ಮಡಿಕೇರಿ, ಆ. ೩೦ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಇತ್ತೀಚೆಗೆ ೬೨ ನೇ ವಾರ್ಷಿಕ ಮಹಾಸಭೆ ನಡೆಯಿತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಏಕರೂಪ ಕೌರ್ ಅವರು ವೀಡಿಯೋ ಕಾನ್ಫ್ರೆನ್ಸ್ ಮುಖಾಂತರ ಸಂಸ್ಥೆಯ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದರು.

೨೦೨೧ ರ ಮಾರ್ಚ್ ೩೧ ಕ್ಕೆ ಅಂತ್ಯಗೊAಡ ೨೦೨೦-೨೧ ರ ಸಂಸ್ಥೆಯ ವಾರ್ಷಿಕ ಕಾರ್ಯಾಚರಣೆ ಹಾಗೂ ಪರಿಶೋಧಿಸಲ್ಪಟ್ಟ ಲೆಕ್ಕಪತ್ರಗಳ ಪ್ರಮುಖ ಅಂಶದ ಮಾಹಿತಿ ನೀಡಿದರು.

ಸಂಸ್ಥೆಯು ೨೦೨೦-೨೧ ರ ಆರ್ಥಿಕ ವರ್ಷದಲ್ಲಿ ವಿವಿಧ ಸಾಲ ಯೋಜನೆಗಳ ಮೂಲಕ ೪೦೧.೬೬ ಕೋಟಿ ರೂ.ಗಳ ಸಾಲದ ಮಂಜೂರಾತಿ ಮಾಡಿದ್ದು, ಇದರಲ್ಲಿ ರೂ.೩೭೫.೭೭ ಕೋಟಿ ಮೊತ್ತದ ಮಂಜೂರಾತಿಯು ಸೂಕ್ಷö್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಘಟಕಗಳಿಗೆ ಒಳಗೊಂಡಿದೆ. ೪೩೨.೯೬ ಕೋಟಿ ರೂ.ಗಳ ಸಾಲ ವಿತರಿಸಿ, ಒಟ್ಟು ೬೩೮.೬೮ ಕೋಟಿ ರೂ.ಗಳ ವಸೂಲಾತಿ ಮಾಡಿದೆ ಎಂದರು.

ಕೋವಿಡ್-೧೯ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿಯೂ ಸಂಸ್ಥೆಯು ಹಿಂದಿನ ವರ್ಷಕ್ಕಿಂತ ಪ್ರಸಕ್ತ ವರ್ಷದಲ್ಲಿ ೧೮.೪೫ ಕೋಟಿ ರೂ.ಗಳ ಹೆಚ್ಚಿನ ಬಡ್ತಿ ವಸೂಲಾತಿ ಮಾಡಲಾಗಿದೆ. ಹಿಂದಿನ ಆರ್ಥಿಕ ವರ್ಷದಲ್ಲಿದ್ದ ಶೇ.೯.೫೮ ರಷ್ಟು ಒಟ್ಟು ಅನುತ್ಪಾದಕ ಆಸ್ತಿಯು ಪ್ರಸಕ್ತ ವರ್ಷದಲ್ಲಿ ಶೇ.೬.೪೨ ಕ್ಕೆ ಇಳಿದಿದೆ. ಹಾಗೆಯೇ ಕಳೆದ ವರ್ಷ ೫.೧೨ ರಷ್ಟು ಇದ್ದ ನಿವ್ವಳ ಅನುತ್ಪಾದಕ ಆಸ್ತಿಯು ಪ್ರಸಕ್ತ ವರ್ಷದಲ್ಲಿ ಶೇ.೫.೦೯ ಕ್ಕೆ ಇಳಿದಿದೆ. ಸಂಸ್ಥೆಯು ಸ್ಥಾಪಿತ ದಿನದಿಂದ ೨೦೨೧ ರ ಮಾರ್ಚ್, ೩೧ ರವರೆಗೂ ಸಂಸ್ಥೆಯ ಸಂಚಿತ ಮಂಜೂರಾತಿಯು ೧,೭೪,೬೬೨ ಘಟಕಗಳಿಗೆ ೧೮,೨೮೬.೩೮ ಕೋಟಿ ರೂ.ಗಳಷ್ಟಾಗಿದೆ. ಈ ವರ್ಷದಲ್ಲಿ ಸಂಸ್ಥೆಯು ೪೨.೯೦ ಕೋಟಿ ರೂ.ಗಳಷ್ಟು ನಿವ್ವಳ ಲಾಭ ಗಳಿಸಿದೆ.

