಂವಾದದ ಮುಖಾಂತರ ಜನಮನ ಗೆದ್ದಿದ್ದಾರೆ.

ಶಿಕ್ಷಣ, ರಾಜಕೀಯ, ವೈದ್ಯಕೀಯ, ಪೊಲೀಸ್, ಸರ್ಕಾರಿ ನೌಕರರು, ಸಿನಿಮಾ ನಟರು, ರಾಷ್ಟç-ಅಂತರ ರಾಷ್ಟçಮಟ್ಟದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಇವರೆಲ್ಲರೂ ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ತಿಳಿಸಬೇಕು ಎಂಬುದು ಅವರ ಕೋರಿಕೆ. -ನಾ ಕನ್ನಡಿಗ.. ಸಿದ್ದಾಪುರ