ಮಡಿಕೇರಿ, ಆ.೩೦: ನಗರದ ಜನರಲ್ ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನಾಚರಣೆಯನ್ನು ರಾಷ್ಟಿçÃಯ ಕ್ರೀಡಾ ದಿನವನ್ನಾಗಿ ಆಚರಿಸಲಾಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ಗುರುಸ್ವಾಮಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಪ್ರತಿಯೊಬ್ಬರಿಗೂ ಆಹಾರ ಎಷ್ಟು ಮುಖ್ಯವೋ, ಅದೇ ರೀತಿ ದೇಹದ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆ ಅತ್ಯವಶ್ಯಕ. ಹಾಕಿ, ಓಟ, ಬ್ಯಾಡ್ಮಿಂಟನ್ ಹೀಗೆ ಹಲವು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಬೆಳವಣಿಗೆ ಜೊತೆಗೆ ಮಾನಸಿಕ ನೆಮ್ಮದಿಗೆ ಸಹಕಾರಿಯಾಗಲಿದೆ.
ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ರಾಷ್ಟç ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದಾಗಿದೆ ಎಂದು ನುಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಕೂಡಿಗೆ ಕ್ರೀಡಾ ವಸತಿ ಶಾಲೆಯ ಮುಖ್ಯ ಶಿಕ್ಷಕ ಅಂತೋಣಿ ಡಿಸೋಜ ಅವರು ಮಾತನಾಡಿದರು.
ಕೂಡಿಗೆಯ ಕ್ರೀಡಾ ವಸತಿ ಶಾಲೆಯ ಮುಖ್ಯ ಶಿಕ್ಷಕ ದೇವುಕುಮಾರ್, ಜಿಮ್ನಸ್ಟಿಕ್ ತರಬೇತುದಾರರಾದ ಸುರೇಶ್, ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದ ತರಬೇತಿದಾರರಾದ ಸುಬ್ಬಯ್ಯ, ನಗರದ ಕ್ರೀಡಾ ವಸತಿ ಶಾಲೆಯ ಹಾಕಿ ತರಬೇತಿದಾರರಾದ ಎಂ.ಬಿAದ್ಯಾ, ಅಥ್ಲೆಟಿಕ್ ತರಬೇತುದಾರರಾದ ಮಹಾಬಲ ಇತರರು ಇದ್ದರು. ಮೋಹನ್ ನಿರೂಪಿಸಿ, ಸ್ವಾಗತಿಸಿದರು. ಹಾಕಿ ಕ್ರೀಡಾ ತರಬೇತುದಾರರಾದ ಬಿ.ಎಸ್.ವೆಂಕಟೇಶ್ ವಂದಿಸಿದರು.
ವಿಜೇತರು: ಸ್ಕಾ÷್ವಷ್ ವಿಭಾಗದಲ್ಲಿ ಜಿತೇಂದ್ರ (ಪ್ರಥಮ), ನಾಚಪ್ಪ (ದ್ವಿತೀಯ), ಷಟಲ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಜಂಶದ್ ಮತ್ತು ಯತೀಶ್ (ಪ್ರಥಮ), ಅಯ್ಯಪ್ಪ ಮತ್ತು ಜಿತೇಂದ್ರ (ದ್ವಿತೀಯ), ಷಟಲ್ ಬ್ಯಾಡ್ಮಿಂಟನ್ (ಡಬಲ್ಸ್) ನಿಲೇಶ್ ಜಾಯ್ ಮತ್ತು ಆದ್ಯ ಲಿವಿನ್ (ಪ್ರಥಮ), ಕಾವೇರಿ ಮೋಹನ್ ಮತ್ತು ರೇಷ್ಮಾ ದೇವಯ್ಯ (ದ್ವಿತೀಯ), ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಪ್ರಜ್ವಲ್(ಪ್ರಥಮ), ಚೇತನ್ (ದ್ವಿತೀಯ), ಟೇಬಲ್ ಟೆನ್ನಿಸ್ (ಡಬಲ್ಸ್) ಪ್ರಜ್ವಲ್ ಮತ್ತು ಬಿದ್ದಯ್ಯ (ಪ್ರಥಮ), ಚೇತನ್ ಮತ್ತು ಅಜಿತ್ (ದ್ವಿತೀಯ),
ಮಹಿಳೆಯರ ವಿಭಾಗದಲ್ಲಿ ಟೇಬಲ್ ಟೆನ್ನಿಸ್ ತನ್ವಿಕಾ (ಪ್ರಥಮ), ಪೂವಮ್ಮ, ರೇನು (ದ್ವಿತೀಯ), ಟೇಬಲ್ ಟೆನ್ನಿಸ್ (ಡಬಲ್ಸ್) ತನ್ವಿಕಾ ಮತ್ತು ಪೂವಿ (ಪ್ರಥಮ), ಪೂವಮ್ಮ ಮತ್ತು ವೀಕ್ಷಿತ (ದ್ವಿತೀಯ) ಸ್ಥಾನ ಪಡೆದಿದ್ದಾರೆ.