ಸಂಸ್ಥೆಯು ಸ್ಥಾಪಿತ ದಿನದಿಂದ ಇಲ್ಲಿಯವರೆಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ೨೧,೮೯೨ ಉದ್ಯಮಿಗಳಿಗೆ ೨,೨೬೬.೧೩ ಕೋಟಿ ರೂ.ಗಳಿಗೂ ಅಧಿಕ ಸಾಲಗಳ ಮಂಜೂರಾತಿ ನೆರವನ್ನು ನೀಡಿದೆ. ಸಂಸ್ಥೆಯು ಆರಂಭದಿAದ ಇಲ್ಲಿಯವರೆಗೂ ೩೧,೦೬೯ ಕ್ಕೂ ಹೆಚ್ಚಿನ ಮಹಿಳಾ ಉದ್ಯಮಿದಾರರಿಗೆ ೪,೩೬೮.೪೭ ಕೋಟಿ ರೂ.ಗಳ ಸಾಲ ಮಂಜೂರಾತಿ ಮಾಡಿದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತ ೪೧,೧೫೭ ಉದ್ಯಮಿಗಳಿಗೂ ಇಲ್ಲಿಯವರೆಗೆ ೧,೭೯೦ ಕೋಟಿ ರೂ.ಗಳ ಸಾಲ ಮಂಜೂರಾತಿ ನೆರವು ಒದಗಿಸಿದೆ. ಈ ವರ್ಷದಲ್ಲಿ ಸಂಸ್ಥೆಯು ರಾಜ್ಯ ಸರ್ಕಾರದ ಬೆಂಬಲದೊAದಿಗೆ ರೂಪಿತವಾದ ವಿವಿಧ ಯೋಜನೆಗಳಲ್ಲಿ, ೦೮ ಮಹಿಳಾ ಉದ್ಯಮಿಗಳಿಗೆ ೧೧ ಕೋಟಿ ರೂ.ಗಳ ಮಂಜೂರಾತಿ ಮಾಡಲಾಗಿದೆ. ೨೦೨೧ ರ ಮಾರ್ಚ್, ೩೧ ರ ಅಂತ್ಯದವರೆಗೆ ೮೭೪.೫೯ ಕೋಟಿ ರೂ.ಗಳ ಸಂಚಿತ ನೆರವನ್ನು ೧,೨೧೫ ಮಹಿಳಾ ಉದ್ಯಮಿಗಳಿಗೆ ಒದಗಿಸಲಾಗಿದೆ. ಹಾಗೆಯೇ ಈ ವರ್ಷದಲ್ಲಿ ೧೯೨ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ೧೬೧.೦೨ ಕೋಟಿ ರೂ.ಗಳ ಸಾಲ ಮಂಜೂರು ಮಾಡಲಾಗಿದೆ. ಈ ವರ್ಷದ ಅಂತ್ಯದವರೆಗೆ ೧,೭೭೭.೫೮ ಕೋಟಿ ರೂ.ಗಳ ಸಂಚಿತ ನೆರವನ್ನು ೩,೨೭೯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ನೀಡಲಾಗಿದೆ ಎಂದು ವಿವರಿಸಿದರು.

