ಕುಶಾಲನಗರ, ಆ. ೩೦: ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಬೇಕು ಎಂದು ಆಗ್ರಹಿಸಿ ನಿಸರ್ಗಧಾಮ ಟೂರಿಸ್ಟ್ ಸೆಂಟರ್‌ನ ವರ್ತಕರು ಭಾನುವಾರ ಎನ್.ಟಿ.ಸಿ. ಮುಂಭಾಗ ಪ್ರತಿಭಟನೆ ನಡೆಸಿದರು. ಸರ್ಕಾರ ಘೋಷಿಸಿರುವ ವೀಕೆಂಡ್ ಲಾಕ್‌ಡೌನ್ ಅವೈಜ್ಞಾನಿಕ ವಾಗಿದ್ದು, ಜನಸಾಮಾನ್ಯರಿಗೆ ಮತ್ತು ಪ್ರವಾಸೋದ್ಯಮವನ್ನೇ ಅವಲಂಭಿಸಿರು ವವರಿಗೆ ಭಾರೀ ತೊಂದರೆಯಾಗು ತ್ತಿದೆ. ಸರ್ಕಾರ ಕೂಡಲೇ ವೀಕೆಂಡ್ ಲಾಕ್‌ಡೌನ್ ತೆರವುಗೊಳಿಸಬೇಕು ಎಂದು ಎನ್.ಟಿ.ಸಿ. ವರ್ತಕರು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಎನ್.ಟಿ.ಸಿ. ಮಾಲೀಕ ಅಬ್ದುಲ್ ಸಲಾಂ ರಾವತರ್, ಈಗಾಗಲೇ ಕೋವಿಡ್-೧೯ ಒಂದನೇ ಮತ್ತು ಎರಡನೇ ಅಲೆಯ ಹೊಡೆತದಿಂದಾಗಿ ಉದ್ಯಮಿಗಳು, ವ್ಯಾಪಾರಸ್ಥರು ಇನ್ನೂ ಚೇತರಿಸಿಕೊಂಡಿಲ್ಲ. ಇದೀಗ ಸರ್ಕಾರ ಶನಿವಾರ ಹಾಗೂ ಭಾನುವಾರದಂದು ಲಾಕ್‌ಡೌನ್ ಘೋಷಿಸಿ, ಪ್ರವಾಸೋದ್ಯಮವನ್ನು ಅವಲಂಭಿಸಿರುವವರ ಸಾವಿರಾರು ಜನರನ್ನು ಸಂಕಷÀ್ಟಕ್ಕೀಡು ಮಾಡಿದೆ. ಸರ್ಕಾರ ಇನ್ನಾದರೂ ತೆರಿಗೆ ಪಾವತಿ ಮಾಡುವವರ ಕಷ್ಟಗಳನ್ನು ಅರಿತು ವೀಕೆಂಡ್ ಲಾಕ್ ಡೌನ್ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ೩೦ಕ್ಕೂ ಹೆಚ್ಚು ವರ್ತಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.