ಸೋಮವಾರಪೇಟೆ, ಆ. ೩೦: ಇಲ್ಲಿನ ಇನ್ನರ್ ವೀಲ್‌ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿರುವ ಬಾಣಂತಿಯರಿಗೆ ಹಣ್ಣುಹಂಪಲು ಮತ್ತು ಶಿಶುಗಳಿಗೆ ಬೆಚ್ಚನೆಯ ಬಟ್ಟೆ ವಿತರಿಸಲಾಯಿತು. ಇದೇ ಸಂದರ್ಭ ಸ್ತನ್ಯಪಾನದ ಕುರಿತು ಜಾಗೃತಿ ಮೂಡಿಸುವ ಫಲಕವನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಕ್ಲಬ್ ಅಧ್ಯಕ್ಷೆ ಆಶಾ ಯೋಗೇಂದ್ರ, ಕಾರ್ಯದರ್ಶಿ ಅಮೃತ ಕಿರಣ್, ಮಾಜಿ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಪದಾಧಿಕಾರಿಗಳಾದ ಕಾವೇರಿ ಸುರೇಶ್, ನಂದಿನಿ ಗೋಪಾಲ್, ವೀಣಾ ಮನೋಹರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.