ಸೂಕ್ಷö್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಘಟಕಗಳಿಗೆ ಶೇ.೬ ರ ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ ೧೮೯ ಘಟಕಗಳಿಗೆ ೧೮೪.೬೬ ಕೋಟಿ ರೂ.ಗಳ ಸಾಲ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ ಹಣಕಾಸು ವರ್ಷದ ಅಂತ್ಯದವರೆಗೆ, ೬೯೯ ಉದ್ಯಮಗಳಿಗೆ ೭೫೦.೧೮ ಕೋಟಿ ರೂ.ಗಳ ಸಂಚಿತ ನೆರವು ನೀಡಲಾಗಿದೆ.

೨೦೨೦-೨೧ ರ ಹಣಕಾಸು ವರ್ಷದಲ್ಲಿ ಕರ್ನಾಟಕ ಸರ್ಕಾರವು ಸಂಸ್ಥೆಗೆ ೧೦೦ ಕೋಟಿ ರೂ.ಗಳ ಸಮಾನ ಬಂಡವಾಳ ಹಾಗೂ ೧೭೨.೨೫ ಕೋಟಿ ರೂ.ಗಳ ಬಡ್ಡಿ ಸಹಾಯಧನದ ನೆರವನ್ನು ಸಂಸ್ಥೆಯ ವಿವಿಧ ಯೋಜನೆಗಳಡಿಯಲ್ಲಿ ಒದಗಿಸಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯಮಿಗಳು ಸ್ಥಾಪಿಸುವ ಜವಳಿ ಮತ್ತು ಕೈಮಗ್ಗ ಘಟಕಗಳಿಗೆ ವಿಶೇಷ ಹಣಕಾಸಿನ ಯೋಜನೆಯಡಿ ಸರ್ಕಾರವು ೨೦.೫೬ ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದೆ ಎಂದರು.

೨೦೨೦ ರ ಏಪ್ರಿಲ್, ೦೧ ರಿಂದ ೨೦೨೦ ರ ಆಗಸ್ಟ್, ೩೧ ರ ನಡುವಿನ ಅವಧಿಯಲ್ಲಿ ಪಾವತಿಸಬೇಕಿದ್ದ ಅಸಲು ಕಂತುಗಳನ್ನು ಮುಂದೂಡಲಾಯಿತು. ಹಾಗೂ ೨೦೨೦ ರ ಸೆಪ್ಟೆಂಬರ್, ೧೦ ರಂದು ಪಾವತಿಸಬೇಕಾದ ಬಡ್ಡಿ ಮತ್ತು ಅಸಲು ಕಂತಿನೊAದಿಗೆ ೨೦೨೦ ರ ಏಪ್ರಿಲ್, ೦೧ ರಿಂದ ೨೦೨೦ರ ಆಗಸ್ಟ್, ೩೧ ರ ನಡುವಿನ ಅವಧಿಯಲ್ಲಿ ಪಾವತಿಸಬೇಕಾಗಿದ್ದ ಬಡ್ಡಿ ಬಾಕಿಯನ್ನು ೨೦೨೦ ರ ಸೆಪ್ಟೆಂಬರ್, ೧೦ ರಂದು ಪಾವತಿಸಲು ಅನುವು ನೀಡಲಾಯಿತು.

ಕರ್ನಾಟಕ ರಾಜ್ಯ ಸರ್ಕಾರದ ಬಡ್ಡಿ ಸಹಾಯಧನ ಯೋಜನೆಗೊಳಪಡುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳಾ ಉದ್ದಿಮೆದಾರರು, ಮೊದಲ ಪೀಳಿಗೆ, ಸಾಮಾನ್ಯ ಯೋಜನೆಯಡಿ ಸಾಲಗಳಿಗೆ ಮರುಪಾವತಿಯ ಕಂತುಗಳಲ್ಲಿ ಬಡ್ಡಿ ಸಹಾಯಧನ ಹೊರತುಪಡಿಸಿ ಉಳಿದ ಮೊತ್ತವನ್ನು ಪಾವತಿಸಲು ಅನುವು ಮಾಡಲಾಯಿತು.

