ಮುಳ್ಳೂರು, ಆ. ೩೦: ಬ್ಯಾಡಗೊಟ್ಟ ಗ್ರಾ.ಪಂ. ಆವರಣದಲ್ಲಿ ಸಂಜೀವಿನಿ ಯೋಜನೆಯ ಸ್ವಸಹಾಯ ಒಕ್ಕೂಟದ ಮಹಿಳಾ ಸದಸ್ಯರಿಗೆ ಸ್ವಚ್ಛತಾ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಅಜಾದಿಕಾ ಅಮೃತ್ ಮಹೋತ್ಸವದ ಪ್ರಯುಕ್ತ ಪ್ರಧಾನ ಮಂತ್ರಿಗಳೊAದಿನ ಸಂವಾದ ನೇರ ಪ್ರಸಾರ ವೀಕ್ಷಿಸುವ ಅವಕಾಶ ಮಾಡಲಾಯಿತು.

ಮಾಹಿತಿ ಕಾರ್ಯಾಗಾರದಲ್ಲಿ÷ಮಾನವ ಸಂಪನ್ಮೂಲ ಅಭಿವೃದ್ಧಿಯ ಕುರಿತು ಸ್ವಚ್ಛ ಭಾರತ್ ಮಿಷಿನ್ ಜಿಲ್ಲಾ ಸಂಯೋಜನಾಧಿಕಾರಿ ಡಿ.ಡಿ. ಪೆಮ್ಮಯ್ಯ ಮಾಹಿತಿ ನೀಡಿ, ಸ್ವಚ್ಛತಾ ಆಂದೋಲನದಲ್ಲಿ ಗ್ರಾ.ಪಂ. ಗಳೊಂದಿಗೆ ಸ್ವಸಹಾಯ ಸಂಘಗಳ ಸದಸ್ಯರುಗಳು ಸಹಭಾಗಿಗಳಾಗಿ ಸ್ವಚ್ಛ ಗ್ರಾಮ ಯೋಜನೆಗಳನ್ನು ಜನರಿಗೆ ತಲುಪಿಸಲು ಕೈಜೋಡಿಸಬೇಕೆಂದರು. ಗ್ರಾ.ಪಂ. ಸದಸ್ಯ ಮಹಮ್ಮದ್ ಹನೀಫ್ ಮತ್ತು ಗ್ರಾ.ಪಂ. ಪಿಡಿಒ ಹರೀಶ್ ಕಾರ್ಯಕ್ರಮದ ಕುರಿತು ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷೆ ಪಾವನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ದಿನೇಶ್‌ಕುಮಾರ್, ಗ್ರಾ.ಪಂ. ಕಾರ್ಯದರ್ಶಿ ದೇವರಾಜ್, ಒಕ್ಕೂಟದ ಅಧ್ಯಕ್ಷೆ ಸರೋಜಮ್ಮ ಒಕ್ಕೂಟದ ಸೇವಾ ಪ್ರತಿನಿಧಿಗಳು, ಸ್ವಸಹಾಯ ಗುಂಪಿನ ಸದಸ್ಯರು, ಗ್ರಾ.ಪಂ. ಸಿಬ್ಬಂದಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.