೨೦೨೧-೨೨ನೇ ವಾರ್ಷಿಕ ವರ್ಷದ ಗುರಿಗಳು; ಆರ್ಥಿಕ ವರ್ಷ ೨೦೨೦-೨೧ ರ ಕೋವಿಡ್-೧೯ ಸಾಂಕ್ರಾಮಿಕ ರೋಗವು ಆಘಾತಕಾರಿ ರೀತಿಯಲ್ಲಿ ದೇಶದ ಆರ್ಥಿಕ ಮತ್ತು ಆರೋಗ್ಯ ಬಿಕ್ಕಟ್ಟನ್ನು ಸೃಷ್ಟಿಸಿರುತ್ತದೆ. ಕೋವಿಡ್-೧೯ ಸಾಂಕ್ರಾಮಿಕ ಬಿಕ್ಕಟ್ಟನ್ನು ನಿಗ್ರಹಿಸಲು ಕೈಗೊಂಡ ಅಗತ್ಯವಾದ ಕ್ರಮಗಳು ಆರ್ಥಿಕ ಕುಸಿತವನ್ನು ಉಂಟು ಮಾಡಿದ್ದು, ಆರ್ಥಿಕ ಚೇತರಿಕೆ ಅಂತರ್ಗತ ಮತ್ತು ಸುಸ್ಥಿರವಾಗಿಸಲು, ಹಣಕಾಸು ಸೇರ್ಪಡೆ ನೀತಿಯು ಆಧ್ಯತೆಯಾಗಿ ಮುಂದುವರಿಯುತ್ತದೆ. ೨೦೨೦-೨೧ ರಲ್ಲಿ ರಾಜ್ಯ ಸರ್ಕಾರದ ಬೆಂಬಲದೊAದಿಗೆ ಸೂಕ್ಷö್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಘಟಕಗಳಿಗೆ ನವೀಕೃತ ಶೇ.೬ರ ಬಡ್ಡಿ ಸಹಾಯ ಧನ ಯೋಜನೆಯಿಂದ ಮುಂಬರುವ ಆರ್ಥಿಕ ವರ್ಷದಲ್ಲಿ ಹೆಚ್ಚಿನ ಮಂಜೂರಾತಿ ಹಾಗೂ ವಿತರಣೆಯ ಗುರಿ ಸಾಧಿಸಲು ಅನುಕೂಲವಾಗುವ ನಿರೀಕ್ಷೆಯಿದೆ.

೨೦೨೧-೨೨ ಆರ್ಥಿಕ ವರ್ಷದಲ್ಲಿ ಸಂಸ್ಥೆಯು ೭೦೦ ಕೋಟಿ ರೂ.ಗಳ ಮಂಜೂರಾತಿ ಗುರಿಯನ್ನು ಹೊಂದಿದ್ದು, ಕರ್ನಾಟಕ ಸರ್ಕಾರದ ಬಡ್ಡಿ ಸಹಾಯಧನ ಯೋಜನೆಗಳ ಯಶಸ್ವಿ ಅನುಷ್ಠಾನದೊಂದಿಗೆ ಸಮಾಜದ ವಿವಿಧ ವರ್ಗಗಳಿಂದ ಸ್ಥಾಪಿಸಲ್ಪಡುವ ಸೂಕ್ಷö್ಮ ಸಣ್ಣ ಹಾಗೂ ಮಧ್ಯಮ ಗಾತ್ರದ ಘಟಕಗಳಿಗೆ ನೆರವು ನೀಡುವ ಕಡೆಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲಿದ್ದು, ಅಲ್ಲದೆ ಅನುತ್ಪಾದಕ ಆಸ್ತಿಗಳನ್ನು ಮತ್ತಷ್ಟು ಕಡಿಮೆಗೊಳಿಸಲು ಸಂಸ್ಥೆಯು ಹೆಚ್ಚಿನ ಒತ್ತು ನೀಡಲಿದೆ ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.